ಯಲಬುರ್ಗಾ: ವಿಧಾನಸಭಾ ಚುನಾವಣೆಗೆ ಯಲಬುರ್ಗಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರು ಚುನಾವಣಾಧಿಕಾರಿ ಕೆ.ವಿ.ಕಾವ್ಯಾರಾಣಿ ಅವರಿಗೆ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುಂಚೆ ಪಟ್ಟಣದ ಶ್ರೀ ಮೊಗ್ಗಿ ಬಸವೇಶ್ವರ ದೇವಸ್ಥಾನದಿಂದ ವಿವಿಧ ವೃತ್ತಗಳ ಮೂಲಕ ತೆರೆದ ವಾಹನದಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು, ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿದರು. ಇದೇ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಚಂಡೂರು, ಕೆಪಿಸಿಸಿ ಸದಸ್ಯೆ ಗಿರಿಜಾ ರೇವಣಪ್ಪ ಸಂಗಟಿ, ಮುಖಂಡರಾದ ಸಾವಿತ್ರಿ ಗೊಲ್ಲರ್, ಫರೀದಾ ಬೇಗಂ, ಯಂಕಣ್ಣ ಯರಾಶಿ, ಎ.ಜಿ.ಭಾವಿಮನಿ, ವೀರನಗೌಡ ಪಾಟೀಲ್, ಕೆರಿಬಸಪ್ಪ ನಿಡಗುಂದಿ, ಆದೇಶ ರೊಟ್ಟಿ, ಬಸವರಾಜ ಹಿರೇಮನಿ, ಕಳಕೇಶ ಸೂಡಿ, ಶರಣಗೌಡ ಬಸಾಪುರ, ಪುನೀತ್ ಕೊಪ್ಪಳ, ಶಿವನಗೌಡ ದಾನರಡ್ಡಿ, ಶರಣಪ್ಪ ಗಾಂಜಿ, ಸುಧೀರ ಕೊರ್ಲಳ್ಳಿ, ಮಹಾಂತೇಶ ಗಾಣಿಗೇರ ಸೇರಿದಂತೆ ಮತ್ತಿತರರು ಇದ್ದರು.
Post a Comment