ವನಜಭಾವಿ ಶಾಲೆಯಲ್ಲಿ ಸರಸ್ವತಿ ಪೂಜಾ ಕಾರ್ಯಕ್ರಮ

ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ತಾಲೂಕಿನ ವನಜಭಾವಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಸ್ವತಿ ಪೂಜಾ ಕಾರ್ಯಕ್ರಮ ಮತ್ತು ಐದನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಆಗಮಿಸಿದ  2023 ನೇ ಸಾಲಿನಲ್ಲಿ  ಕಾಲೇಜು ಪ್ರಾಧ್ಯಾಪಕರಾಗಿ ಆಯ್ಕೆಯಾಗಿರುವ ಕೋಳಿಹಾಳ ಶಾಲೆಯ ಸಹ ಶಿಕ್ಷಕರಾಗಿರುವ ಶಂಕರಹಳ್ಳಿ ಗುರುಗಳನ್ನು  ಶಾಲೆ  ವತಿಯಿಂದ ಗೌರವಿಸಲಾಯಿತು. ಹಾಗೂ  ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಕೋರಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲಕರವಾದ ನೆನಪಿನ ಕಾಣಿಕೆಗಳನ್ನು ಮಕ್ಕಳಿಗೆ ವಿತರಿಸಲಾಯಿತು. ಸತತ ಪರಿಶ್ರಮದಿಂದ ನೀವು ಏನನ್ನಾದರೂ ಸಾಧಿಸಬಹುದು, ಈಗಲೇ ದೊಡ್ಡ ಗುರಿಗಳನ್ನು ಹಾಕಿಕೊಳ್ಳಿ ಅದರೆಡೆಗೆ ನಿಮ್ಮ ಪ್ರಯತ್ನ ಸಾಗಲಿ ಎಂದು ಪ್ರಾಧ್ಯಾಪಕರಾದ ಶಂಕರಹಳ್ಳಿ ಯವರು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಹೇಂದ್ರ ಬಿ ಸಿ  ಮತ್ತು ನಾಗರಾಜ ಪಟಗಾರ ಹಾಗೂ ಎಸ್‌ಡಿಎಂಸಿ ಉಪಾಧ್ಯಕ್ಷರಾದ ಮಲ್ಲಮ್ಮ ಗೌಡ್ರು , ಗ್ರಾಮ ಪಂಚಾಯತ್ ಸದಸ್ಯರಾದ ಬಸಮ್ಮ ಪರಂಗಿ ಪಾಲಕರಾದ ದೇವೇಂದ್ರಪ್ಪ ಗೊಂದಿ, ವೀರನಗೌಡ ಪೊಲೀಸ್ ಪಾಟೀಲ್, ಓಂಕಾರಪ್ಪ ಮೇಟಿ, ಹನಮಂತಪ್ಪ ತಳವಾರ್, ಯಮನೂರ ಪರಂಗಿ, ಅಶೋಕ್ ಮೇಟಿ , ಮರಿಯಮ್ಮ ಆಡೂರು ಪಾಲ್ಗೊಂಡಿದ್ದರು.

0/Post a Comment/Comments