ತರಲಕಟ್ಟಿ ಶರಣಬಸವೇಶ್ವರ ಜಾತ್ರೋತ್ಸವ


ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ : ತರಲಕಟ್ಟಿ ಗ್ರಾಮದ  ಗವಿಸಿದ್ದಯ್ಯ ಹಿರೇಮಠ ಇವರ ಸಮ್ಮುಖದಲ್ಲಿ ವೇದಮೂರ್ತಿ ದ್ಯಾಂಪೂರ ಕಲ್ಲಿನಾಥ ಶ್ಯಾಸ್ತ್ರಿ ರಚಿಸಿದ ಶರಣ ಬಸವೇಶ್ವರ ಪುರಾಣ ಶಿವರಾತ್ರಿ ಪಾಡ್ಯದಿಂದ ಪ್ರಾರಂಭಗೊಂಡು ಸತತ 21 ದಿವಸಗಳ ಕಾಲ ಸಾಗಿ ಬಂದಿತ,ಪುರಾಣ ಪ್ರವಚನಕಾರರಾಗಿ ಕುಮಾರ ಸ್ವಾಮಿ  ಶ್ಯಾಸ್ತ್ರಿ ಹಿರೇಮಠ  ಹಾಗೂ ಈಶ್ವರಯ್ಯ ಹಲಸಿನಮಠ ಮತ್ತು ಶರಣಕುಮಾರ ಬಂಡಿ ರವರಿಂದ ಸಂಗೀತ ಸೇವೆ ನಡೆಸಿಕೊಟ್ಟರು

ಶ್ರೀಶರಣಬಸವೇಶ್ವರ ಪುರಾಣ ಮಹಾ ಮಂಗಲದ ಅಂಗವಾಗಿ ಶನಿವಾರ ಮಹಿಳೆಯರಿಂದ 101 ಕುಂಭ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಶನಿವಾರ ಬೆಳಿಗ್ಗೆ  6 ಗಂಟೆಗೆ ಶರಣ ಬಸವೇಶ್ವರ ಮೂರ್ತಿಗೆ ಮಹಾ ರುದ್ರಾಭಿಷೇಕ,

ಕುಂಭದ ಜಲಾಭೀಷೇಕ,ಮೂರ್ತಿಗೆ ಪುಷ್ಪಾಲಂಕಾರ, ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ರವಿವಾರ ಬೆಳಿಗ್ಗೆ 9 ಜೋಡಿ ಸಾಮೂಹಿಕ ವಿವಾಹ ಜರಗುವದು ಸಂಜೆ ಶರಣ ಬಸವೇಶ್ವ ಉಚ್ಛಾಯ ಜರಗುವದು ಜಾತ್ರೆಗೆ ಬಂದಂತ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯುವದು ಸಂಜೆ ಶರಣ ಬಸವೇಶ್ವರ ಮಹಾ ಪೂರಾಣ ಮಂಗಲಗೋಳ್ಳುವದು, ಸಂಜೆ ಶಾಲಾ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಲಿವೆ.

0/Post a Comment/Comments