ಅಕಾಲಿಕ ಮಳೆಗೆ ಜನಜೀವನ ಅಸ್ತವ್ಯಸ್ತ


ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಪಟ್ಟಣ ಸೇರಿದಂತೆ ತಾಲೂಕಿನ ನಾನಾ ಕಡೆ ಗುರುವಾರ ಅಕಾಲಿಕ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಯಿತು.
ಹಿರೇವಂಕಲಕುಂಟಾ, ಮುರಡಿ ಗ್ರಾಮದಲ್ಲಿ ವಾರದ ಸಂತೆಯ ದಿನವಾಗಿದ್ದು ತರಕಾರಿ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ಮಾರುಕಟ್ಟೆಗೆ ತಂದಿದ್ದ ವ್ಯಾಪಾರಿಗಳು ತೀವ್ರ ಪರದಾಡಿದರು.
ಇನ್ನೂ ರೈತರು ಜಮೀನಲ್ಲಿ ಶೇಂಗಾಬೆಳೆ ಕೀಳಲಾಗಿದ್ದು ಕೆಲ ಕಡೆ ಮಳೆಗೆ ಸಿಕ್ಕಿದೆ. ಮಳೆಯಿಂದ ರಕ್ಷಣೆ ಮಾಡಲು ಹೊಟ್ಟಿನ ಬಣವೆ ಮೇಲೆ ತಾಡಪತ್ರಿ ಹೊದಿಕೆ ಮಾಡಲು ಪರದಾಡಿದರು. ಬಿಸಿಲಿಗೆ ಬೆಂದಿದ್ದ ಧರೆಗೆ ವರುಣನ ಕೃಪೆಯಿಂದ ತಂಪೆರೆದಿದೆ.

0/Post a Comment/Comments