ಸಮಾಜದ ಒಳಿತಿಗೆ ಶ್ರಮಿಸಿದ ಭಗೀರಥ ಮಹರ್ಷಿ

ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಛಲ ಮತ್ತು ದೃಢ ಸಂಕಲ್ಪದ ಪ್ರತೀಕ ಭಗೀರಥ ಮಹರ್ಷಿಗಳ ಆದರ್ಶ ಎಲ್ಲರೂ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ವಿಠಲ್ ಚೌಗಲೆ ಹೇಳಿದರು.
ಪಟ್ಟಣದಲ್ಲಿ ಭಗೀರಥ ಸಮುದಾಯ ಮತ್ತು ತಾಲೂಕಾಡಳಿ ಗುರುವಾರ ಹಮ್ಮಿಕೊಂಡಿದ್ದ ಭಗೀರಥ ಮಹರ್ಷಿ ಜಯಂತಿ ನಿಮಿತ್ತ ವೃತ್ತಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾತ್ಮರನ್ನು ಗೌರವದಿಂದ ಕಾಣಬೇಕು. ಮನುಷ್ಯನಿಗೆ ಯಾವುದು ಅಸಾಧ್ಯವಲ್ಲ ಎನ್ನುವುದಕ್ಕೆ ಭಗೀರಥ ಮಹರ್ಷಿಗಳು ಸಾಕ್ಷಿಯಾಗಿದ್ದಾರೆ. ಮನುಕುಲದ ಒಳಿತಿಗಾಗಿ ಸತತ ತಪಸ್ಸಿನ ಮೂಲಕ ಭೂಮಿಗೆ ಗಂಗೆಯನ್ನು ಕರೆ ತರುವಲ್ಲಿ ಅವರ ಶ್ರಮ ಎಂದಿಗೂ ಮರೆಯುವಂತಿಲ್ಲ. ಇಂಥ ಶರಣರ ಆದರ್ಶ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಸಾರ್ಥಕತೆ ಪಡೆಯಲು ಸಾಧ್ಯ ಎಂದರು.
ಈ ಸಂದರ್ಭ ಭಗೀರಥ ಸಮುದಾಯದ ತಾಲೂಕು ಅಧ್ಯಕ್ಷ ಈರಪ್ಪ ದಸ್ತಾನಿ, ತಾಪಂ ಇಒ ಸಂತೋಷ ಪಾಟೀಲ್, ಪ್ರಮುಖರಾದ ಬಸವರಾಜ ಪೂಜಾರ್, ವೈ.ಬಿ.ಮೇಟಿ, ಶರಣಪ್ಪ ಉಪ್ಪಾರ್, ಹನುಮಂತಪ್ಪ ಕೆರಳ್ಳಿ, ಮೈಲಾರಪ್ಪ ಚಾಮಲಾಪುರ, ಯಲ್ಲಪ್ಪ ಮಡಿಕೇರಿ, ಕರಿಯಪ್ಪ ಗುರಿಕಾರ, ಆನಂದ ಮುದಕಪ್ಪ, ರಾಮನಗೌಡ, ಶಿವಕುಮಾರ ಸೇರಿದಂತೆ ಇತರರಿದ್ದರು.
--

0/Post a Comment/Comments