ಹಾಲಪ್ಪ ಆಚಾರ್ ಅವರಿಗೆ ಮತ್ತೊಮ್ಮೆ ಆಶೀರ್ವಾದ ಮಾಡಿ

ಪ್ರಗತಿ ವಾಣಿ ಕೊಪ್ಪಳ
ಯಲಬುರ್ಗಾ: ಸತ್ಯಹರಿಶ್ಚಂದ್ರ ಬಂದರೂ ಕ್ಷೇತ್ರಕ್ಕೆ ನೀರು ಬರುವುದಿಲ್ಲ, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುವುದಿಲ್ಲ ಎಂದು ಹೇಳುವ ಮಾಜಿ ಸಚಿವ ರಾಯರಡ್ಡಿಗೆ ಮೆದುಳು ಮತ್ತು ಹೃದಯಕ್ಕೆ ಸಂಬಂಧವಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕಿಸಿದರು.
ಪಟ್ಟಣದ ಬಯಲು ರಂಗಮಂದಿರದಲ್ಲಿ ಬಿಜೆಪಿ ಮಂಡಲದಿಂದ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಪರ ಗುರುವಾರ ಹಮ್ಮಿಕೊಂಡಿದ್ದ ಮತಯಾಚನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೀರಾವರಿ ವಿಚಾರವಾಗಿ ಅಡ್ಡಗಲ್ಲು ಎಂದು ಅಪಹಾಸ್ಯ ಮಾಡಿವರಿಗೆ ಹಾಲಪ್ಪ ಆಚಾರ್ ಕೆರೆಗೆ ನೀರು ತರುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ಗಣಿ ಇಲಾಖೆಯಲ್ಲಿ ಅಗಾಧ ಕೆಲಸ ಮಾಡಿದ್ದಾರೆ. ೩೨೯೦ ಕೋಟಿ ರೂ. ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಅವರನ್ನು ಮತ್ತೊಮ್ಮೆ ಆರಿಸಿ ತರಬೇಕು ಎಂದರು.
ಮೋದಿಯವರು ಕಳೆದ ಒಂಬತ್ತು ವರ್ಷದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ ಮುಕ್ತ ಮಾಡಿದ್ದಾರೆ. ಎರಡು ಸಲ ಸರ್ಜಿಕಲ್ ಸ್ಟ್ರೈಕ್ ಮಾಡಲಾಗಿದೆ. ದೇಶದ ಬಗ್ಗೆ ಕಾಳಜಿ ಇಲ್ಲದ ಕಾಂಗ್ರೆಸ್‌ನ ರಾಹುಲ್, ಸೋನಿಯಾ ಗಾಂಧಿ ಸರ್ಜಿಕಲ್ ಸ್ಟ್ರೈಕ್‌ನ್ನೇ ಪ್ರಶ್ನಿಸಿದ್ದರು ಎಂದರು.
ಪ್ರಧಾನಿ ಮೋದಿಯವರನ್ನು ನಾಗರ ಹಾವಿಗೆ ಹೋಲಿಸಿದ ಮಲ್ಲಿಕಾರ್ಜುನ ಖರ್ಗೆ ಕಳೆದ ಸಲ ಸೋತಿದ್ದಾರೆ. ಚೀನಾ ಪಾಕಿಸ್ತಾನದ ಏಜಂಟ್ ಆಗಿ ಕೆಲಸ ಮಾಡುವ ಸೋನಿಯಾ ಗಾಂಧಿ ವಿಷ ಕನ್ಯೆಯೇ ಎಂದು ಪ್ರಶ್ನಿಸಿದರು.
ಮೀಸಲಾತಿಗಾಗಿ ನಾನು ಒಂದು ಸಮಾಜದ ಪರವಾಗಿ ಹೋರಾಟ ಮಾಡಿಲ್ಲ. ಅನ್ಯಾಯಕ್ಕೊಳಪಟ್ಟ ಎಲ್ಲಾ ಸಮಾಜದವರ ಸಲುವಾಗಿ ಹೋರಾಟ ಮಾಡಿದ್ದೇನೆ. ಪಂಚಮಸಾಲಿಗೆ ಬಿಜೆಪಿ ೨ಡಿ ಮೀಸಲಾತಿ ಕೊಟ್ಟಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ತೆಗೆದು ಹಾಕಲಾಗುವುದು ಎಂದು ಡಿಕೆಶಿ ಹೇಳಿದ್ದಾರೆ. ಹಿಂದೂ ಧರ್ಮದ ರಕ್ಷಣೆಗೆ ಬಿಜೆಪಿಗೆ‌ ಮತ ನೀಡಿ. ಬಿಜೆಪಿಗೆ ಮತ ನೀಡುವ ಮೂಲಕ ಋಣಿ ತೀರಿಸಬೇಕಿದೆ. ರಾಜ್ಯದಲ್ಲಿ ೧೩೦ಕ್ಕೂ ಅಧಿಕ ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.
ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಮಾತನಾಡಿ, ದಶಕಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ದೇಶವನ್ನು ಕತ್ತಲಲ್ಲಿ ಇಟ್ಟಿತ್ತು. ರಾಷ್ಟ್ರದಲ್ಲಿ ನರೇಂದ್ರ ಮೋದಿ ಚುಕ್ಕಾಣಿ ಹಿಡಿದಾಗಿನಿಂದ ಜಗತ್ತು ಭಾರತದ ಕಡೆಗೆ ನೋಡುವಂತಾಗಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್ ಮಾತನಾಡಿದರು.
ಈ ಸಂದರ್ಭದಲ್ಲಿ ಗಣ್ಯರಾದ ಬಸವಲಿಂಗಪ್ಪ ಭೂತೆ, ಅರವಿಂದಗೌಡ ಪಾಟೀಲ್, ಸಿ.ಎಚ್.ಪಾಟೀಲ್, ಶಿವಶಂಕರ ದೇಸಾಯಿ, ಶಿವನಗೌಡ ಬನ್ನಪ್ಪಗೌಡ್ರ, ರತನ್ ದೇಸಾಯಿ, ಶಿವಪ್ಪ ವಾದಿ, ಸುಧಾಕರ ದೇಸಾಯಿ, ಶರಣಪ್ಪ ಈಳಿಗೇರ್, ಶಂಕ್ರಪ್ಪ ಸುರಪುರ, ಶಿವಲೀಲಾ ದಳವಾಯಿ, ವೀರಭದ್ರಪ್ಪ ಅವಾರಿ, ವೀರಣ್ಣ ಹುಬ್ಬಳ್ಳಿ, ಪ್ರಕಾಶ ಬೆಲೇರಿ, ಅಮರೇಶ ಹುಬ್ಬಳ್ಳಿ, ಕಳಕಪ್ಪ ತಳವಾರ್, ಶಕುಂತಲಮ್ಮ ಮಾಲಿಪಾಟೀಲ್, ಕಳಕಪ್ಪ ಕಂಬಳಿ, ಬಸನಗೌಡ ತೊಂಡಿಹಾಳ, ಸಿದ್ದು ಮಣ್ಣಿನವರ್ ಇದ್ದರು.

0/Post a Comment/Comments