ಹಾಲಪ್ಪ ಆಚಾರ್‌ಗೆ ಟಿಕೆ್ ಸಿಗೋದು ಅನುಮಾನ


ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಹಾಲಪ್ಪ ಆಚಾರ್‌ಗೆ ಬಿಜೆಪಿ ಟಿಕೆಟ್ ಸಿಗೋದೆ ಅನುಮಾನ. ಹೊರಗಿನ ವ್ಯಕ್ತಿಯೊಬ್ಬರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿಸುವ ಚಿಂತನೆ ಬಿಜೆಪಿ ಪಕ್ಷದಲ್ಲಿ ನಡೆದಿದೆ. ಕೊನೆಗಳಿಗೆಯಲ್ಲಿ ಬದಲಾವಣೆಯಾಗಿ ಹಾಲಪ್ಪ ಆಚಾರ್‌ಗೆ ಟಿಕೇಟ್ ದೊರೆಯಬಹುದು ಎಂದು ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ರಾಯರಡ್ಡಿ ಕೂತುಹಲಕರ ಸಂಗತಿ ಹರಿಬಿಟ್ಟರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸುವ ಹಿನ್ನಲೆಯಲ್ಲಿ ಗುರುವಾರ ಹಮ್ಮಿಕೊಂಡ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ಪಕ್ಷದಲ್ಲಿ ನನ್ನಗೂ ಆಪ್ತ ಸ್ನೇಹಿತರು ಇದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ನಡೆಯುವ ಕೆಲ ರಾಜಕೀಯ ವಿದ್ಯಮಾನಗಳು ಗೊತ್ತಾಗುತ್ತವೆ. ಈ ಸಲ ಯಾರೇ ನನ್ನ ವಿರುದ್ದ ಸ್ಪರ್ಧೆಸಿದರು ನನ್ನ ಗೆಲುವು ನಿಶ್ಚಿತ. ಅಲ್ಲದೇ ರಾಜ್ಯದಲ್ಲಿ ಕೂಡ ಕಾಂಗ್ರೆಸ್ ಪಕ್ಷ ೧೩೦ಕ್ಕೂ ಅಧಿಕ ಸ್ಥಾನ ಪಡೆದು ಸರ್ಕಾರ ರಚನೆ ಮಾಡಲಿದೆ. 
ಹಾಲಪ್ಪ ಆಚಾರ್ ೩ ಪ್ರಬಲ ಖಾತೆಯ ಮಂತ್ರಿಯಾದರೂ, ಸಮರ್ಥವಾಗಿ ಖಾತೆ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಹೇಳಿಕೊಳ್ಳುವಂತಹ ಅಭಿವೃದ್ದಿ ಕೆಲಸ ಮಾಡಲು ಸಾಧ್ಯವಾಗಿಲ್ಲ. ನೀರಾವರಿ ಯೋಜನೆ ವಿಷಯದಲ್ಲಿ ತಾಂತ್ರಿಕ, ಕಾನೂನು ಮತ್ತು ಭೌಗೋಳಿಕ ವಾಸ್ತವ ಅಂಶ ತಿಳಿಯದೇ ಕ್ಷೇತ್ರದ ಮತದಾರರನ್ನು ದಿಕ್ಕು ತಪ್ಪಿಸುವ ಕೆಲಸ ಆಚಾರ್ ಮಾಡುತ್ತಿದ್ದಾರೆ. ಇಲ್ಲ ಸಲ್ಲದ ಆಮಿಷ ಒಡ್ಡಲು ಮುಂದಾಗಿರುವದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದರು.
ಸಿಎಂ ಬೊಮ್ಮಾಯಿ ಮೀಸಲಾತಿಯನ್ನು ಚುನಾವಣೆ ದೃಷ್ಟಿಯಿಂದ ಘೋಷಣೆ ಮಾಡಿದ್ದಾರೆ ಹೊರತು ಇದಕ್ಕೆ ಸಂವಿಧಾನದ ಮಾನ್ಯತೆ ಇಲ್ಲವಾಗಿದೆ ಎಂದರು.
-----
ಸಿದ್ದರಾಮಯ್ಯ ಆಗಮನ- ಏ.೧೩ರಂದು ಸಂಜೆ ೫ಗಂಟೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಕುಕನೂರಿಗೆ ಆಗಮಿಸಲಿದ್ದಾರೆ. ಕಾರ್ಯಕ್ರಮಕ್ಕೆ ೩೦ ಸಾವಿರ ಜನ ಸೇರುವ ನಿರೀಕ್ಷೆ ಇದೆ. ಕುಕನೂರಿನ ವಿದ್ಯಾನಂದ ಗುರುಕುಲ ಕಾಲೇಜು ಆವರಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುವದು. ಏ.೧೭ರಂದು ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಾಯರಡ್ಡಿ ತಿಳಿಸಿದರು.
ಇದೇ ವೇಳೆ ಹಲವಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಚಂಡೂರು, ಮಹಿಳಾ ಅಧ್ಯಕ್ಷರಾದ ಸಾವಿತ್ರಿ ಗೊಲ್ಲರ್, ಫರಿದಾ ಬೇಗಂ, ಕೆಪಿಸಿಸಿ ಸದಸ್ಯೆ ಗಿರಿಜಾ ಸಂಗಟಿ, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಯಂಕಣ್ಣ ಯರಾಶಿ, ಸಂಯೋಜಕ  ಅಂದಾನಗೌಡ ಪಾಟೀಲ್, ಪ್ರಮುಖರಾದ ವೀರನಗೌಡ ಬಳೂಟಗಿ, ಕೆರಿಬಸಪ್ಪ ನಿಡಗುಂದಿ, ಎ.ಜಿ.ಭಾವಿಮನಿ, ಶಿವನಗೌಡ ದಾನರಡ್ಡಿ, ರಾಘವೇಂದ್ರ ಜೋಶಿ, ಜಯಶ್ರೀ ಕಂದಕೂರು, ಆರ್‌.ಜಿ‌.ನಿಂಗೋಜಿ, ಹನುಮೇಶ ಕಡೇಮನಿ, ಟಿ.ರತ್ನಾಕರ, ಹನುಮಂತಪ್ಪ ಹನುಮಾಪುರ, ನಾಗರಾಜ ನವಲಹಳ್ಳಿ, ಶರಣಪ್ಪ ಗಾಂಜಿ, ಮಲ್ಲು ಜಕ್ಕಲಿ, ಈಶ್ವರ ಅಟಮಾಳಗಿ, ಸಂಗಮೇಶ ಗುತ್ತಿ,  ರಾಮಣ್ಣ ಭಜಂತ್ರಿ ಸೇರಿದಂತೆ ಇತರರಿದ್ದರು.
---------------------

0/Post a Comment/Comments