ಪ್ರಗತಿವಾಣಿ ಕೊಪ್ಪಳ
ಕೊಪ್ಪಳ: ಕೊಪ್ಪಳ
ಕಲಿಯುವ ವಿಷಯ ಮೇಲೆ ನಿಷ್ಠೆ, ಆಸಕ್ತಿ ಇರಬೇಕು. ಬುದ್ಧಿ ಸದುಪಯೋಗ ಪಡಿಸಿಕೊಂಡು ಜ್ಞಾನ ಸಂಪಾದಿಸಿಕೊಳ್ಳಬೇಕು ಎಂದು ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ಮತ್ತು ಹುಬ್ಬಳ್ಳಿ ಕಾನೂನು ಮಹಾವಿದ್ಯಾಲಯದ ಸಿಂಡಿಕೇಟ್ ಸದಸ್ಯ ಎಸ್.ಎನ್.ಪರಾಂಡೆ ಹೇಳಿದರು.
ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ ಎಂಬುದನ್ನು ಮನಗಾಣಬೇಕು. ವಿದ್ಯೆ ಎಂದಿಗೂ ಕಳೆದುಕೊಳ್ಳದ ಸಂಪತ್ತು. ಗೌರವ ಮತ್ತು ಅಸ್ತಿತ್ವವನ್ನು ಸಾಬೀತುಪಡಿಸಲು ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು. ಸಾಮಾಜಿಕ ಜೀವನದಲ್ಲಿ ಅವಿಭಾಜ್ಯ ಅಂಗವಾಗಿರಬೇಕು. ಸಮಯ ಪಾಲನೆ, ಸಂಯಮ ಹಾಗೂ ಶಿಸ್ತು ರೂಢಿಸಿಕೊಳ್ಳಬೇಕು ಎಂದರು.
ಡಿಬಿಎಚ್‌ಪಿ ಸಲಹಾ ಸಮಿತಿ ಮುಖ್ಯಸ್ಥ ಹಾಗೂ ಹುಬ್ಬಳ್ಳಿ-ಧಾರವಾಡ ಮಾಜಿ ಮೇಯರ್ ಈರೇಶ ಬಿ.ಅಂಚಟಗೇರಿ ಮಾತನಾಡಿ, ಸಮಾಜದಲ್ಲಿ ಶಿಕ್ಷಕರು, ವಕೀಲರಿಗೆ ತನ್ನದೇಯಾದ ಮನ್ನಣೆ ಇದೆ. ವಿದ್ಯಾರ್ಥಿಗಳು ಜೀವನದಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಂಡು ವೃತ್ತಿಯಲ್ಲಿ ಪ್ರಾಮಾಣಿಕತೆ ರೂಢಿಸಿಕೊಳ್ಳಬೇಕು ಎಂದರು.
ಕಿಮ್ಸ್‌ನ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಅಜಯಕುಮಾರ ಮಾತನಾಡಿದರು.
ಈ ಸಂದರ್ಭ ಡಿಬಿಎಚ್‌ಪಿ ಸಭಾದ ಕಾರ್ಯದರ್ಶಿ ಎಸ್.ರಾಧಾಕೃಷ್ಣನ್, ಪ್ರಾಚಾರ್ಯೆ ಉಷಾದೇವಿ ಹಿರೇಮಠ, ಉಪಪ್ರಾಚಾರ್ಯ ಎಸ್.ಎಂ.ಬಸವರಾಜ, ವಿದ್ಯಾರ್ಥಿ ಒಕ್ಕೂಟದ ಮುಖ್ಯ ಕಾರ್ಯದರ್ಶಿ ಸುಜಾತಾ ಬಿ., ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಅಧ್ಯಕ್ಷ ಬಿ.ವೈ.ಅಳ್ಳಳ್ಳಿ, ಉಪನ್ಯಾಸಕರಾದ ಕೆ.ಶೇಷಾದ್ರಿ,, ಶಿಲ್ಪಾ ಬಿರಾದಾರ, ಯು.ಎಸ್.ಸೊಪ್ಪಿಮಠ, ಸಯ್ಯದ್ ಅಮೀರ್ ಖುಸ್ರೋ, ಲತಾ, ಬೋಧಕೇತರ ಸಿಬ್ಬಂದಿ ಸೇರಿದಂತೆ ಮತ್ತಿತರರು ಇದ್ದರು.
=================
Post a Comment