ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಮಹಿಳೆ ತನ್ನ ಮಗುವನ್ನು 9 ತಿಂಗಳು ಹೊತ್ತು ಹೆತ್ತು ಸಾಕಿ ಸಲುಹುತ್ತಾಳೆ. ಶಾಲೆಯಲ್ಲಿ ಮಗುವಿನ ಹೆಸರು ನಮೂದಿಸುವಾಗ ತಂದೆಯ ಹೆಸರು ಬರೆಸುತ್ತಾಳೆ. ಅಂಥ ತ್ಯಾಗದ ಗುಣ ಇರುವುದು ಮಹಿಳೆಯರಿಗಷ್ಟೆ. ಅದಕ್ಕೆ ಶಿಶುಪಾಲನ ಕೇಂದ್ರದ ಕೇರ್ ಟೇಕರ್‌ಗಳನ್ನು ಮಹಿಳೆಯರನ್ನೆ ಆಯ್ಕೆ ಮಾಡಿದೆ ಎಂದು ತಾಪಂ ಆಡಳಿತಾಧಿಕಾರಿ ಮಲ್ಲಪ್ಪ ತೊದಲಬಾಗಿ ಹೇಳಿದರು.
ಇಲ್ಲಿನ ತಾಪಂ ಸಾಮರ್ಥ್ಯ ಸೌಧದಲ್ಲಿ ಯಲಬುರ್ಗಾ- ಕುಕನೂರ ತಾಲೂಕಿನ ಗ್ರಾಪಂ ಶಿಶುಪಾಲನ ಕೇಂದ್ರದ ಕೇರ್ ಟೇಕರ್‌ಗಳಿಗೆ ಗುರುವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರ ಇಂಥ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತಂದಿದ್ದು, ಇದೊಂದು ಸುವರ್ಣಾವಕಾಶ. ಶಿಶುಪಾಲನ ಕೇಂದ್ರಕ್ಕೆ ಬರುವ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭ ತಾಪಂ ಇಒ ಸಂತೋಷ ಪಾಟೀಲ್, ಸಿಡಿಪಿಒ ಸಿಂಧು ಎಲಿಗಾರ, ಮೇಲ್ವಿಚಾರಕರಾದ ಜಯಲಕ್ಷ್ಮಿ, ಪ್ರೇಮಲತಾ, ತರಬೇತುದಾರರಾದ ಭೀಮಣ್ಣ ಹವಳಿ, ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ ಸೇರಿದಂತೆ ಇತರರಿದ್ದರು.
Post a Comment