ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಬಿಜೆಪಿ ಸರ್ವ ಜನಾಂಗಕ್ಕಾಗಿ ಶ್ರಮಿಸಿದ ಪಕ್ಷವಾಗಿದೆ ಎಂದು ಎಂಎಲ್ಸಿ ಹೇಮಲತಾ ನಾಯಕ್ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕರ್ತರೇ ಪಕ್ಷದ ಜೀವಾಳ ಎನ್ನುವ ಸಿದ್ಧಾಂತದೊಂದಿಗೆ ಬಿಜೆಪಿ ಪಕ್ಷ ಉದಯಿಸಿ ನಾಲ್ಕೂವರೆ ದಶಕ ಕಳದಿದೆ. ಮಾಜಿ ಪ್ರಧಾನಿ ದಿ.ವಾಜಪೇಯಿ ನೇತೃತ್ವದಲ್ಲಿ ಬಿಜೆಪಿ ಪಕ್ಷ ಸಂಘಟನಾತ್ಮಕ ಶಕ್ತಿ ಮೂಲಕ ಅಧಿಕಾರ ಹಿಡಿದಿದೆ. ಬಿಜೆಪಿಯು ಎಸ್ಸಿ,ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸುವ ಮೂಲಕ ಬಹುದೊಡ್ಡ ಕೊಡುಗೆ ನೀಡಿದೆ. ಇದರ ಬಗ್ಗೆ ಮನೆ ಮನೆಗೆ ತೆರಳಿ ಕಾರ್ಯಕರ್ತರು ಮೀಸಲಾತಿಯ ವಿಚಾರದ ಕುರಿತು ತಿಳಿಸುವ ಕೆಲಸ ಮಾಡಬೇಕು ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್ ಮಾತನಾಡಿ, ವಿಶ್ವದಲ್ಲೇ ಬಿಜೆಪಿ ಮಾದರಿ ಪಕ್ಷವಾಗಿದೆ.
ಸಾಮಾಜಿಕ ತಳಹದಿಯಲ್ಲಿ ಎಲ್ಲ ವರ್ಗದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಆದ್ಯತೆ ನೀಡಿದೆ.
ಬಿಜೆಪಿ ನಿಯೋಜಿತ ಅಭ್ಯರ್ಥಿ ಹಾಲಪ್ಪ ಆಚಾರ್‌ರನ್ನು ಮತ್ತೊಮ್ಮೆ ಶಾಸಕರನ್ನಾಗಿ ಮಾಡಲು ಮತದಾರರು ಆಶೀರ್ವದಿಸಬೇಕು. ಪಕ್ಷದ ಕಾರ್ಯಕರ್ತರು ಬೂಟ್ ಮಟ್ಟದಲ್ಲಿ ಪಕ್ಷ ಸಂಘಟಿಸಿ ಹಾಲಪ್ಪ ಆಚಾರ್ ಗೆಲುವಿಗೆ ಶ್ರಮಿಸಬೇಕು ಎಂದರು.
ಈ ಸಂದರ್ಭ ಸಚಿವ ಹಾಲಪ್ಪ ಆಚಾರ್, ಪ್ರಮುಖರಾದ ವೀರಣ್ಣ ಹುಬ್ಬಳ್ಳಿ, ಅಮರೇಶ ಹುಬ್ಬಳ್ಳಿ, ಶಾಂತಾ ಮಾಟೂರು, ಶಿವಪ್ಪ ವಾದಿ, ಪ್ರಭುರಾಜ ಕಲಬುರ್ಗಿ, ಗದ್ದೆಪ್ಪ ಕುಡಗುಂಟಿ, ಸಿದ್ರಾಮೇಶ ಬೇಲೇರಿ, ಅಯ್ಯನಗೌಡ ಕೆಂಚಮ್ಮನವರ, ಕಳಕಪ್ಪ ಕಂಬಳಿ, ಬಸನಗೌಡ ತೊಂಡಿಹಾಳ ಸೇರಿದಂತೆ ಇತರರಿದ್ದರು.
Post a Comment