ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಎಸ್‌ಎಫ್‌ಐ ತಾಲೂಕು ಸಮಿತಿಯಿಂದ ಪಟ್ಟಣದ ತಹಸಿಲ್ ಕಚೇರಿಯ ಶಿರಸ್ತೇದಾರ್ ದೇವರಡ್ಡಿಗೆ ಮನವಿ ಸಲ್ಲಿಸಲಾಯಿತು.
ಸಮಿತಿ ಸಂಚಾಲಕ ಎಂ.ಸಿದ್ದಪ್ಪ ಮಾತನಾಡಿ, ಪಟ್ಟಣದ ಎರಡು ವರ್ಷಗಳಿಂದ ಮಹಿಳೆಯರಿಗಾಗಿ ಪ್ರತ್ಯೇಕ ಕಾಲೇಜು ಇದ್ದು, ಗ್ರಾಮೀಣ ಪ್ರದೇಶದ ಬಡ ಕುಟುಂಬದ ವಿದ್ಯಾರ್ಥಿಗಳು ಪ್ರವೇಶ ಪಡೆಯುವುದು ಹೆಚ್ಚು. ಪ್ರವೇಶಾತಿ ವೇಳೆ ಅಧಿಕ ಶುಲ್ಕ ಪಡೆದಿರುವುದು ಖಂಡನೀಯ. ಅಧಿಕ ಶುಲ್ಕ ಪಡೆದಿದ್ದು, ಮರಳಿ ಕೊಡಿಸಬೇಕು. ಕಾಲೇಜಿನಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು. ಹಿಂದಿನ ವರ್ಷದಲ್ಲಿ ಕಾಲೇಜಿನಲ್ಲಿ ಉಪನ್ಯಾಸ ನೀಡಿದ ಅತಿಥಿ ಉಪನ್ಯಾಸಕರನ್ನು ಏಕಾಏಕಿ ಕೈಬಿಟ್ಟಿರುವುದು ಸರಿಯಾದ ಕ್ರಮವಲ್ಲ. ಅವರನ್ನು ಮುಂದುವರೆಸಬೇಕು. ಎಲ್ಲಾ ಸಮಸ್ಯೆಗಳು ಬಗೆಹರಿಯದೇ ಹೋದರೆ ಪಾಲಕರ ಸಮ್ಮುಖದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭ ಸಮಿತಿ ಪದಾಧಿಕಾರಿಗಳಾದ ಅಲ್ಲಾಭಕ್ಷಿ, ನಿರೂಪಾದಿ, ಆಕಾಶ್, ಹರೀಶ್ ಇದ್ದರು.
ಬೇಡಿಕೆಗಳು: ಶೌಚಗೃಹ, ನೀರಿನ ಸೌಲಭ್ಯ, ಗ್ರಂಥಾಲಯ, ಬೆಂಚುಗಳ ವ್ಯವಸ್ಥೆ, ವಿದ್ಯಾರ್ಥಿಗಳಿಂದ ಪಡೆದ ಹೆಚ್ಚಿನ ಶುಲ್ಕ ಹಿಂದುರಿಗಿಸಬೇಕು. ಅರ್ಜಿ ಹಾಕಿದ ಎಲ್ಲಾ ವಿಧ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕು. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದ ಪ್ರಾಂಶುಪಾಲರನ್ನು ಅಮಾನತುಗೊಳಿಸಬೇಕು.
-----
Post a Comment