ಏಳು ಗ್ರಾಮ ಪಂಚಾಯತಿಗಳಿಗೆ ಸೋಮವಾರ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಿತು.


ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ:
ಹಿರೇಅರಳಿಹಳ್ಳಿ: ಹಿರೇಅರಳಿಹಳ್ಳಿ ಗ್ರಾಮದ ಗ್ರಾಪಂ ಅಧ್ಯಕ್ಷೆ ದೇವಮ್ಮ ಶರಣಮ್ಮ ಬೂತಲ್, ಉಪಾಧ್ಯಕ್ಷರಾಗಿ ಮಲ್ಲಮ್ಮ ಬಸವರಾಜ ಮನ್ನಾಪುರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಾಪಂ ಇಒ ಸಂತೋಷ ಪಾಟೀಲ್ ಘೋಷಿಸಿದರು. ಪಿಡಿಒ ರಮೇಶ ಬೆಳ್ಳಿಹಾಳ, ಮುಖಂಡರಾದ ಶಿವಪ್ಪ ವಾದಿ, ಫಕೀರಪ್ಪ ತಳವಾರ್, ದೇವೇಂದ್ರಗೌಡ ಮಾಲಿಪಾಟೀಲ್, ಶಂಕರ ಮೂಲಿ, ಮಹಾದೇವಪ್ಪ ದಳಪತಿ ಸೇರಿದಂತೆ ಇತರರಿದ್ದರು.
ತುಮ್ಮರಗುದ್ದಿ: ತುಮ್ಮರಗುದ್ದಿ ಗ್ರಾಪಂ ಅಧ್ಯಕ್ಷೆ ಹೊಳಿಯವ್ವ ಫಕೀರಪ್ಪ ಹಳ್ಳಿಕೇರಿ, ಉಪಾಧ್ಯಕ್ಷರಾಗಿ ಶಿವವ್ವ ಸೋಮಲೆಪ್ಪ ಪಮ್ಮಾರ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಎಫ್.ಎಂ.ಕಳ್ಳಿ ತಿಳಿಸಿದರು. ಪಿಡಿಒ ಸೋಮಪ್ಪ ಪೂಜಾರ, ಮುಖಂಡರಾದ ಶರಣಪ್ಪ ಈಳಿಗೇರ್, ಈರಪ್ಪ ರ್ಯಾವಣಕಿ, ದುರಗಪ್ಪ ನಡುಲಮನಿ, ಗುರುಮೂರ್ತಿ, ಸಂಗಯ್ಯ ಶಾಸ್ತ್ರೀಮಠ, ಭರಮಪ್ಪ ಅಗಸಿಮುಂದಿನ, ಭಾಳಪ್ಪ ತಳವಾರ್ ಹಾಗೂ ಗ್ರಾಪಂ‌ಸದಸ್ಯರು ಸೇರಿದಂತೆ ಇತರರಿದ್ದರು.
ಯಲಬುರ್ಗಾ ತಾಲೂಕಿನ ಬೇವೂರು ಗ್ರಾಪಂಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಿತು.
--
ಬೇವೂರು: ಬೇವೂರು ಗ್ರಾಮ ಪಂಚಾಯತಿಗೆ ಅಧ್ಯಕ್ಷೆ ಅಂದಮ್ಮ ಗವಿಸಿದ್ದಪ್ಪ ಬಳೆಗಾರ ಅವಿರೊಧ, ಉಪಾಧ್ಯಕ್ಷರಾಗಿ ಲಕ್ಷ್ಮವ್ವ ನೀಲಪ್ಪ ಚುಕಣಿ ಚುನಾವಣೆ ಮೂಲಕ ಆಯ್ಕೆಯಾದರು. ಚುನಾವಣಾಧಿಕಾರಿ ವಿ.ಕೆ.ಬಡಿಗೇರ, ಪಿಡಿಒ ಅಬ್ದುಲ್ ಗಫಾರ, ಮುಖಂಡರಾದ ಶಂಕರಗೌಡ ಟಣಕನಕಲ್, ಸಿದ್ದು ಮಣ್ಣಿನವರ, ಈಶ್ವರಪ್ಪ ತಲ್ಲೂರು, ಶರಣಪ್ಪ ಬಳೆಗಾರ, ದೇವೇಂದ್ರಪ್ಪ ತಳವಾರ್, ಸೋಮಲಿಂಗಪ್ಪ ಕೊಳಜಿ, ಶಿವಶಂಕರ ದೇಸಾಯಿ, ಮರಿಸ್ವಾಮಿ ಮಣ್ಣಿನವರ್, ನಿಂಗಜ್ಜ ಕೊಳಜಿ ಹಾಗೂ ಗ್ರಾಪಂ ಸದಸ್ಯರಿದ್ದರು.
--
ಗುನ್ನಾಳ: ಗುನ್ನಾಳ ಗ್ರಾಪಂಗೆ ಅಧ್ಯಕ್ಷೆ ಶಾಂತಮ್ಮ ಶರಣಪ್ಪ ಕಂಬಳಿ, ಉಪಾಧ್ಯಕ್ಷರಾಗಿ ಈಶಪ್ಪ ಮಲ್ಲಪ್ಪ ಹಟ್ಟಿ ಅವಿರೋಧ ಆಯ್ಕೆಯಾದರು. ಚುನಾವಣಾಧಿಕಾರಿ ಗೀತಾ ಅಯ್ಯಪ್ಪ, ಪಿಡಿಒ ಶರಣಗೌಡ ಪಾಟೀಲ್, ಮುಖಂಡರಾದ ಪ್ರಾಣೇಶರಾವ್ ಜೋಶಿ, ಶಿವಸಂಗಪ್ಪ ಹುಚನೂರ, ಬಸವರಾಜ ಬಿಸೆಟ್ಟರ್, ಅಮರೇಶ, ಶರೀಫ್‌ಸಾಬ್ ಗುನ್ನಾಳ ಹಾಗೂ ಗ್ರಾಪಂ ಸದಸ್ಯರಿದ್ದರು.
--
ತಾಳಕೇರಿ: ತಾಳಕೇರಿ ಗ್ರಾಪಂ ಅಧ್ಯಕ್ಷೆ ಹನುಮವ್ವ ದೊಡ್ಡಪ್ಪ ಮುಸಲಾಪುರ, ಉಪಾಧ್ಯಕ್ಷರಾಗಿ ಹನುಮವ್ವ ವಿರುಪಣ್ಣ ಅಳ್ಳಳ್ಳಿ ಆಯ್ಕೆಯಾದರು. ಚುನಾವಣಾಧಿಕಾರಿ ಮಂಜುನಾಥ ಲಿಂಗಣ್ಣವರ್, ಪಿಡಿಒ ಹನುಮಂತಪ್ಪ, ಮುಖಂಡರಾದ ರಾಘವೇಂದ್ರ ಜೋಶಿ, ಶಂಕ್ರಪ್ಪ ಸುರಳ, ಮಹೇಶ ಹಳ್ಳಿ, ಶರಣಗೌಡ ಪಾಟೀಲ್, ರುದ್ರಪ್ಪ ಮರಕಟ್, ಬಸವರಾಜ ಕಳ್ಳಿ, ಷಣ್ಮುಖಪ್ಪ ಬಳ್ಳಾರಿ, ಚಿದಾನಂದಪ್ಪ ಹರಕಂಗಿ, ಹನುಮಂತ ಬ್ಯಾಳಿ, ಬಸವರಾಜ ಬಾಗೇವಾಡಿ, ಮಂಜು ಏಳುಗುಡ್ಡದ, ಮರ್ದಾನ್‌ಸಾಬ್ ಮುಲ್ಲಾರ್‌ ಹಾಗೂ ಗ್ರಾಪಂ ಸದಸ್ಯರಿದ್ದರು.
ಸಂಗನಾಳ: ಅಧ್ಯಕ್ಷೆ ಮಾಳವ್ವ ಶರಣಪ್ಪ ಕಟ್ಟೆಪ್ಪನವರ, ಉಪಾಧ್ಯಕ್ಷರಾಗಿ ಗಿರಿಜಾ ಈಶಪ್ಪ ಸಿದ್ದರಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿಂಧು ಎಲಿಗಾರ ಘೋಷಿಸಿದರು. ಪಿಡಿಒ ರತ್ನಾ, ಮುಖಂಡರಾದ ಸಿದ್ದಪ್ಪ ಚೋಳಿನ, ಅಡಿವೆಪ್ಪ ಲಕ್ಕಲಕಟ್ಟಿ, ಸಂಗಮೇಶ ಗಡಾದ, ಹನುಮಂತ ನಡುಲಕೇರಿ ಹಾಗೂ‌ ಸದಸ್ಯರಿದ್ದರು.
ಮುಧೋಳ: ಅಧ್ಯಕ್ಷೆ ಮಮತಾಜ್‌ಬಿ ಹುಸೇನ್‌ಸಾಬ್ ಹಿರೇಮನಿ, ಉಪಾಧ್ಯಕ್ಷರಾಗಿ ಅಶೋಕ ಭೀಮಪ್ಪ ಭಜಂತ್ರಿ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿ ಪದ್ಮನಾಭ ಕರ್ಣಂ, ಪಿಡಿಒ ಎಫ್.ಡಿ.ಕಟ್ಟಿಮನಿ, ಮುಖಂಡರಾದ ಅಂದಾನಗೌಡ ಪಾಟೀಲ್ ಬಳೂಟಗಿ, ಆನಂದ ಉಳ್ಳಾಗಡ್ಡಿ, ಮಹಾಂತೇಶ ಗಾಣಿಗೇರ, ಛತ್ರಪ್ಪ ಛಲವಾದಿ, ಹೇಮರೆಡ್ಡಿ ರಡ್ಡೇರ, ಕಳಕಪ್ಪ, ಎಚ್.ಎಚ್.ಹಿರೇಮನಿ ಹಾಗೂ‌ ಸದಸ್ಯರಿದ್ದರು.

0/Post a Comment/Comments