ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಯಲಬುರ್ಗಾ
ಆರನೇ ತರಗತಿ ಮಕ್ಕಳ ಆದರ್ಶ ಮತ್ತು ಇತರ ಶಾಲಾ ಪ್ರವೇಶ ಪರೀಕ್ಷೆಯನ್ನು ಪಾರದರ್ಶಕ ನಡೆಸುವಂತೆ ಒತ್ತಾಯಿಸಿ ಕರವೆ (ಶಿವರಾಮೇಶ್ವರ ಬಣ)ತಾಲೂಕು ಘಟಕದಿಂದ ಪಟ್ಟಣದ ಬಿಇಒ ಕಚೇರಿಯ ವ್ಯವಸ್ಥಾಪಕ ವೆಂಕಟೇಶ ಕುಲಕರ್ಣಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಘಟಕದ ತಾಲೂಕು ಅಧ್ಯಕ್ಷ ಶಿವಕುಮಾರ ನಾಗನಗೌಡ್ರ ಮಾತನಾಡಿ, ಈಗಾಗಲೇ ೬ನೇ ತರಗತಿ ಪ್ರವೇಶಾತಿಗಾಗಿ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಪರೀಕ್ಷೆಗಳು ಪಾರದರ್ಶಕವಾಗಿ ನಡೆದಿಲ್ಲ. ಪರೀಕ್ಷೆಯಲ್ಲಿ ಕೆಲ ಮಕ್ಕಳಿಗೆ ಹೇಳಿ ಕೊಡುವುದು, ಪರೀಕ್ಷೆ ಬಳಿಕ ಓಎಂಆರ್ ತುಂಬುವುದರ ಬಗ್ಗೆ ಪರೀಕ್ಷೆ ಬರೆದು ಬಂದ ಮಕ್ಕಳು ಆರೋಪಿಸಿದ್ದಾರೆ. ಇಂಥ ಅಕ್ರಮ ಚಟುವಟಿಕೆಗಳು ನಡೆಯದಂತೆ ತಡೆಯಲು ಸಂಬಂಧಿಸಿದ ಅಧಿಕಾರಿಗಳು ನಿಗಾ ವಹಿಸಬೇಕು. ಮಾ.೨೬ ರಂದು ನಡೆಯುವ ಆದರ್ಶ ವಿದ್ಯಾಲಯ ಪ್ರವೇಶಾತಿ ಪರೀಕ್ಷೆಗಳು ನಡೆಯಲಿವೆ. ತಾವು ಗಮನಹರಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು. ನಿಷ್ಕಾಳಜಿ ವಹಿಸಿದರೆ ಆಡಳಿತ ಮಂಡಳಿ ವಿರುದ್ಧ ಉಗ್ರ ಪ್ರತಿಭಟನೆ ಮಾಡಲಾವುದು ಎಂದು ಎಚ್ಚರಿಕೆ ನೀಡಿದರು.
ಘಟಕದ ತಾಲೂಕು ಉಪಾಧ್ಯಕ್ಷ ರಾಮನಗೌಡ ಪೊ.ಪಾಟೀಲ್, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಭೀಮೇಶ ಬಂಡಿವಡ್ಡರ್, ಪದಾಧಿಕಾರಿಗಳಾದ ರವಿಕಾಂತ ಪಾಟೀಲ್, ಘನವಂತೇಶ ಚನ್ನದಾಸರ, ಆನಂದ ಅಂಗಡಿ, ಹನುಮೇಶ ಗೌಡ್ರ, ಲಿಂಗರಾಜ ದೇಸಾಯಿ ಸೇರಿದಂತೆ ಇತರರಿದ್ದರು.
-----
Post a Comment