ರಂಗು ರಂಗಿನ ಬಣ್ಣದೋಕುಳಿಯಲ್ಲಿ ಮಿಂದೆದ್ದ ಯುವ ಜನಾಂಗ

ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಹೋಳಿ ಹಬ್ಬದ ನಿಮಿತ್ತ ಪಟ್ಟಣದಲ್ಲಿ ಇಂದು (ಬುಧವಾರ) ಆಚರಿಸಲಾಗುವ ಬಣ್ಣದೋಕುಳಿ ಭಾವೈಕ್ಯತೆಗೆ ಹೆಸರಾಗಿದೆ. ಅಲ್ಲದೇ ಹೋಳಿ ಪ್ರಯುಕ್ತ ನಡೆಯುವ ವಿವಿಧ ಮನರಂಜನಾ ದೃಶ್ಯಗಳು ಜಿಲ್ಲೆಯಲ್ಲೇ ವಿಶೇಷ ಎನಿಸಿವೆ.

ಕಳೆದ ಐದು ದಿನಗಳಿಂದ ಪಟ್ಟಣದ ನಾಲ್ಕು ಕಡೆ ಕಾಮದೇವರನ್ನು ಪ್ರತಿಷ್ಠಾಪಿಸಲಾಗುತ್ತದೆ. ಕಂಡೇರಕಾಮ, ಗಾಳಿಯರಕಾಮ, ದೈವದ ಕಾಮ ಮತ್ತು ಸರ್ಕಾರಿಕಾಮ ಪ್ರತಿಷ್ಠಾಪಿಸಲಾಗಿದ್ದು, ಕಾಮದೇವ, ರತಿದೇವಿ, ಭೀಮನ ಮೂರ್ತಿಗಳನ್ನು ಅಲಂಕೃತಗೊಳಿಸಿ ಪ್ರತಿಷ್ಠಾಪಿಸಲಾಗಿದ್ದು, ನಿವಾಸಿಗಳಿಂದ ನೈವೇದ್ಯ ಅರದಪಣೆ, ಪೂಜೆ ಪುನಸ್ಕಾರ ನಡೆಯುತ್ತದೆ. ರಾತ್ರಿಯಿಡೀ ಯುವಕರು ಪ್ರದರ್ಶಿಸುವ ವಿವಿಧ ಸೋಗುಗಳು ಜನರನ್ನು ನಗೆಗಡಲಲ್ಲಿ ತೇಲಿಸಿತು. ಜತೆಗೆ ಕಡಬೇಡ ಸೋಗು ನೆರೆದವರ ಮೈನವಿರೇಳಿಸುವಂತಿತ್ತು. ಕಲ್ಪಿತ ಶವದ ಮುಂದೆ ಅಳುವ ದೃಶ್ಯ ನೋಡುಗರ ಮನರಂಜಿಸಿತು.
ಮಾ.೮ ರಂದು ಬೆಳಗಿನ ಜಾವ ನಾಲ್ಕು ಕಾಮದೇವರನ್ನು ವಾದ್ಯ ವೈಭವದೊಂದಿಗೆ ಉಸುಕಿನ ಕಟ್ಟೆ ವರೆಗೆ ಮೆರವಣಿಗೆ ನಡೆಸಲಾಗುತ್ತದೆ. ಬಳಿಕ ಕಾಮದಹನ ಮಾಡಲಾಗುತ್ತದೆ. ಯಲಬುರ್ಗಾದಲ್ಲಿ ಆಚರಿಸಲಾಗುವ ಹೋಳಿ ಜಿಲ್ಲೆಯಲ್ಲೇ ವಿಶೇಷತೆ ಪಡೆದುಕೊಂಡಿದ್ದು, ಭಾವೈಕ್ಯತೆಗೆ ಹೆಸರಾಗಿದೆ. 
--
   ಹಿರೇಮ್ಯಾಗೇರಿಯಲ್ಲಿ ಯುವಕರು ಬಣ್ಣದಾಟ ಆಡಿದರು.

ನಾನಾ ಕಡೆ ಹೋಳಿ ಆಚರಣೆ: ತಾಲೂಕಿನ ಮುಧೋಳ, ಹಿರೇಮ್ಯಾಗೇರಿ ಸೇರಿದಂತೆ ನಾನಾ ಕಡೆ ಮಂಗಳವಾರ ಯುವಕರು, ಮಹಿಳೆಯರು ಪರಸ್ಪರ ಬಣ್ಣ ಎರಚಿ ಹೋಳಿ ಆಚರಿಸಿದರು. ಇನ್ನೂ ಬುಧವಾರ ಹೋಳಿಯ ರಂಗಿನಾಟ ನಡೆಯಲಿದೆ.
--

0/Post a Comment/Comments