2,000 ಮುಖಬೆಲೆಯ ನೋಟು ಹಿಂತೆಗೆದುಕೊಂಡ ಆರ್‌ಬಿಐ, ಸೆ.30ರವರೆಗೆ ವಿನಿಮಯಕ್ಕೆ ಅವಕಾಶ!


 2,000 ಮುಖಬೆಲೆಯ ನೋಟು ಹಿಂತೆಗೆದುಕೊಂಡ ಆರ್‌ಬಿಐ, ಸೆ.30ರವರೆಗೆ ವಿನಿಮಯಕ್ಕೆ ಅವಕಾಶ!

2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಆರ್‌ಸಿಬಿ ಹಿಂತೆಗೆದುಕೊಂಡಿದೆ. ಸೆಪ್ಟೆಂಬರ್ 30ರೊಳಗೆ ಸಾರ್ವಜನಿಕರು ತಮ್ಮಲ್ಲಿರುವ 2,000 ರೂ ನೋಟುಗಳನ್ನು ಖಾತೆಯಲ್ಲಿ ಜಮೆ ಮಾಡಲು ಅಥವಾ ಬ್ಯಾಂಕ್‌ನಲ್ಲಿ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

 ನವದೆಹಲಿ(ಮೇ.19): ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 2,000 ರೂಪಾಯಿ ಮುಖಬೆಲೆಯ ನೋಟನ್ನು ಆರ್‌ಸಿಬಿ ಹಿಂತೆಗೆದುಕೊಂಡಿದೆ. ಆದರೆ 2,000 ರೂಪಾಯಿ ಬೆಲೆಯ ಲೀಗಲ್ ಟೆಂಡರ್ ಮುಂದುವರಿಯಲಿದೆ ಎಂದು ಆರ್‌ಸಿಬಿ ಹೇಳಿದೆ.  ಸೆಪ್ಟೆಂಬರ್ 30ರ ಒಳಗೆ ನಿಮ್ಮ ಬಳಿ ಇರುವ 2,000 ರೂಪಾಯಿ ನೋಟನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡಿಕೊಳ್ಳಬಹುದು ಅಥವಾ ವಿನಿಮಯ ಮಾಡಿಕೊಳ್ಳಬಹುದು. ಅಕ್ಟೋಬರ್ 1 ರಿಂದ 2,000 ರೂಪಾಯಿ ನೋಟುಗಳು ಚಲಾವಣೆ ಸ್ಥಗಿತಗೊಳ್ಳಲಿದೆ.

 ಸಾರ್ವಜನಿಕರು ತಮ್ಮಲ್ಲಿರುವ 2,000 ರೂಪಾಯಿ  ನೋಟುಗಳನ್ನು ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಬಹುದು. ಇನ್ನು 2,000 ರೂಪಾಯಿ ನೋಟು ವಿನಿಮಯ ಮಾಡಿಕೊಳ್ಳಲು ಒಂದು ನಿರ್ಬಂಧ ವಿಧಿಸಲಾಗಿದೆ. ಬ್ಯಾಂಕ್ ಚಟುವಟಿಕೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಒಂದು ದಿನ ಒಬ್ಬ ವ್ಯಕ್ತಿಗೆ ಗರಿಷ್ಛ 20,000 ರೂಪಾಯಿ ಮಾತ್ರ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಮೇ.23 ರಿಂದ ಬ್ಯಾಂಕ್‌ಗಳಲ್ಲಿ 2,000 ರೂಪಾಯಿ ನೋಟು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.ಸಾರ್ವಜನಿಕರು ಮಾತ್ರವಲ್ಲ ಬ್ಯಾಂಕ್ ಕೂಡ ಸೆಪ್ಟೆಂಬರ್ 30ರೊಳಗೆ 2,000 ರೂಪಾಯಿ ನೋಟಿನ ಎಲ್ಲಾ ವಿನಿಮಯ, ಜಮಾವಣೆ ಮುಗಿಸಬೇಕು ಎಂದು ಆರ್‌ಬಿಐ ಹೇಳಿದೆ.

0/Post a Comment/Comments