ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ವಿಧಾನಸಭಾ ಚುನಾವಣೆ ನಿಮಿತ್ತ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ರಾಯರಡ್ಡಿ ಅವರ ಪರವಾಗಿ ಪುತ್ರಿ ಮಮತಾ ರಾಯರಡ್ಡಿ, ಅಳಿಯ ರತನ್ ಭಾತೆ ಅವರು ಯಲಬುರ್ಗಾ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಮತದಾರರ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಸವರಾಜ ರಾಯರಡ್ಡಿ ಪುತ್ರಿ ಮಮತಾ ರಾಯರೆಡ್ಡಿ(ಭಾತೆ) ಅವರು ಮಾತನಾಡಿ, ಈ ಕ್ಷೇತ್ರದಲ್ಲಿ ನಮ್ಮ ತಂದೆಯವರು ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಅವರಿಗೆ ಈ ಸಲ ಮತ್ತೊಮ್ಮೆ ಅವಕಾಶವನ್ನು ಮತದಾರರು ನೀಡಬೇಕಿದೆ. ಅವರ ಆಡಳಿತ ಅವಧಿಯಲ್ಲಿ ಜನಪರ ಅಭಿವೃದ್ಧಿ ಕಾರ್ಯಗಳು ಇಡೀ ಮಾದರಿ ಯಾಗಿದೆ. ತಾಲೂಕಿನಲ್ಲಿ ದೊಡ್ಡಮಟ್ಟದ ಕೆಲಸವಾಗಲು ರಾಯರಡ್ಡಿಯವರ ಪರಿಶ್ರಮವೇ ಕಾರಣವಾಗಿದೆ ಎಂದರು.
ಕ್ಷೇತ್ರದ ಪ್ರಬುದ್ಧ ಮತದಾರರು ಯಾವುದೇ ಆಸೆ ಆಮೀಷಗಳು ಬಲಿಯಾಗದೆ ಮುಂದಿನ ಐದು ವರ್ಷದ ಭವಿಷ್ಯದ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ರಾಯರಡ್ಡಿಯವರಿಗೆ ಮತವನ್ನು ಹಾಕುವ ಮೂಲಕ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಕೆಪಿಸಿಸಿ ಸದಸ್ಯೆ ಗಿರಿಜಾ ರೇವಣೆಪ್ಪ ಸಂಗಟಿ ಮಾತನಾಡಿ, ಕ್ಷೇತ್ರಾದ್ಯಂತ ಬಸವರಾಜ ರಾಯರೆಡ್ಡಿಯವರ ಪರವಾಗಿ ಒಲವು ವ್ಯಕ್ತವಾಗುತ್ತಿದೆ. ಅವರ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳೇ ಅವರ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ ಸಾವಿತ್ರಿ ಗೊಲ್ಲರ್, ಫರೀದಾಬೇಗಂ, ಡಾ.ನಂದಿತಾ ದಾನರೆಡ್ಡಿ, ಜಯಶ್ರೀ ಕಂದಕೂರು, ಶರಣಮ್ಮ ಪೂಜಾರ, ಮುಖಂಡರು ಇದ್ದರು.
Post a Comment