ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ತಾಲೂಕಿನ ಬೋದೂರು ಗ್ರಾಮದ ಸಹಿಪ್ರಾ ಶಾಲೆಯ ಶಿಕ್ಷಕ ಗವಿಸಿದ್ದಪ್ಪ ಮ್ಯಾದನೇರಿ ಶಾಲೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರಿಗೆ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಂದ ಅದ್ಧೂರಿ ಬೀಳ್ಕೋಡುಗೆ ಸಮಾರಂಭ ಶುಕ್ರವಾರ ನಡೆಯಿತು.
ಮುಖ್ಯಶಿಕ್ಷಕ ಸಿದ್ದಪ್ಪ ಸಜ್ಜಗಾರ ಮಾತನಾಡಿ, ಶಾಲೆಯಲ್ಲಿ ಶಿಕ್ಷಕ, ವಿದ್ಯಾರ್ಥಿಗಳ ಸಂಬಂಧ ಪೋಷಕ ಮಗುವಿನ ಸಂಬಂಧವಾಗಿರುತ್ತದೆ. ಒಬ್ಬ ಸಹೋದ್ಯೋಗಿ ವರ್ಗವಾದಾಗ ಮನಸಿಗೆ ದುಃಖವಾಗುತ್ತದೆ. ಆದರೆ, ವರ್ಗಾವಣೆ ಅನಿವಾರ್ಯ, ಬದಲಾವಣೆ ಜಗದ ನಿಯಮ. ಶಾಲೆ ಮತ್ತು ವಿದ್ಯಾರ್ಥಿಗಳ ಏಳಿಗೆಯಲ್ಲಿ ಸಿಂಹಪಾಲು ಎಂದರು. ಶಿಕ್ಷಕರಾದ ಸತಿಶ್ ಭಟ್, ವಿನಾಯಕ ನಾಯ್ಕ ಮಾತನಾಡಿದರು.
ವರ್ಗಗೊಂಡ ಶಿಕ್ಷಕರಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು. ಇದೇ ವೇಳೆ ಬೇರೆ ಶಾಲೆಗೆ ವರ್ಗಾವಣೆಗೊಂಡ ಕೃಷ್ಣಾಪುರ ಶಿಕ್ಷಕ ಶಿವಪ್ಪ, ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ, ನಿವೃತ್ತಿ ಹೊಂದಿದ ಬೋದೂರು ಅಂಗನವಾಡಿ ಕಾರ್ಯಕರ್ತೆ ಲಲಿತಾ ಪತ್ತಾರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಗ್ರಾಪಂ ಅಧ್ಯಕ್ಷೆ ಜ್ಯೋತಿ ಕೊಬ್ಲರ್, ಉಪಾಧ್ಯಕ್ಷ ನಿರುಪಾದೆಪ್ಪ ತಳವಾರ್, ಸದಸ್ಯ ಸೋಮನಗೌಡ ಗೌಡ್ರ, ಎಸ್ಡಿಎಂಸಿ ಅಧ್ಯಕ್ಷ ಭೀಮನಗೌಡ ಗೌಡ್ರ, ಮುಖಂಡ ಷಡಕ್ಷರಯ್ಯ ಹಿರೇಮಠ, ಶಿಕ್ಷಕರಾದ ಧರ್ಮಣ್ಣ ಬಿಂಗಿ, ಸತೀಶ ಭಟ್, ವಿನಾಯಕ, ಪ್ರಭು ನಿಡಶೇಸಿ, ಸೋಮು ಗೌಡ್ರ, ಪತ್ರಕರ್ತ ಎನ್.ಬಸವರಾಜ ಸೇರಿದಂತೆ ಇತರರಿದ್ದರು.
Post a Comment