ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆಗೆ ಪ್ರತಿಯೊಬ್ಬರಿಗೂ ಕ್ರೀಡೆ ಅವಶ್ಯ ಎಂದು ವಕೀಲರ ಸಂಘದ ತಾಲೂಕು ಮಾಜಿ ಅಧ್ಯಕ್ಷ ಆನಂದ ಉಳ್ಳಾಗಡ್ಡಿ ಹೇಳಿದರು.
ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದ ಹಿಂಭಾಗ ಭಾನುವಾರ ಪವರ್ ಪ್ಯಾಂಥರ್ಸ್ ವಾಲಿಬಾಲ್ ಕ್ಲಬ್ ಆಯೋಜಿಸಿದ್ದ ಹೊನಲು ಬೆಳಕಿನ ವಾಲಿಬಾಲ್ ಪ್ರೀಮಿಯರ್ ಲೀಗ್ (ಸೀಜನ್-೨) ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆ ಮತ್ತು ಕ್ರೀಡಾಪಡುಗಳಿಗೆ ಪ್ರೋತ್ಸಾಹ ನೀಡಿದಾಗ ಹೊಸ ಪ್ರತಿಭೆಗಳು ಉದಯಿಸಲು ಸಾಧ್ಯವಿದೆ. ಪಟ್ಟಣದಲ್ಲಿ ವಾಲಿಬಾಲ್ ಪ್ರೀಮಿಯರ್ ಲೀಗ್ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆ. ಸೋಲು ಗೆಲುವಿಗಿಂತ ಕ್ರೀಡಾಸ್ಪೂರ್ತಿ ಮೆರೆಯುವುದು ಕ್ರೀಡಾಪಟುಗಳ ಕರ್ತವ್ಯ. ವಾಲಿಬಾಲ್ ಕ್ರೀಡೆಗಳನ್ನು ಏರ್ಪಡಿಸುವ ಮೂಲಕ ಪವರ್ ಪ್ಯಾಂಥರ್ಸ್ ಕ್ಲಬ್ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಕುರುಗೋಡ ತಹಸೀಲ್ದಾರ್ ಗುರುರಾಜ ಛಲವಾದಿ ಮಾತನಾಡಿ, ದೈನಂದಿನ ಜೀವನದಲ್ಲಿ ಕ್ರೀಡೆಗಳಿಗೆ ಪ್ರಾಮುಖ್ಯತೆ ಕೊಡಬೇಕು. ಪಟ್ಟಣದಲ್ಲಿ ವಿವಿಧ ಕ್ರೀಡೆಗಳು ನಿರಂತವಾಗಿ ನಡೆಯುತ್ತಿರುವುದು ಆರೋಗ್ಯಕರ ಬೆಳವಣಿಗೆ. ಕ್ರೀಡೆ ಜತೆಗೆ ಶಿಕ್ಷಣ ಕಲಿತು ತಮ್ಮ ಬದುಕು ಕಟ್ಟಿಕೊಳ್ಳಬೇಕು. ಅಂದಾಗ ಮಾತ್ರ ಜೀವನ ಯಶಸ್ವಿ ಹಾದಿಯಲ್ಲಿ ಸಾಗಲು ಸಾಧ್ಯ ಎಂದರು. ವಕೀಲರ ಸಂಘದ ಉಪಾಧ್ಯಕ್ಷ ಎಚ್.ಎಚ್.ಹಿರೇಮನಿ, ಆಯೋಜಕ ಯಲ್ಲಪ್ಪ ಹಂದ್ರಾಳ, ಮುಖಂಡ ಕಲ್ಲಪ್ಪ ಕರಮುಡಿ ಮಾತನಾಡಿದರು.
ಈ ಸಂದರ್ಭ ಅರಣ್ಯಾಧಿಕಾರಿ ಶರೀಫ್ ಕೊತ್ವಾಲ್, ರೇಷ್ಮೆ ಇಲಾಖೆ ಅಧಿಕಾರಿ ಗುರುರಾಜ ರಾಮಶೆಟ್ಟಿ, ಪ್ರಮುಖರಾದ ಶ್ಯಾಮೀದ್‌ಸಾಬ್ ಮುಲ್ಲಾ, ಛತ್ರಪ್ಪ ಛಲವಾದಿ, ಚನ್ನಪ್ಪ ಕರಂಡಿ, ಸಾಧಿಕ್‌ಪಾಷ ಖಾಜಿ, ಯಲಪ್ಪ ನಾಯಕ, ನಿಂಗಪ್ಪ ಕಮತರ, ರಾಜು ಕುಲಕರ್ಣಿ, ಖಾಜಾಸಾಬ್ ಅಮರಾವತಿ, ಸಿ.ಮಹಾಂತೇಶ, ಶಿವಾನಂದ ಬಣಕಾರ, ಖಾದರ್‌ಭಾಷಾ, ಪ್ರಕಾಶ ಛಲವಾದಿ, ಬಸವರಾಜ ಕಮ್ಮಾರ, ಮಹಾಂತೇಶ ತೆಂಗಿನಕಾಯಿ, ಆದರ್ಶ ಅಧಿಕಾರಿ ಸೇರಿದಂತೆ ಇತರರಿದ್ದರು.
-----
Post a Comment