ಕರ್ನಾಟಕ ಕೃಷಿ ಪದವೀಧರ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷರಾಗಿ ಬಸವರಾಜ ಗದುಗಿನ ಆಯ್ಕೆ


ಪ್ರಗತಿವಾಣಿ ಕೊಪ್ಪಳ
ಕೊಪ್ಪಳ: ಜಿಲ್ಲಾ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ಕರ್ನಾಟಕ ಕೃಷಿ ಪದವೀಧರರ ಅಧಿಕಾರಿಗಳ ಸಂಘದ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆಯಿತು. ಬಸವರಾಜ ಗದುಗಿನ (ಅಧ್ಯಕ್ಷ), ನಿಂಗಪ್ಪ (ಉಪಾಧ್ಯಕ್ಷ), ಸುಧಾಕರ ಯಲಮೂಟಿ (ರಾಜ್ಯಪ್ರತಿನಿಧಿ), ಮುತ್ತಣ್ಣ ಈಳಿಗೇರ್ (ಕಾರ್ಯದರ್ಶಿ), ವೀರೇಶ ಪಟ್ಟೇದ (ಜಂಟಿ ಕಾರ್ಯದರ್ಶಿ), ಶ್ರೀದೇವಿ ಶಿರೂರು (ಖಜಾಂಚಿ) ಆಯ್ಕೆಯಾದ ಇವರನ್ನು ಸನ್ಮಾನಿಸಲಾಯಿತು. ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಕೊಪ್ಪಳ, ಉಪ ಕೃಷಿನಿರ್ದೇಶಕ ಸಹದೇವ ಯರಗೊಪ್ಪ ಹಾಗೂ ಜಿಲ್ಲೆಯ ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ಅಧಿಕಾರಿಗಳು ಇದ್ದರು.
=======

0/Post a Comment/Comments