ಬಳೂಟಗಿ-ಬಸಾಪುರ ಕೆರೆಗೆ ಕೃಷ್ಣೆ ನೀರು ಆಗಮನ


ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಹಗೇದಾಳ ಗ್ರಾಮದ ಜಾಕ್ವೆಲ್‌ನಿಂದ ತಾಲೂಕಿನ ಬಳೂಟಗಿ ಮತ್ತು ಬಸಾಪುರ ಗ್ರಾಮದ ಕೆರೆಗೆ  ಕೃಷ್ಣಾ ನದಿ ನೀರು ಭಾನುವಾರ ರಾತ್ರಿ ಹರಿದು ಬಂದಿದೆ.
ಸಚಿವ ಹಾಲಪ್ಪ ಆಚಾರ್ ಸ್ಥಳಕ್ಕೆ ಭೇಟಿ ನೀಡಿ ಕೆರೆಗೆ ಬಂದ ನೀರನ್ನು ವೀಕ್ಷಿಸಿ ಸಂತಸ ಪಟ್ಟರು.
ಬಳಿಕ ಸಚಿವರು ಮಾತನಾಡಿ, ನನ್ನ ಕ್ಷೇತ್ರದ ಕರೆಗಳಿಗೆ ಕೃಷ್ಣೆ ನೀರು ತರುವ ಸಂಕಲ್ಪ ಮಾಡಿದ್ದೆ. ಆ ಕನಸು ಈಗ ನನಸಾಗಿದೆ. ಕ್ಷೇತ್ರದ ಜನತೆಗೆ ಚುನಾವಣೆ ವೇಳೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ ಎಂದರು.
ಅವಳಿ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು. ನನ್ನ ಅವಧಿಯಲ್ಲಿ ಈ ಮಹತ್ವದ ಕೆಲಸ ಮಾಡಿದ್ದು ತೃಪ್ತಿಕರವಾಗಿದೆ. 
ಯೋಜನೆ ಜಾರಿ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಇಚ್ಛಾಶಕ್ತಿ ಇರಲಿಲ್ಲ. ಹೀಗಾಗಿ ಇಂಥ ಕಾರ್ಯವೂ ಅವರಿಂದ ಆಗಿಲ್ಲ ಎಂದರು. ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಕಳಕಪ್ಪ ತಳವಾರ್, ಸದಸ್ಯರಾದ ಅಶೋಕ ಅರಕೇರಿ, ಪ್ರಮುಖರಾದ ಈರಣ್ಣ ಗೊಗೇರಿ, ಹನುಮಂತ ರಾಠೋಡ, 
ಶರಣಪ್ಪ ಈಳಿಗೇರ್, ಸಿದ್ರಾಮೇಶ ಬೆಲೇರಿ, ವೀರೇಂದ್ರ ಇಟಗಿ, ಸೇರಿದಂತೆ ಇತರರಿದ್ದರು.
-----

0/Post a Comment/Comments