ಶೈಕ್ಷಣಿಕ ಕ್ರಾಂತಿ ಮಾಡಿದ ರಾಯರಡ್ಡಿಯನ್ನು ಅಧಿಕ ಮತಗಳಿಂದ ಗೆಲ್ಲಿಸಿ

ಪ್ರಗತಿವಾಣಿ ಕೊಪ್ಪಳ
ನೀವು ಯಲಬುರ್ಗಾ (ಕೊಪ್ಪಳ)ಕ್ಕೆ ಬರಬೇಡಿ. ಬಂದರೆ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್‌ ಗೆಲುವಿಗೆ ಕಷ್ಟವಾಗುತ್ತದೆ ಅಂತ ಹೇಳಿಕೊಂಡು ಕ್ಷೇತ್ರದ ನಾಲ್ಕು ಜನ ನನ್ನ ಹತ್ತಿರ ಬಂದಿದ್ದರು. ಅದಕ್ಕೆ ನಾನು ಇರುವ ಪಕ್ಷದಲ್ಲಿ ನಿಷ್ಠೆ, ಪ್ರಾಮಾಣಿಕ ಇರುತ್ತದೆ. ಕಾಂಗ್ರೆಸ್ ಪಕ್ಷ ಹೇಳಿದಂತೆ ಕೇಳುತ್ತೇನೆ ಹೊರತು ಬೆನ್ನಿಗೆ ಚೂರಿ ಹಾಕುವ ಮನುಷ್ಯ ನಾನು ಅಲ್ಲ...
ಇದು ತಾಲೂಕಿನ ಬೇವೂರು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ರಾಯರಡ್ಡಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಲಪ್ಪ ಆಚಾರ್ ವಿರುದ್ಧ ಹಾಡಿದ ಮಾತು.
ಹಾಲಪ್ಪ ಆಚಾರ್‌ರನ್ನು ಬಿಜೆಪಿಗೆ ಪಕ್ಷಕ್ಕೆ ಸೇರಿಸಿದ್ದೇ ನಾನು. ೨೦೧೮ರ ಚುನಾವಣೆಯಲ್ಲಿ ಆಚಾರ್ ಗೆಲುವಿಗೆ ಶ್ರಮಿಸಿದ್ದೆ. ಆದರೆ ಈ ಬಾರಿ ನನಗೆ ಅಲ್ಲಿ ಟಿಕೆಟ್ ಕೈತಪ್ಪಿದಾಗ ನನ್ನ ಪರ ಒಂದು ಮಾತಾಡದೇ ಬೆಂಗಳೂರಿನಿಂದ ಯಲಬುರ್ಗಾಕ್ಕೆ ಬಂದರು ಎಂದು ಕಿಡಿಕಾರಿದರು. ೨೧ ವರ್ಷಗಳ ಕಾಲ ಪಕ್ಷಕ್ಕೆ ದುಡಿದಿದ್ದೇನೆ. ಈಗ ಬಿಜೆಪಿಯಲ್ಲಿ ಪ್ರಾಮಾಣಿಕ, ಶಿಸ್ತಿನ ಸಿಪಾಯಿಗಳಿಗೆ ಅವಕಾಶ ಇಲ್ಲ. ಸುಳ್ಳು, ಡೋಂಗಿಕೋರರು, ಕಿವಿ ಕಡಿಯೋರು, ಭ್ರಷ್ಟಾಚಾರ ಮಾಡುವವರಿಗೆ ಅವಕಾಶವಿದೆ ಎಂದರು.
ಸವದಿ, ಶೆಟ್ಟರ್‌ಗೆ ಬಿಜೆಪಿ ಏನು ಕಮ್ಮಿ ಮಾಡಿತ್ತು. ಅವರನ್ನು ಸೋಲಿಸುತ್ತೇವೆ ಎನ್ನುವ ಯಡಿಯೂರಪ್ಪ ಬಿಜೆಪಿಯಲ್ಲಿ ಮುಖಮಂತ್ರಿ, ವಿರೋಧ ಪಕ್ಷದ ನಾಯಕರಾದರೂ ಕೆಜೆಪಿ ಪಕ್ಷ ಯಾಕೆ ಕಟ್ಟಿದ್ದೀರಿ ಎಂಬುದಕ್ಕೆ ಉತ್ತರ ಕೊಡುತ್ತಿಲ್ಲ ಎಂದರು.
ಹಾಲಪ್ಪ ಆಚಾರ್ ಪಾಳೆ ಮುಗಿದಿದೆ. ಹಾಲಪ್ಪಗೆ ವಿಶ್ರಾಂತಿ ಕೊಡಬೇಕು. ಸವದಿ, ಶೆಟ್ಟರ್ ಬಿಜೆಪಿಯಿಂದ ಹೊರಗೆ ಹೋದರೆ ಸಮುದ್ರದಲ್ಲಿನ ಒಂದು ಲೋಟ ನೀರು ಹೋದಂತೆ ಎಂದು ಹೇಳಿದವರಿಗೆ ಈ ಸಲ ವಿಶ್ರಾಂತಿ ಕೊಡಬೇಕು. ಕ್ಷೇತ್ರದ ಅಭಿವೃದ್ಧಿಗಾಗಿ  ರಾಯರಡ್ಡಿಗೆ ಮತ ಕೊಡಬೇಕು. ಸೂರ್ಯ ಉದಯಿಸುವುದು ಎಷ್ಟೋ ಸತ್ಯವೋ ರಾಯರಡ್ಡಿ ಗೆಲುವು ಅಷ್ಟೇ ಸತ್ಯ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ರಾಯರಡ್ಡಿ, ಮಾತನಾಡಿ, ವಾಮಮಾರ್ಗದ ಕೆಟ್ಟ ರಾಜಕಾರಣ ಪರಿಚಯಿಸಿದ್ದೇ ಬಿಜೆಪಿ ಪಕ್ಷ. ಇತ್ತೀಚಿನ ಬಿಜೆಪಿ ಪಕ್ಷ ತನ್ನ ಸೈದ್ಧಾಂತಿಕ, ತತ್ವ ಸಿದ್ಧಾಂತ ಕಳೆದುಕೊಂಡಿದೆ. ಅಲ್ಲಿ ಪಕ್ಷ ಕಟ್ಟಿದವರಿಗೆ ಗೌರವ ಇಲ್ಲ. ಮತದಾರರು ಹಣಕ್ಕೆ ಬೆಲೆ ಕೊಡದೇ ಅಭಿವೃದ್ಧಿಯೇ ಮಾನದಂಡ ಎಂದು ತಿಳಿದು ಕಾಂಗ್ರೆಸ್‌ಗೆ ಮತ ಹಾಕಲು ತಯಾರಾಗಿದ್ದಾರೆ ಎಂದರು.
ನಾನು ಶಾಸಕ, ಸಚಿವನಿದ್ದಾಗ ಕ್ಷೇತ್ರದಲ್ಲಿ‌ ಸಾಕಷ್ಟು ಅಭಿವೃದ್ಧಿ, ಶೈಕ್ಷಣಿಕ ಕ್ರಾಂತಿ ಮಾಡಲಾಗಿದೆ. ನೀರಾವರಿ ಬಗ್ಗೆ ಸುಳ್ಳು ಹೇಳುವ ಹಾಲಪ್ಪ ಆಚಾರ್ ಜನರ ಮುಂದೆ ಸತ್ಯ ಹೇಳಲಿ. ಸೀರೆ, ಕುಕ್ಕರ್, ಹಣ ಹಂಚುವ ಕೆಲಸ ನನಗೆ ಗೊತ್ತಿಲ್ಲ. ಗೊತ್ತಿರೋದು ಕ್ಷೇತ್ರದ ಅಭಿವೃದ್ಧಿ ಅಷ್ಟೇ. ಕ್ಷೇತ್ರದ ಮತದಾರರು ನನಗೆ ಆಶೀರ್ವಾದ ಮಾಡುವ ಮೂಲ ಅತ್ಯಧಿಕ ಮತಗಳಿಂದ ಆರಿಸಿ ತರಬೇಕು ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಮಾತನಾಡಿದರು. ಇದೇ ವೇಳೆ ಲಕ್ಷ್ಮಣ ಸವದಿಗೆ ಅಭಿಮಾನಿಗಳು ಹೋರಿ ಕರು ಉಡುಗೊರೆ ನೀಡಿದರು.
--
ಈ ಸಂದರ್ಭ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಯಂಕಣ್ಣ ಯರಾಶಿ, ಪ್ರಮುಖರಾದ ಹನುಮಂತಗೌಡ ಚಂಡೂರು, ಸಾವಿತ್ರಿ ಗೊಲ್ಲರ್, ಫರಿದಾ ಬೇಗಂ, ಗಿರಿಜಾ ಸಂಗಟಿ, ಎ.ಜಿ.ಭಾವಿಮನಿ, ವೀರನಗೌಡ ಪಾಟೀಲ್, ಚಂದ್ರಶೇಖರ ಹಿರೇಮಠ, ರತನ್ ಭಾತೆ, ವೀರಣ್ಣ ಹಳ್ಳಿ, ಮಹಾಂತೇಶ ಗಾಣಿಗೇರ್, ಬಿ.ಎಂ.ಶಿರೂರು, ಕೆರಿಬಸಪ್ಪ ನಿಡಗುಂದಿ, ರೇವಣಪ್ಪ ಸಂಗಟಿ, ನಾಗರಾಜ ನವಲಹಳ್ಳಿ, ಆದೇಶ ರೊಟ್ಟಿ, ಬಸವರಾಜ ಹಳ್ಳಿ, ಹನುಮಂತಪ್ಪ ಕಲಭಾವಿ, ಮಹೇಶ ಹಳ್ಳಿ, ಶಿವನಗೌಡ ದಾನರಡ್ಡಿ, ರುದ್ರಪ್ಪ ಮರಕಟ್, ಬಸವರಾಜ ಹಿರೇಮನಿ, ಶರಣಗೌಡ ಬಸಾಪುರ, ಕಳಕೇಶ ಸೂಡಿ ಸೇರಿದಂತೆ ಇತರರಿದ್ದರು.
--

0/Post a Comment/Comments