ಯಲಬುರ್ಗಾ ಪಟ್ಟಣದಲ್ಲಿ ನೀರಿನ ಸಮಸ್ಯೆ

ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಪಟ್ಟಣದ ೬ ಮತ್ತು ೭ನೇ ವಾರ್ಡಿನ ನಿವಾಸಿಗಳಿಗೆ ಕುಡಿವ ನೀರು ಪೂರೈಸುವಂತೆ ಒತ್ತಾಯಿಸಿ ಸೋಮವಾರ ಪಪಂ ಎದುರು ನಿವಾಸಿಗಳು ಪ್ರತಿಭಟನೆ ನಡೆಸಿ ಇಂಜಿನಿಯರ್ ಉಮೇಶ್ ಬೇಲಿಗೆ ಮನವಿ ಸಲ್ಲಿಸಿದರು.
ನಿವಾಸಿ ಫಕೀರಪ್ಪ ಉಪ್ಪಾರ ಮಾತನಾಡಿ, ಪಟ್ಟಣದ ೬ ಮತ್ತು ೭ ವಾರ್ಡ್‌ಗೆ ಕುಡಿವ ನೀರಿನ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ನೀರು ಸರಬರಾಜು ಕುರಿತು ಅನೇಕ ವರ್ಷಗಳಿಂದ ಪಪಂಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಕೂಡಲೇ ವಾರ್ಡಿಗಳಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಅಲ್ಲದೇ ವಾರ್ಡ್‌ಗಳಲ್ಲಿ ಚರಂಡಿ ತುಂಬಿದ್ದು, ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿದೆ. ಇದರಿಂದ ನಿವಾಸಿಗಳು ರೋಗ ರುಜಿನ ಹರಡುವ ಭೀತಿಯಲ್ಲಿದ್ದಾರೆ. ನೀರಿನ ಸೌಲಭ್ಯ ಕಲ್ಪಿಸಿ ನಿವಾಸಿಗಳ ಹಿತ ಕಾಪಾಡುವ ಕೆಲಸ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾಡಬೇಕು. ನೀರಿನ ಸಮಸ್ಯೆಗೆ ಸರಿಯಾದ ಸ್ಪಂದನೆ ಸಿಗದೇ ಹೋದರೆ ಮುಂಬರುವ ದಿನಗಳಲ್ಲಿ ಪಪಂ ಮುಂದೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭ ನಿವಾಸಿಗಳಾದ ಶಿವರಾಜ ಗೋಡೆಕರ್, ಬಸನಗೌಡ ಮಾಲಿಪಾಟೀಲ್, ಖಾಸಿಂಸಾಬ್ ನಾಲಬಂಧ, ಶರಣಪ್ಪ ಪಾಟೀಲ್, ನಿಂಗನಗೌಡ, ಶರಣಪ್ಪ ತೊಪಲಕಟ್ಟಿ, ರಾಮಣ್ಣ ನರೆಗಲ್ಲ, ಹಾಗೂ ಮಹಿಳೆಯರು ಇತರರಿದ್ದರು.
-----

0/Post a Comment/Comments