ಲೋಕಾರ್ಪಣೆಗೊಂಡ 'ನೆಲದ ಮೇಲಣ ನಕ್ಷತ್ರಗಳು' ಕೃತಿ.


ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: 
ಕವಿ ವೀರೇಶ ಬ ಕುರಿ ಸೋಂಪೂರ ರವರಿಂದ ರಚಿತವಾದ ನೆಲದ ಮೇಲಣ ನಕ್ಷತ್ರಗಳು ಎಂಬ ವ್ಯಕ್ತಿಚಿತ್ರಣ ಕವನ ಸಂಕಲನವು  ಕುಕನೂರು ತಾಲೂಕಿನ ಸೋಂಪೂರ ಗ್ರಾಮದ ಲೇಖಕರ ಸ್ವಗೃಹದಲ್ಲಿ ಲೇಖಕರ ತಂದೆ ತಾಯಿಯರಾದ ಶ್ರೀಮತಿ ಪಾರವ್ವ ಗಂ ಶ್ರೀ ಬಸಪ್ಪ ಸಂಗಪ್ಪ ಕುರಿ ಮತ್ತು ಸೋಂಪೂರ ಗ್ರಾಮದ 'ಅಕ್ಷರ ಸಂತ'ರೆಂದೇ ಖ್ಯಾತರಾದ ಆದರ್ಶ ಶಿಕ್ಷಕರಾದ ಶ್ರೀ ವಿರೇಶ ಮುಗಳಿಯವರಿಂದ ಅತ್ಯಂತ ಸರಳ, ಸುಂದರ ಮತ್ತು ಅರ್ಥಪೂರ್ಣವಾಗಿ ಲೋಕಾರ್ಪಣೆಗೊಂಡಿತು.
ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಶ್ರೀ ವಿರೇಶ ಮುಗಳಿಯವರು ನೆಲದ ಮೇಲಣ ನಕ್ಷತ್ರಗಳು ಗ್ರಂಥವು ಅತ್ಯಂತ ಮೌಲಿಕ ಗ್ರಂಥವಾಗಿದ್ದು, ನಕ್ಷತ್ರಗಳಂತೆ ಈ ಲೋಕವನ್ನು ಬೆಳಗಿದ 41 ಜನ ಮಹಾನ್ ವ್ಯಕ್ತಿತ್ವಗಳ ಸ್ಪೂರ್ತಿಗಾಥೆಗಳನ್ನೊಳಗೊಂಡಿರುವ ಈ ಕೃತಿಯನ್ನು ಕನ್ನಡ ನಾಡಿನ ಪ್ರತಿಯೊಬ್ಬರೂ ಕೊಂಡು ಓದುವ ಮೂಲಕ ಲೇಖಕರಿಗೆ ಮತ್ತಷ್ಟು ಉತ್ತೇಜನ ನೀಡಬೇಕು  ಈ ಮೂಲಕ ವಿರೇಶ ಕುರಿಯವರು ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಉನ್ನತ ಸಾಧನೆಗಳನ್ನು ಮಾಡಲು ಪ್ರೋತ್ಸಾಹಿಸಬೇಕು ಎಂದು ಶುಭ ಹಾರೈಸಿದರು. ಸಾರಿಗೆ ಇಲಾಖೆಯ ನಿವೃತ್ತ ನೌಕರರಾದ ಶ್ರೀ ನಿಂಗಪ್ಪ ಮುಗಳಿ, ಲೇಖಕರ ತಂದೆ- ತಾಯಂದಿರು ಮತ್ತು ಶ್ರೀ ಶಶಿಕುಮಾರ ಮೂಲಿಮನಿ‌ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಶಿವು ಛಲವಾದಿ, ಸಿದ್ದೇಶ ಕೋಳೂರು, ಮಹೇಶ ಕುರಿ , ಬಸವರಾಜ ಕುರಿ ಮತ್ತು ಪರಶುರಾಮ ಮ್ಯಾಗೇರಿ ಕಾರ್ಯಕ್ರಮವನ್ನು ಸಾಕ್ಷೀಕರಿಸಿದರು.ಭೀಮಶೇನ ಮೂಲಿಮನಿ ಕಾರ್ಯಕ್ರಮ ನಿರೂಪಿಸಿದರೆ, ಚನ್ನು ಆಲೂರು ವಂದನಾರ್ಪಣೆಗೈದರು.
-----

0/Post a Comment/Comments