ಶಾಸಕ ಬಸವರಾಜ ರಾಯರಡ್ಡಿ ವಿರುದ್ಧ ಮಾತನಾಡುವ ನೈತಿಕತೆ ಹೆಚ್ .ಆರ್.ಶ್ರೀನಾಥಗೆ ಇಲ್ಲ

ಪ್ರಗತಿವಾಣಿ, ಕೊಪ್ಪಳ
ಯಲಬುರ್ಗಾ: ನಮ್ಮ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ವಿರುದ್ಧ ಯಾವುದೇ ರೀತಿಯ ಮಾತನಾಡುವ ನೈತಿಕತೆ ಮಾಜಿ ಎಮ್ಎಲ್ಸಿ ಎಚ್.ಆರ್. ಶ್ರೀನಾಥ್ ಅವರಿಗೆ ಇಲ್ಲ, ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದು ಬಹಿರಂಗವಾಗಿ ಕ್ಷಮೆಯಾಚಿಸಬೇಕು  ಎಂದು ಕಾಂಗ್ರೆಸ್ ಮುಖಂಡ ಈಶ್ವರ ಅಟಮಾಳಗಿ ಹೇಳಿದರು.
ಈ ಕುರಿತು ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ಅಧಿಕಾರ ಕಳೆದುಕೊಂಡು ಎಚ್.ಆರ್. ಶ್ರೀನಾಥ್ ಅವರು ಬುದ್ಧಿ ಬ್ರಮಣೆಯಿಂದ ಈ ರೀತಿ ಉಡಾಫೆ ಆಗಿ ಮಾತನಾಡುತ್ತಿದ್ದಾರೆ.‌ ಅವರು ಈಗ ತೀವ್ರ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಪ್ರತಿಷ್ಠೆ ಕುಟುಂಬದಿಂದ ರಾಜಕಾರಣಕ್ಕೆ ಬಂದು ಇನ್ನೊಬ್ಬರ ಮೇಲೆ ಸುಳ್ಳು ಆರೋಪ ಮಾಡುವುದು ಶ್ರೀನಾಥ್ ಅವರ ರಾಜಕೀಯ ಕಾಯಕವಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಪಕ್ಷದ ಶಾಸಕರ ವಿರುದ್ಧವೇ ಕೆಟ್ಟದಾಗಿ ಮಾತನಾಡುವ ಸಂಸ್ಕೃತಿ ಬೆಳೆಸಿಕೊಂಡಿರುವುದು ದುರ್ದೈವ. ಸದಾ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿರುವ ಶ್ರೀನಾಥ್ ಅವರನ್ನು ಪಕ್ಷದಿಂದ ಹುಚ್ಚಾಟನೆ ಮಾಡುವಂತೆ ಕೆಪಿಸಿಸಿಗೆ ದೂರು ನೀಡುತ್ತೇವೆ. ಅಕ್ರಮ ಚಟುವಟಿಕೆಗೆ ಕಡಿಹಾಣ ಹಾಕಲು ನಮ್ಮ ಶಾಸಕರು ಸದನದಲ್ಲಿ ಧ್ವನಿ ಎತ್ತಿದಾಗ ಅವರು ವಿರುದ್ಧವಾಗಿ ಗಂಗಾವತಿಗೆ ಅಪಮಾನ ಮಾಡಿದ್ದಾರೆ ಎಂದು ಸುಳ್ಳು ಬಿಂಬಿಸಿರುವುದು ಇವರ ಯೋಗ್ಯತೆಯನ್ನು ಎತ್ತಿ ತೋರಿಸುತ್ತಿದೆ. ಗಂಗಾವತಿ ಕ್ಷೇತ್ರದ ವ್ಯಾಪ್ತಿಗಳಲ್ಲಿ ಅಕ್ರಮವಾಗಿ ಡ್ರಗ್ಸ್, ಗಾಂಜಾ ಹಾಗೂ ಇತರೆ ಮಾದಕ ವಸ್ತುಗಳು ಮಾರಾಟವಾಗುತ್ತಿದ್ದು ಇದನ್ನು ತಡೆದು ಯುವ ಜನತೆಯನ್ನು ರಕ್ಷಿಸುವಂತ ಕೆಲಸ ಮಾಡಬೇಕು, ಸುಮ್ಮನೆ ರಾಯರಡ್ಡಿ ವಿರುದ್ಧ
ರಾಜಕೀಯ ಲಾಭಕ್ಕಾಗಿ ಮಾತನಾಡುವುದ ಸರಿಯಲ್ಲ ಎಂದರು.
©©©©©©©©©©©

0/Post a Comment/Comments