ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಪಟ್ಟಣದ ಸಮಗ್ರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಜತೆಗೆ ಎರಡು ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಪಪಂ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ನಿಗದಿತ ವೇಳೆಗೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.
ಇಲ್ಲಿನ ಹಳೇ ಜಿಪಂ ಕಚೇರಿ ಆವರಣದಲ್ಲಿ ಶನಿವಾರ ೨ ಕೋಟಿ ರೂ. ವೆಚ್ಚದಲ್ಲಿ ಪಪಂ ಹೊಸ ಕಚೇರಿ ಕಟ್ಟಡ ಹಾಗೂ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಪಟ್ಟಣ ಪ್ರಗತಿಗಾಗಿ ಹಲವು ಯೋಜನೆ ಜಾರಿಗೆ ತಂದು ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗಿದೆ. ಅಗತ್ಯ ಸೌಕರ್ಯಗಳ ಒದಗಿಸಲಾಗಿದೆ. ಹೊಸದಾಗಿ ಪಪಂ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಅಲ್ಲದೇ ಬೀದಿಬದಿ ವ್ಯಾಪಾರಸ್ಥರಿಗೆ ಮಾರುಕಟ್ಟೆ ಕಲ್ಪಿಸಲಾಗುವುದು ಎಂದರು.
ಕೆಂಪು ಕೆರೆಗೆ ನೀರು: ಪಟ್ಟಣದ ಕೆಂಪು ಕೆರೆಗೆ ಶೀಘ್ರ ಕೃಷ್ಣೆಯ ನೀರು ಬರಲಿದ್ದು, ಹಾಗೆ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಸುವ ಕೆಲಸ ಮಾಡಲಾಗುತ್ತಿದೆಎಂದು ಸಚಿವರು ತಿಳಿಸಿದರು.
ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಮಾತನಾಡಿ, ಪಪಂ ಕಟ್ಟಡಕ್ಕಾಗಿ ಎರಡು ಎಕರೆ ಭೂಮಿ ಪಿಡಬ್ಲ್ಯೂಡಿ ಇಲಾಖೆಯಿಂದ ಸಚಿವರು ಕೊಡಿಸಿದ್ದು, ೨ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಇನ್ನೂ ೫೦ ವಾಣಿಜ್ಯ ಮಳಿಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಸರ್ಕಾರದಿಂದ ಮಂಜೂರು ಮಾಡಿಸಿಕೊಡುವಂತೆ ಸಚಿವರಿಗೆ ಮನವಿ ಮಾಡಿದರು.
--
--
ಬ್ಸಾಕ್ ನ್ಯೂಸ್
ಪಪಂ ಕಟ್ಟಡಕ್ಕೆ ಹೆಚ್ಚುವರಿ ೩ ಕೋಟಿ ರೂ. ಅನುದಾನ ನೀಡಿ:
ನೂತನವಾಗಿ ನಿರ್ಮಾಣವಾಗಲಿರುವ ಪಪಂ ಕಟ್ಟಡಕ್ಕೆ ಹೆಚ್ಚುವರಿಯಾಗಿ ೩ ಕೋಟಿ ಅನುದಾನ ನೀಡಬೇಕು ಎಂದು ಸಚಿವ ಹಾಲಪ್ಪ ಆಚಾರ್‌ಗೆ ಪಪಂ ಕಾಂಗ್ರೆಸ್ ಸದಸ್ಯರು ಮನವಿ ಸಲ್ಲಿಸಿದರು.
ಪಪಂ ಕಟ್ಟಡ ನಿರ್ಮಾಣಕ್ಕೆ ಈ ಹಿಂದೆ ಆಡಳಿತ ಮಂಡಳಿ ಇದ್ದಾಗ ೩ ಕೋಟಿ ರೂ. ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದ್ಯ ಎರಡು ಕೋಟಿ ರೂ.ಗಳಲ್ಲಿ ಕಟ್ಟಡ ಮತ್ತು ಮಾರುಕಟ್ಟೆ ನಿರ್ಮಾಣವಾಗುವುದು ಅಸಾಧ್ಯ. ಸಚಿವರು ಮುತುವರ್ಜಿ ವಹಿಸಿ ಇನ್ನೂ ೩ ಕೋಟಿ ರೂ ಅನುದಾನ ನೀಡಬೇಕೆಂದು ಕಾಂಗ್ರೆಸ್ ಸದಸ್ಯರಾದ ರೇವಣಪ್ಪ ಹಿರೇಕುರುಬರ್, ನಂದಿತಾ ದಾನರಡ್ಡಿ, ರಿಯಾಜ್ ಅಹ್ಮದ್ ಖಾಜಿ, ಹನುಮಂತ ಭಜಂತ್ರಿ ಸಚಿವರಿಗೆ ಒತ್ತಾಯಿಸಿದರು.
--
ಈ ಸಂದರ್ಭ ಪಪಂ ಉಪಾಧ್ಯಕ್ಷೆ ಶಾಂತಾ ಮಾಟೂರು, ಸ್ಥಾಯಿ ಸಮಿತಿಯ ಅಧ್ಯಕ್ಷ ಕಳಕಪ್ಪ ತಳವಾರ್, ಸದಸ್ಯರಾದ ವಿಜಯಲಕ್ಷ್ಮೀ ಸಿದ್ರಾಮೇಶ ಬೆಲೇರಿ, ಶ್ರೀದೇವಿ ದೊಡ್ಡಯ್ಯ ಗುರುವಿನ್, ವಸಂತ ಭಾವಿಮನಿ, ಬಸಲಿಂಗಪ್ಪ ಕೊತ್ತಲ್, ಅಶೋಕ ಅರಕೇರಿ, ಮುಖ್ಯಾಧಿಕಾರಿಗಳಾದ ಶಿವಕುಮಾರ ಕಟ್ಟಿಮನಿ, ಪ್ರಕಾಶ ಮಠದ, ಇಂಜಿನಿಯರ್ ಉಮೇಶ್ ಬೇಲಿ, ಪ್ರಮುಖರಾದ ಬಸಲಿಂಗಪ್ಪ ಭೂತೆ, ಸಿ.ಎಚ್.ಪಾಟೀಲ್, ವಿಶ್ವನಾಥ ಮರಿಬಸಪ್ಪನವರ, ಕಳಕಪ್ಪ ಸೇರಿದಂತೆ ಇತರರಿದ್ದರು.
--
Post a Comment