ಹಿರೇವಂಕಲಕುಂಟಾ ಗ್ರಾಪಂಗೆ ಹುಲಿಗೆಮ್ಮ ಅಧ್ಯಕ್ಷೆ, ಮಂಜುನಾಥ ಉಪಾಧ್ಯಕ್ಷರಾಗಿ ಆಯ್ಕೆ


ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ತಾಲೂಕಿನ ಹಿರೇವಂಕಲಕುಂಟಾ ಗ್ರಾಮ ಪಂಚಾಯತಿಗೆ ಅಧ್ಯಕ್ಷರಾಗಿ ಹುಲಿಗೆಮ್ಮ ಬಸವರಾಜ ತಳವಾರ್, ಉಪಾಧ್ಯಕ್ಷರಾಗಿ ಮಂಜುನಾಥ ರುದ್ರಯ್ಯ ಶಾಸ್ತ್ರೀಹಿರೇಮಠ ಆಯ್ಕೆಯಾದರು.

ಇದೇ ವೇಳೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಮತ್ತು ಸದಸ್ಯರನ್ನು ಸನ್ಮಾನಿಸಲಾಯಿತು. ಬೆಂಬಲಿಗರಿಂದ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಲಾಯಿತು.
ಚುನಾವಣಾಧಿಕಾರಿ ಗೀತಾ ಅಯ್ಯಪ್ಪ, ಪಿಡಿಒ ಗೊಣೆಪ್ಪ ಜಿರ್ಲಿ, ಪ್ರಮುಖರಾದ ವೆಂಕಟೇಶ ವಾಲ್ಮೀಕಿ, ಆನಂದ ಈಳಿಗೇರ್, ಗಾಳೆಪ್ಪ ಓಜನಹಳ್ಳಿ, ಬಸವರಾಜ ತಳವಾರ್, ಬಾಳಪ್ಪ ಬಚ್ಚಲುಮನಿ, ರಮೇಶ ಚಿಣಗಿ, ಕುಂಟೆಪ್ಪ ಹೂನೂರು, ಶಿವಕುಮಾರ್ ಗೌಡ್ರ, ಪರಶುರಾಮ ಚಿಣಗಿ ಹಾಗೂ ಸದಸ್ಯರು ಸೇರಿ ಇತರರಿದ್ದರು.

0/Post a Comment/Comments