ಕಾಂಗ್ರೆಸ್ ಮುಖಂಡ ಈರಪ್ಪ ಕುಡಗುಂಟಿ ಅವರಿಗೆ ಕಂಬಳಿ ಹೊದಿಸಿ ಸನ್ಮಾನ.


ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ದೃಷ್ಠಿಯಿಂದ ಬಸವರಾಜ ರಾಯರೆಡ್ಡಿ ಅವರ ಆಯ್ಕೆ ಅನಿವಾರ್ಯವಾಗಿದೆ ಎಂದು ಜಿ.ಪಂ. ಮಾಜಿ ಸದಸ್ಯ ಈರಪ್ಪ ಕುಡಗುಂಟಿ ಹೇಳಿದರು.
ತಾಲೂಕಿನ ಕುದರಿಮೋತಿ, ಮ್ಯಾದನೇರಿ, ಕವಳಕೇರಿ ಸೇರಿದಂತೆ ಇನ್ನಿತರ  ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ರಾಯರೆಡ್ಡಿ ಪರ ಪ್ರಚಾರ ನಡೆಸಿ ಮಾತನಾಡಿದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಲವಾರು ಅಭಿವೃಧ್ಧಿ ಕೆಲಸಗಳಾಗಿವೆ. ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಮಂತ್ರಿಗಳಾಗಿ ಅನೇಕ ಜನಪರ, ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಇಂತಹ ನಾಯಕನನ್ನು ಮತದಾರರು ಅತೀ ಹೆಚ್ಚು ಮತಗಳ ಅಂತರಲ್ಲಿ ಆಯ್ಕೆ ಮಾಡಬೇಕಾಗಿದೆ ಎಂದರು.
ಕ್ಷೇತ್ರದ ಎಲ್ಲಾ ಕಡೆಯೂ ಕಾಂಗ್ರೆಸ್ ಪರವಾದಂತಹ ಅಲೆ ಎದ್ದಿದೆ. ಈ ಬಾರಿ ರಾಯರೆಡ್ಡಿ ಗೆಲುವು ನಿಶ್ಚಿತವಾಗಿದೆ. ಸರ್ವ ಜನಾಂಗವನ್ನು ಸಮಾನತೆಯಿಂದ ಕಾಣುವ ರಾಯರೆಡ್ಡಿಗೆ ಮತದಾರರು ಹೆಚ್ಚಿನ ಮತಗಳನ್ನು ನೀಡುವ ಮೂಲಕ ಆಶೀರ್ವಾದ ಮಾಡಬೇಕು ಎಂದರು.
ಇದೇ ವೇಳೆ ಈರಪ್ಪ ಕುಟಗುಂಟಿ ಅವರಿಗೆ ಗ್ರಾಮಸ್ಥರು ಕಂಬಳಿ ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಮುಖಂಡರಾದ ಅಮರೇಶ ಕುದರಿಮೋತಿ, ಸುಭಾಷ್ ಈಳಿಗೇರ, ಮಂಜು ಕನ್ಯಾಳ, ವಿರುಪಣ್ಣ ಮೂಲಿಮನಿ, ಮಂಜುನಾಥ ಸಜ್ಜನ, ಮಂಜುನಾಥ ಭರಮಪ್ಪ ಗಟ್ಟೆಪ್ಪನಮರ, ಹನಮಗೌಡ ಪರಸಪ್ಪ ಪೊಲೀಸ ಪಾಟೀಲ, ಶಿವಣ್ಣ ಗಟ್ಟೆಪ್ಪನವರ ಶರಣಪ್ಪ ಗಟ್ಟೆಪ್ಪನವರ, ಮಂಜುನಾಥ ಚೌಡಕಿ, ಸುರೇಶ ಚೌಡಕಿ, ದುರಗಪ್ಪ ಕಾಳಿ, ದುರಗಪ್ಪ ಶಿಮೂರ್ತೆಪ್ಪ ಕಾಳಿ, ನಿಂಗಪ್ಪ ಮಂಗಳೂರು, ಅಪ್ಪಣ್ಣ ಬನ್ನಿಮರದ, ಇದ್ದರು.
====

0/Post a Comment/Comments