ಬೋದೂರು ಗ್ರಾಪಂಗೆ ಜ್ಯೋತಿ ಅಧ್ಯಕ್ಷೆ, ದುರಗವ್ವ ಉಪಾಧ್ಯಕ್ಷರಾಗಿ ಆಯ್ಕೆ


ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ತಾಲೂಕಿನ ಬೋದೂರು ಗ್ರಾಮ ಪಂಚಾಯತಿಗೆ ಅಧ್ಯಕ್ಷರಾಗಿ ಜ್ಯೋತಿ ಹನುಮಂತ ಕೊಬ್ಲರ್, ಉಪಾಧ್ಯಕ್ಷರಾಗಿ ದುರಗವ್ವ ಹನುಮಪ್ಪ ಹರಿಜನ್ ಅವಿರೋಧವಾಗಿ ಆಯ್ಕೆಯಾದರು. ಇದೇ ವೇಳೆ ಬೆಂಬಲಿಗರು ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರನ್ನು ಸನ್ಮಾನಿಸಿ‌ ಗೌರವಿಸಿದರು. ಪರಸ್ಪರ ಬಣ್ಣ ಎರಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಚುನಾವಣಾಧಿಕಾರಿ ಮಂಜುನಾಥ ಲಿಂಗಣ್ಣವರ್, ಪಿಡಿಒ ಎಂ.ಡಿ.ಫಯಾಜ್, ಪ್ರಮುಖರಾದ ರುದ್ರಪ್ಪ ಮರಕಟ್, ಯಮನೂರಪ್ಪ ಗುಂಟಮಡು, ಹನುಮಂತ ಕುರ್ನಾಳ, ಸೋಮನಗೌಡ ಗೌಡ್ರ, ಹನುಮಂತಪ್ಪ ಗಾಣಧಾಳ, ಷಣ್ಮುಖಪ್ಪ ಬಳ್ಳಾರಿ, ಯಮನೂರಪ್ಪ ಗುಳೆ, ಬಸವರಾಜ ಚೌಡ್ಕಿ ಹಾಗೂ ಸದಸ್ಯರಿದ್ದರು.
-----

0/Post a Comment/Comments