ಪುನೀತ್ ರಾಜ್‍ಕುಮಾರ್ ಸಾಮಾಜಿಕ ಸೇವೆ ಮರೆಯಲು ಸಾಧ್ಯವಿಲ್ಲ


ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಕರ್ನಾಟಕ ರತ್ನ ದಿ.ಪುನೀತ್ ರಾಜಕುಮಾರ ಅವರು ಕರುನಾಡಿಗೆ ಸಲ್ಲಿಸಿದ ಸಾಮಾಜಿಕ ಸೇವೆಯನ್ನು ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.
ಪಟ್ಟಣದಲ್ಲಿ ಅಪ್ಪು ಹುಡುಗರ ಸಂಘ ಶುಕ್ರವಾರ ಆಯೋಜಿಸಿದ್ದ ನಟ ಪುನೀತ್ ಅವರ ೪೯ನೇ ಜನ್ಮದಿನ ಪ್ರಯುಕ್ತ ಅಪ್ಪು ಕಂಚಿನ ಮೂರ್ತಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಪುನೀತ ಸಾಮಾಜಿಕ ಕಳಕಳಿ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ. ಕನ್ನಡ ಚಿತ್ರರಂಗದಲ್ಲಿ ನಟರಾಗಿ ಪುನೀತ್ ಅಮೋಘ ಸಾಧನೆ ಮಾಡಿದ್ದಾರೆ. ಅವರು ಮಾಡಿರುವ ಅನೇಕ ಸಮಾಜಮುಖಿ ಕಾರ್ಯಗಳು ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿವೆ.
ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿ, ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ನಟನೆ ಮಾಡಿದ್ದಾರೆ. ಅವರ ಚಿತ್ರಗಳು ಸಮಾಜ ಬದಲಾವಣೆಗೆ ಪೂರಕವಾಗಿವೆ. ಪುನೀತ್ ಹಾಕಿಕೊಟ್ಟಿರುವ ಆದರ್ಶ ವಿಚಾರಗಳನ್ನು ಎಲ್ಲರೂ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭ ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಪ್ರಮುಖರಾದ ರತನ್ ದೇಸಾಯಿ, ಶರಣಪ್ಪ ಈಳಗೇರ್, ವೀರಣ್ಣ ಹುಬ್ಬಳ್ಳಿ, ವಿಕಾಸ್ ಉಳ್ಳಾಗಡ್ಡಿ, ವಿಜಯ ಜಕ್ಕಲಿ, ಮಂಜುನಾಥ ಅಧಿಕಾರಿ, ಶಂಕರ್ ತೆಂಗಿನಕಾಯಿ, ಶಿವರಾಜ ಭಾವಿಮನಿ, ಮಹಾಂತೇಶ ಭಾಸ್ಕರ್, ಕಲ್ಲಪ್ಪ ಕರಮುಡಿ ಸೇರಿದಂತೆ ಇತರರಿದ್ದರು.
-----

0/Post a Comment/Comments