ಕುರಿ-ಮೇಕೆ ಸಂತೆ ಮಾರುಕಟ್ಟೆ ಸದ್ಬಳಕೆಯಾಗಲಿ:ಸಚಿವ ಹಾಲಪ್ಪ ಆಚಾರ್ ಹೇಳಿಕೆ


ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಕುರಿ-ಮೇಕೆ ಸಂತೆ ಮಾರುಕಟ್ಟೆ ಪ್ರಾರಂಭಿಸಲಾಗಿದ್ದು, ಪ್ರತಿ ಬುಧವಾರ ಸಂತೆ ನಡೆಯಲಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.
ತಾಲೂಕಿನ ಪುಟಗಮರಿ, ಕಲಭಾವಿ, ಎನ್.ಜರಕುಂಟಿ, ಕಟಗಿಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಸಂತೆಗೆ ಆಗಮಿಸುವ ಜನ ಜಾನುವಾರುಗಳ ಅನುಕೂಲಕ್ಕಾಗಿ ನರೇಗಾದಡಿ ನೀರಿನ ತೊಟ್ಟಿ ನಿರ್ಮಿಸಿಕೊಡಲಾಗುದು ಎಂದರು.
    *ಕಲಭಾವಿ ಕರೆ ಹೂಳೆತ್ತುವ ಕಾಮಗಾರಿಗೆ ಸಚಿವ       ಹಾಲಪ್ಪ ಆಚಾರ್ ಭೂಮಿಪೂಜೆ ನೆರವೇರಿಸಿದರು.

ಹಲವು ದಶಕಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್‌ನವರು ರೈತರಿಗೆ ಬೇಕಾಗುವ ಮೂಲ ಸೌಕರ್ಯ ಒದಗಿಸಲಿಲ್ಲ. ಕ್ಷೇತ್ರಕ್ಕೆ ನೀರಾವರಿ ಮಾಡುವುದು ಅಸಾಧ್ಯ ಎಂದು ಜನರಿಗೆ ಕಾಗಕ್ಕ ಗುಬ್ಬಕ್ಕನ ಕತೆ ಹೇಳಿ ಮೂರ್ಖರನ್ನಾಗಿಸಿದರು. ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ (ನೀರಾವರಿ) ಕೆರೆ ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಎಲ್ಲಾ ಕೆರೆಗಳಿಗೆ ಕೃಷ್ಣೆ ನೀರು ಹರಿಯಲಿದೆ. ಆದರೆ ಕಾಂಗ್ರೆಸ್‌ನವರು ಇದು ನಮ್ಮ ಯೋಜನೆ ಎಂದು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಜನ ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದರು.
ಯಾವ್ಯಾವ ಕಾಮಗಾರಿ: ಪಟ್ಟಣದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಸತಿ ನಿಲಯ, ಎನ್.ಜರಕುಂಟಿಯಲ್ಲಿ ಅಂಬೇಡ್ಕರ್ ಭವನ ಉದ್ಘಾಟನೆ. ಕಟಗಿಹಳ್ಳಿಯಲ್ಲಿ ೫೦ ಲಕ್ಷ ರೂ. ವೆಚ್ಚದಲ್ಲಿ ಚೆಕ್‌ಡ್ಯಾಂ ಕಾಮಗಾರಿಗೆ ಭೂಮಿಪೂಜೆ, ಒಂದು ಕೋಟಿ ರೂ. ವೆಚ್ಚದಲ್ಲಿ ಕಲಭಾವಿ ಕೆರೆ ಹೂಳೆತ್ತುವ ಕಾಮಗಾರಿಗೆ ಸಚಿವರು ಭೂಮಿಪೂಜೆ ನೆರವೇರಿಸಿದರು.
ಗ್ರಾಪಂ ಅಧ್ಯಕ್ಷೆ ಜಯಶ್ರೀ ಅಮರಪ್ಪ ವಂದಾಲಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ತಹಸೀಲ್ದಾರ್ ವಿಠಲ ಚೌಗಲಾ, ತಾಪಂ ಇಒ ಸಂತೋಷ ಪಾಟೀಲ್, ಪಶು ವೈದ್ಯಾಧಿಕಾರಿ ಪ್ರಕಾಶ ಚೂರಿ, ಗ್ರಾಪಂ ಉಪಾಧ್ಯಕ್ಷ ಬೈರಪ್ಪ ನಡಕಟ್ಟಿ, ಸದಸ್ಯರಾದ ಹನುಮಂತಪ್ಪ ಹಂಚಿನಾಳ, ಆದಯ್ಯ ಹಿರೇಮಠ, ಶಂಕ್ರಮ್ಮ ಬಿಜಕಲ್, ರಜಿಯಾ ಬೇಗಂ, ಗಂಗಮ್ಮ, ಜಾನವ್ವ ಬೀರಲದಿನ್ನಿ, ಎಪಿಎಂಸಿ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ, ಪ್ರಮುಖರಾದ ಶರಣಪ್ಪ ಹೊಸ್ಕೇರಿ, ಶಂಕ್ರಪ್ಪ ಸುರಪುರ, ಗಾಳೆಪ್ಪ ಓಜನಹಳ್ಳಿ, ಶರಣಗೌಡ ಪಾಟೀಲ್, ಅಯ್ಯನಗೌಡ ಕೆಂಚಮ್ಮನವರ್, ಶಿವಪ್ಪ ವಾದಿ, ಆನಂದ ಈಳಿಗೇರ್, ಹನುಮರಡ್ಡಿ, ರಾಚಪ್ಪ ಹುರಳಿ, ಶರಣಪ್ಪ ನಿಲೋಗಲ್, ಶಿವಮೂರ್ತಿ ಉಚ್ಚಲಕುಂಟಾ, ನಿಜಲಿಂಗಪ್ಪ, ಶಂಕರ ಶಿಡ್ಲಬಾವಿ, ಯಮನೂರಪ್ಪ ಬ್ಯಾಳಿ, ಸಂತೋಷ ಪುಟಗಮರಿ ಸೇರಿದಂತೆ ಇತರರಿದ್ದರು.
--

0/Post a Comment/Comments