ಹಕ್ಕುಬಾಧ್ಯತೆಗಳನ್ನು ಪಡೆಯಲು, ನಮ್ಮ ಮೇಲೆ ದೌರ್ಜ್ಯನ್ಯಗಳನ್ನು ತಡೆಯಲು ತಳ ಸಮುದಾಯ ಒಂದಾಗ ಬೇಕಾಗಿದೆ

ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ:  ನಮ್ಮ ಸಮೂದಾಯ ಸೂಮಾರು 70 ವರ್ಷಗಳಕಾಲ ಏರಡೂ ಪಕ್ಷಗಳಿಂದ ತುಳಿತಕ್ಕೆ ಒಳಗಾಗಿದ್ದೆವೆ ನಮ್ಮ ಸಮುದಾಯದವರನ್ನ ರಾಜಕೀಯ ಪಕ್ಷದವರು  ನಮ್ಮನ್ನ ಕಡೆಗಣಿಸುತಿದ್ದಾರೆ ಎಂದು ವಾಲ್ಮೀಕಿನಾಯಕ ಸಮಾಜದ ಜಿಲ್ಲಾಧ್ಯಕ್ಷ  ಟಿ,ರತ್ನಾಕರ  ಪ್ರಾಸ್ತಾವಿಕವಾಗಿ ಮಾತನಾಡಿ ತಾಲೂಕಿನ ಸಾಲಭಾವಿ ಗ್ರಾಮದಲ್ಲಿ  ವಾಲ್ಮೀಕಿ ನಾಯಕ ಸಮಾಜದ ಮುಂದಿರುವ ಸವಾಲುಗಳು ಮತ್ತ ಪರಿಹಾರ ಕುರಿತು ಸಂವಾದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ 

ನಮ್ಮ ಸರಕಾರದ ಸೌಲಭ್ಯಗಳು ಅನ್ಯರ ಪಾಲಾಗುತ್ತಿವೆ. ನಮ್ಮ  ಸೌಲಭ್ಯ ಪಡೆಯ ಬೇಕಾದರೆ ಇನ್ನೋಬ್ಬರ ಮುಂದೆ ಕೈ ಕಟ್ಟಿ ನಿಲ್ಲಬೇಕಾಗಿದೆ ನಮ್ಮನ್ನಾಳುವ 

ಜನ ಪ್ರತಿನಿಧಿಗಳು  ಸಮಾಜವನ್ನ ಹೋಡೆದಾಳುತಿದ್ದಾರೆ  ರಾಜನಹಳ್ಳಿಯ ವಾಲ್ಮೀಕಿ ಸಮಾಜದ ಗುರುಗಳ ಮಾರ್ಗದರ್ಶನದಂತೆ  ನಾವೂ ಸಾಗೋಣ

ನಾವೂ ಸ್ವಾಭಿಮಾನಿಗಳಾಗಿ ಬಾಳ ಬೇಕು  ಯಾರಿಗೂ ಮಾರಾಟ ವಾಗಬಾರದು ನಮ್ಮನಮ್ಮ ಸ್ವಾಭಿಮಾನ  ನಮ್ಮಲ್ಲಿ ಮೂಡ ಬೇಕು ನಮ್ಮ ಸಂಘಟನೆಯ ಹೋರಾಟದಿಂದ ನಮ್ಮ ಜನಗಳಗೆ ಒಳ್ಳಯದಾಗಬೇಕು ಎಂದರು.

ಎಸ್ ,ಜೆ,ವಿ,ಪಿ,ಸ್ವಾಯತ್ತ ಮಹಾ ವಿದ್ಯಾಲಯದ ಮುಖ್ಯಸ್ಥ ಹರಿಹರದ ಕನ್ನಡ ಅಧ್ಯಯನ ವಿಭಾಗದ ಪ್ರೋಫೇಸರ್ ಡಾ.ಎ.ಬಿ.ರಾಮಚಂದ್ರಪ್ಪ ಮಾತನಾಡಿ ಪ್ರಾಚೀನಕಾಲದಲ್ಲಿ ಭಗವಾನ್ ವಾಲ್ಮೀಕಿ ಶಾಂತಿ.ಸಹನೆ ಸೌಹಾರ್ದತೆ ಸಾಮರಸ್ಯ ಬೋದಿಸಿದ ಮಹಾನ್ ಗುರು ವಾಲ್ಮೀಕಿ,ಅಂದಿನಿಂದ ಇಂದಿನ ವರಗೆ ಶಾಂತಿ ಸೌಹಾರ್ದತೆ ಉಳಿಸಿ ಕೊಂಡು ಬಂದಿದೆ ಅನೇಕ ವರ್ಷಗಳಿಂದ ಬ್ರೀಟೀಸರ ಕಾಲದಿಂದ ಹಿಡಿದು ಮನುವಾದಿ ಕಾಲದ  ಭಾರತದಿಂದಲು ನಾವು ಏನೇಲ್ಲ ದೌರ್ಜನ್ಯ ಶೋಷಣೆ ಅನುವಭವಿಸುತ್ತಾ ಬಂದಿದ್ದೆವೆ ಆದರೂ ನಾವೂ ಸಹನೆಯಿಂದ ಇದ್ದೇವೆ ,

ನಮ್ಮ ಸಹನೆ ನಮ್ಮ ತಾಳ್ಮೆ ದುರುಪಯೋಗ ಆಗಬಾರದು ಮೇಲ್ವರ್ಗದ ಜನರು ಸಂಘಟಿತರಾದರೆ ಅದು ಜಾತಿ ಎನಿಸಿಕೊಳಾಳುವದಿಲ್ಲ ತಳ ಸಮುದಾಯ ಸಂಘಟಿತರಾದರೆ ಜಾತಿ ಎನಿಸಿಕೊಳ್ಳುತ್ತಿದೆ.

ನಮ್ಮಂತ ಅನಕ್ಷರಸ್ಥರು ಒಂದುಕಡೆ ಸೇರಿ ಕೊಂಡರೆ ಜಾತಿ ಎನಿಸಿಕೊಳ್ಳುತ್ತದೆ. ದಾಖಲೆಗಳನ್ನ ತೆಗೆದುಕೊಂಡು ನೋಡಿದಾಗ  ಯಾವ ಯಾವ ಜಾತಿಯಲ್ಲಿ ಏಷ್ಠು ಅಕ್ರಮಣಗಳು ನಡೆದಿವೆ  ನಮ್ಮ ತಳ ಸಮುದಾಯದ ಮೇಲೆ ಎಷ್ಟು ದೌರ್ಜ್ಯನ್ಯಗಳು ನಡೆದಿವೆ.

ರಾಷ್ಟ ಪ್ರೇಮದ ಬಗ್ಗೆ ಮಾತನಾಡುವ ರಾಜಕಾರಣಿಗಳಿಂದ ರಾಷ್ಟ್ರ ನಿರ್ಮಾಣ ವಾಗಿಲ್ಲ ಈ ದೇಶಕ್ಕೆ ಬ್ರೀಟಿಷರ ವಿರುದ್ದ ಖಡ್ಗ ಹಿಡಿದು ಹೋರಾಟ ಮಾಡಿದ ಸಮುದಾಯ ನಮ್ಮದು ಬ್ರೀಟೀಷರೆ ಭಯ ಭೀತರಾಗಿ ಹೋಡಿಹೋಗಿದ್ದು ನಮ್ಮಂತ ತಳ ಸಮುದಾಯದಿಂದಲೆ.ಹಿಂದೆ ದೇಶಕ್ಕಾಗಿ ಆಳಿದಂತವರು ನಾವುಗಳೆಲ್ಲ ಇಂದು ನಮ್ಮನ್ನಾಳುತಿದ್ದಾರೆ. ನಮ್ಮನ್ನಾಳುವ ಜನ ಪ್ರತಿನಿಧಿಗಳು ಮತ್ತು ಸರಕಾರಗಳು ನಮಗೆ ಯಾವರೀತಿ ಯೋಜನೆಗಳನ್ನ ಕೋಡುತಿದ್ದಾರೆಂದರೆ ಜೇನು ತುಪ್ಪವನ್ನ ಮೂಗಿಗೆ ಹಚ್ಚಿ ನೆಕ್ಕಿಸುವಂತಾಗಿದೆ. ಸರಕಾರ ತೋರಿಸುವದು ಒಂದು ನಮ್ಮ ಹಕ್ಕು ಬಾಧ್ಯತೆಯನ್ನ ಕಸಿದು ಕೊಳ್ಳುತ್ತಿರುವದು ಇನ್ನೋಂದು, ಬ್ರೀಟೀಷರು ಬಂದಮೇಲೆ ಶಿಕ್ಷಣವನ್ನ ಸಾರ್ವತ್ರಿಕ ಗೋಳಿಸಿದಾಗ ನಮಗೆ ಶಿಕ್ಷಣ ಸಿಕ್ಕಿದ್ದು ,1960 ರಿಂದ ಇಚೇಗೆ ಇವತ್ತೂ ಕೂಡ ಶೈಕ್ಷಣಿಕ ರಂಗದಲ್ಲಿ ಅದೇಷ್ಟೋ ಜನರು ಯಶಸ್ಸು ಕಂಡಿಲ್ಲ ಅಂಬೇಡ್ಕರ ಈ ದೇಶದಲ್ಲಿ ಹುಟ್ಟದೆ ಹೋಗಿದ್ದರೆ ಅವರು ವಿದ್ಯಾಭ್ಯಾಸ ಮಾಡದೆ ಹೋಗಿದ್ದರೆ ಸಂವಿಧಾನ ನೀಡದಿದ್ದರೆ ನಾವು ನೀವೂಗಳು ಇಲ್ಲಿ ಸೇರುತ್ತೀರಲಿಲ್ಲ 

ಇವತ್ತೀಗೂ ಕೂಡ ನಮ್ಮ ಮಹಿಳೆಯರು ದೇವದಾಶಿಯಾಗುವ ಪದ್ದತಿ ತಪ್ಪಿಲ್ಲ ಧರ್ಮದ ಆಚರಣೆಗಳ ಬಗ್ಗೆ ಮಾತನಾಡುತಿದ್ದೆವೆ ನಾವು ಇವತ್ತು  ಇನ್ನೋಬ್ಬರ ಕೈ ಕೆಲಸದಾಳಾಗಿ ಬದುಕುತಿದ್ದೆವೆ ಈದಕ್ಕೆ ಪರಿಹಾರ ಸಮುದಾಯ ಮೋದಲು ಶಿಕ್ಷಣ ವಂತರಾಗಬೇಕು ಸಂಘಟಿತರಾಗಬೇಕು ನಮ್ಮ ಹಕ್ಕುಬಾಧ್ಯತೆಗಳನ್ನ ಪಡೆಯಲು ನಮ್ಮ ಮೇಲೆ ದೌರ್ಜ್ಯನ್ಯಗಳನ್ನ ತಡೆಯಲು ನಾವೇಲ್ಲ ತಳ ಸಮುದಾಯ  ಒಂದಾಗ ಬೇಕಾಗಿದೆ ಎಂದರು

ವಕೀಲ ಶಂಕ್ರಪ್ಪ ಸುರಪುರ,ಭೀಮಣ್ಣ ಹವಳಿ ಸಮಾಜದ ಸಂಘಟನೆಗಳ ಕುರಿತು ಮಾತನಾಡಿದರು ಕಾರ್ಯಕ್ರಮದಲ್ಲಿ ಮಾನಪ್ಪ ಪೂಜಾರ, ಫಕೀರಪ್ಪ ತಳವಾರ,ಸಂಜೀವಪ್ಪ ಸಂಗಟಿ,ಹಂಚ್ಯಾಳಪ್ಪ ತಳವಾರ ಹಂಚ್ಯಾಳಪ್ಪ ಮ್ಯಾಗೇರಿ,ಬಸವನಗೌಡ ಪೋಲೀಸ್.ಪಾಟೀಲ್ ಸುಭಾಷ ಚಂದ್ರ ಪೂಜಾರ ಹೋಳೆಗೌಡ ಪೋಲೀಸ್ ಪಾಟೀಲ್ ,ಗಂಗಾಧರ ನಾರಾಯಣಿ,ಶಂಕರ ಅಡವಿಭಾವಿ ,ಮಂಗಳೇಶ ಮಂಗಳೂರ, ಶ್ರೀಕಾಂತಗೌಡ ಮಾಲಿ ಪಾಟೀಲ್ ,ಸಿದ್ದು ವಾಲ್ಮೀಕಿ,ಗುಂಡನಗೌಡ ಮಾಲಿ ಪಾಟೀಲ್ ಶರಣಪ್ಪ ವಜ್ರಬಂಡಿ, ಹನಮಂತಪ್ಪ ಮದ್ಲಗಟ್ಟಿ,ಶಂಕರಪ್ಪ ಶಾಖಾಪುರ ಯಮನೂರಪ್ಪ ತಳವಾರ ಮುತ್ತು ಮಂಗಳೂರ ಯಮನೂರಪ್ಪ ಗಾಣದಾಳ  ಸೇರಿದಂತೆ ಮತ್ತೀತರರು ಉಪಸ್ಥೀತರಿದ್ದರು.

0/Post a Comment/Comments