ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಸಮುದಾಯದವರು ಸಂಘಟಿತರಾಗಬೇಕು. ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು ಎಂದು ಸಮುದಾಯದ ಜಿಲ್ಲಾಧ್ಯಕ್ಷ ಈಶಪ್ಪ ಬಡಿಗೇರ್ ಹೇಳಿದರು.
ತಾಲೂಕಿನ ಬೇವೂರು ಗ್ರಾಮದಲ್ಲಿ ವಿಶ್ವಕರ್ಮ ವಿವಿದೊದ್ದೇಶ ಕ್ಷೇಮಾಭಿವೃದ್ದಿ ಸಂಘ ಮತ್ತು ವೃತ್ತ ಉಧ್ಘಾಟಣೆ ಕಾರ್ಯಕ್ರಮ ನೇರವೇರಿಸಿ ಮಾತನಾಡಿದರು.
ಸಮಾಜದ ಏಳಿಗೆ ಶಿಕ್ಷಣದಿಂದ ಮಾತ್ರ ಸಾಧ್ಯ. ಹಳೆಯ ಕಾಲದಿಂದಲೂ ಕುಲ ಕಸುಬು ನಂಬಿ ಸ್ವಾಭಿಮಾನದಿಂದ ಬದುಕು ನಡೆಸುತ್ತಾ ಬಂದಿದೆ. ಹೀಗಾಗಿ ರಾಜಕೀಯ, ಸಾಮಾಜಿಕ ಮತ್ತು ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಾಗಿ ಮುಂದಿನ ದಿನಮಾನಗಳಲ್ಲಿ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಕೊಡುವಂತೆ ಎಲ್ಲರೂ ಹೋರಾಟಕ್ಕೆ ತಯಾರಾಗಬೇಕು ಎಂದರು. ಶ್ರೀ ಅಭಿನವ ಶ್ರೀಕಂಠ ಸ್ವಾಮೀಜಿ, ಶ್ರೀ ದಿವಾಕರ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಸಮುದಾಯದ ತಾಲೂಕು ಅಧ್ಯಕ್ಷ ಚಂದ್ರಶೇಖರ ಕಮ್ಮಾರ, ವಿಶ್ವಕರ್ಮ ನಿಗಮ ಮಂಡಳಿ ನಿರ್ದೇಶಕ ಪ್ರಭಾಕರ ಬಡಿಗೇರ್, ಗಣ್ಯರಾದ ರುದ್ರಪ್ಪ ಕೊಪ್ಪಳ, ದೇವಪ್ಪ ಹಲಗೇರಿ, ದೇವೆಂದ್ರಪ್ಪ ಬಡಿಗೇರ್, ಗುರುಮೂರ್ತಿ ಕಮ್ಮಾರ , ಶೇಖರಪ್ಪ ಬಡಿಗೇರ, ಜಗದೇವಪ್ಪ ಬಡಿಗೇರ, ಈಶಪ್ಪ ಬಡಿಗೇರ್, ಮೌನೇಶ ಬಡಿಗೇರ್, ಶಿವಾನಂದ ಬಡಿಗೇರ್, ಲೋಹಿತ್ ಪತ್ತಾರ, ಶರಣಕುಮಾರ ಬಡಿಗೇರ್, ವಿರೂಪಾಕ್ಷಪ್ಪ ಬಡಿಗೇರ , ಮಳಿಯಪ್ಪ ಬಳೂಟಗಿ, ಪ್ರಕಾಶ ಮಂಗಳೂರು, ದೇವಪ್ಪ ಬಡಿಗೇರ್ ಸೇರಿದಂತೆ ಇತರರಿದ್ದರು.
Post a Comment