ತರಲಕಟ್ಟಿ ಗ್ರಾಮದಲ್ಲಿ ಯುವಕರು, ಚಿಣ್ಣರು ಬಣ್ಣದೋಕುಳಿ ಆಡಿದರು.
ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಯುಗಾದಿ ಹಬ್ಬದ ಪ್ರಯುಕ್ತ ತಾಲೂಕಿನ ನಾನಾ ಗ್ರಾಮಗಳಲ್ಲಿ ಯುವಕರು, ಮಹಿಳೆಯರು, ಮಕ್ಕಳು ಬಣ್ಣದೋಕುಳಿ ಆಡಿದರು.
ವಸಂತ ಕಾಲದ ಆಗಮನ ಸೂಚಿಸುವ ಯುಗಾದಿ ಅಮವಾಸ್ಯೆ ಮತ್ತು ಪಾಡ್ಯದಂದು ಎಲ್ಲಾ ದೇವರಿಗೆ ನೈವೇದ್ಯ ಅರ್ಪಿಸಲಾಗುತ್ತದೆ. ಹೊಸ ಯುಗದ ಹುಟ್ಟನ್ನು ಸಂಕೇತಿಸುವ ಯುಗಾದಿ ರೈತರಿಗೆ ವಿಶೇಷ ದಿನ ಮತ್ತು ಹಬ್ಬವಾಗಿದೆ. ಕೆಲ ಹಳ್ಳಿಯಲ್ಲಿ ಪಾಡ್ಯದಂದು ಆಂಜನೇಯ ದೇವಸ್ಥಾನದ ಆವರಣದಲ್ಲಿ ನೀರಿನ ಕುಂಡ ಆಯಲಾಗುತ್ತದೆ. ಇದು ಹೊಸ ವರ್ಷದ ಆಗಮನವನ್ನು ಸ್ವಾಗತಿಸುವ ಧಾರ್ಮಿಕ ಕಾರ್ಯಕ್ರಮವಾಗಿದೆ. ಅಮವಾಸ್ಯೆ ಕಳೆದು ಮೂರನೇ ದಿನಕ್ಕೆ ರೈತರು, ಯುವಕರು, ಮಹಿಳೆಯರು ಮಕ್ಕಳು ಬಣ್ಣದಾಟ ಆಡಿ ಸಂಭ್ರಮಿಸಿದರು. ಮುರಡಿ, ತಾಳಕೇರಿ, ಯಡ್ಡೋಣಿ, ಚೌಡಾಪುರ ಸೇರಿದಂತೆ ನಾನಾ ಕಡೆ ಬಣ್ಣದೋಕುಳಿ ನಡೆಯಿತು.
----
Post a Comment