ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಕ್ಷೇತ್ರದಲ್ಲಿ ಬಡ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.
ತಾಲೂಕಿನ ಮುರಡಿ ಮತ್ತು ಹುಣಸಿಹಾಳದಲ್ಲಿ ೨೦೧೭-೧೮ನೇ ಸಾಲಿನ ಕಕ ಅನುದಾನದಡಿ ತಲಾ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸರ್ಕಾರಿ ಪ್ರೌಢ ಶಾಲಾ ನೂತನ ಕಟ್ಟಡ ಉದ್ಘಾಟಿಸಿ ಗುರುವಾರ ಮಾತನಾಡಿದರು.
ಎಲ್ಲಾ ಮಕ್ಕಳಿಗೂ ವಿದ್ಯೆ ಸಿಗುವ ದೃಷ್ಟಿಯಿಂದ ಅನೇಕ ಕಲ್ಯಾಣ ಕಾರ್ಯಕ್ರಮ ಮಾಡಲಾಗಿದೆ. ಪ್ರತಿ ಶಾಲೆಗಳಿಗೆ ಕೊಠಡಿ ಶೌಚಗೃಹ, ಕುಡಿವನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕು. ಅವರ ಭವಿಷ್ಯ ರೂಪಿಸುವ ಹೊಣೆಗಾರಿಕೆ ಮರೆಯಬಾರದು ಎಂದರು.
ತಾಲೂಕಿನ ಬೇವೂರು, ಹಿರೇಅರಳಿಹಳ್ಳಿ, ಗೆದಗೇರಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸಚಿವರು ಚಾಲನೆ ನೀಡಿದರು.
ಈ ಸಂದರ್ಭ ತಹಸೀಲ್ದಾರ್ ವಿಠ್ಠಲ ಚೌಗಲ್, ತಾಪಂ ಇಒ ಸಂತೋಷ ಪಾಟೀಲ್, ಅಧಿಕಾರಿಗಳಾದ ಪ್ರಕಾಶಗೌಡ ಪಾಟೀಲ್, ಮಹಾದೇವಪ್ಪ ಪತ್ತಾರ, ಅನಿಲ್ ಪಾಟೀಲ್, ಪದ್ಮನಾಭ ಕರ್ಣಂ, ಪಿಡಿಒಗಳಾದ ಶರಣಗೌಡ ಪಾಟೀಲ್, ಅಬ್ದುಲ್ ಗಫರ್, ರಮೇಶ, ಪ್ರಮುಖರಾದ ಅಯನ್ಯಗೌಡ ಕೆಂಚಮ್ಮನವರ್, ರತನ್ ದೇಸಾಯಿ, ಶರಣಪ್ಪ ಈಳಗೇರ್, ವೀರಣ್ಣ ಹುಬ್ಬಳ್ಳಿ, ಶಿವಪುತ್ರಪ್ಪ ಹರ್ತಿ, ಶರಣು ಹಾವೇರಿ, ವಿಜಯ ದಾಸರ್, ನಾಗರಾಜ ಹಾಲಳ್ಳಿ, ಭೀಮಜ್ಜ ಗುರಿಕಾರ್ ಸೇರಿದಂತೆ ಇತರರಿದ್ದರು.
-----
Post a Comment