ಶರಣೆ ಸತ್ಯಕ್ಕನ ವಚನವೇ ಜೀವನಕ್ಕೆ ದಾರಿದೀಪ


ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ತಾಲೂಕಿನ  ಶರಣಗ್ರಾಮ  ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳದ ವತಿಯಿಂದ 75ನೇ ಮಾಸಿಕ ಹುಣ್ಣಿಮೆಯ ಬಸವಾನುಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ಮಾತನಾಡಿದ ಶರಣ ಬಸವನಗೌಡ ಪೋಲಿಸ್ ಪಾಟೀಲ್ ನಿವೃತ್ತ ಪಿ ಎಸ್ ಐ  ಇವರು ಮಾತನಾಡಿ, ಅಂಗದ ಮೇಲೆ ಲಿಂಗವ ಧರಿಸಿ ಬಸವ ನಾಮಸ್ಮರಣೆಯಿಂದ ಸತ್ಯ ಶುದ್ಧ ಕಾಯಕ ಮಾಡುತ್ತಾ 12 ನೇ ಶತಮಾನದ ಶರಣರ ನುಡಿಗಡಣಗಳನ್ನ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದರೆ ನಮ್ಮ ಜೀವನ ಪಾವನ ಆಗುತ್ತದೆ ಎಂದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಪರಮ ಪೂಜ್ಯ ಸಿದ್ಧಬಸವ ಕಬೀರ ಮಹಾಸ್ವಾಮಿ ಚಿಗರಳ್ಳಿ ಇವರು,   12 ನೆಯ ಶತಮಾನದಲ್ಲಿ, ಕಸಗೂಡಿಸುವ ಕಾಯಕ ಮಾಡುತ್ತಿದ್ದ “ಸತ್ಯಕ್ಕ” ಎಂಬ ಶರಣೆಯು ತಮ್ಮ ವಚನದ ಮೂಲಕ ಜೀವನದ ಮೌಲ್ಯಗಳನ್ನ  ಜನ ಮನ ಗಳಿಗೆ ಬಿತ್ತರಿಸಿದ್ದಾಳೆ. ಶರಣೆ ಸತ್ಯಕ್ಕ, ದಾರಿಯಲ್ಲಿ/ಬಟ್ಟೆಯಲ್ಲಿ ಪರರ ಹೊನ್ನು, ವಸ್ತ್ರ, ಹಣ ಏನೇ ಬಿದ್ದಿದ್ದರೂ, ನಾನು ಕೈಯಿಂದ ಮುಟ್ಟಿದರೂ ನನ್ನನ್ನು ನರಕದಲ್ಲಿಯೇ ಅದ್ದಿಬಿಡು ಎಂದು ಹೇಳಿದ್ದಾರೆ. ಶರಣರ ಕಾಲದಲ್ಲಿಯೂ ಬ್ರಷ್ಟಾಚಾರ, ಮೋಸ, ದರೋಡೆಗಳು ಮತ್ತು ನಿರುದ್ಯೋಗವೂ ಇತ್ತು. ಆದರೂ ಅವರು ಪರರ ಹಣಕ್ಕೆ ಎರಗುತ್ತಿರಲಿಲ್ಲ. ತಮ್ಮ ಕಾಲಮೇಲೆ ತಾವು ನಿಂತು ಇತರರಿಗೂ ಮಾದರಿಯಾಗಿದ್ದರು.   
 ಶರಣೆ ಸತ್ಯಕ್ಕ ಅಂತರಂಗದಲಿ ಮೋಸ, ದುರಾಸೆ, ದುರಾಲೋಚನೆಗಳ  ಸುಳಿಗೆ ಸಿಕ್ಕು, ಬಹಿರಂಗದಲ್ಲಿ ಕೇವಲ ಪೂಜೆ, ಅರ್ಚನೆ, ಮಂತ್ರಗಳ ಜಪಿಸಿದರೆ ಪ್ರಯೋಜನವಿಲ್ಲ ಎಂಬುದನ್ನ ತಿಳಿಸಿದ್ದಾರೆ. ಅದಕ್ಕಾಗಿ 12 ನೇ ಶತಮಾನದ ಶರಣ-ಶರಣೆಯರು ಚಿತ್ತ ಚಂಚಲ ಮಾಡಿಕೊಳ್ಳದೇ, ಚಲ ಉಳ್ಳವರಾಗಿ ನುಡಿಗೆ ತಕ್ಕ ಹಾಗೆ ನಡೆಯುತ್ತಿದ್ದರು. ನುಡಿದಂತೆಯೇ ನಡೆ, ಇದೇ ಜನ್ಮ ಕಡೆ’ ಎಂದು ತಮ್ಮ ಕಾಯಕವನ್ನೇ ಕೈಲಾಸವನ್ನಾಗಿ ಮಾಡಿಕೊಂಡಿದ್ದರು. ಆಶೆಯೆಂಬುದು ಅರಸಂಗಲ್ಲದೇ ಶಿವಬಕ್ತರಿಗುಂಟೆ ಅಯ್ಯಾ’ ಎಂದು ಆಯ್ದಕ್ಕಿ ಲಕ್ಕಮ್ಮ ಪ್ರಶ್ನೆ ಮಾಡುತ್ತಾಳೆ. ಗಂಟೆಗಟ್ಟಲೇ ಗಂಟೆ ಬಾರಿಸಿಕೊಂಡು ಅರ್ಚನೆ, ಪೂಜೆ ಮಾಡುತ್ತಾ ಕೂಡುವುದು ನೇಮವಲ್ಲ. ಪರರ ಹಣಕ್ಕೆ, ಪರಸ್ತ್ರೀಯರ, ಪರದೈವಗಳ ಆಸೆ ಪಡದಿರುವುದೇ ನೇಮ ಎಂದು ಘಂಟಾ ಘೋಷವಾಗಿ ಸಾರಿದ್ದಾಳೆ ಸತ್ಯಕ್ಕ. ತಮ್ಮ ಬದುಕಿನ ಆದಾರ‍ಗಳೊಂದಿಗೆ ಸಮಾಜದ ಅಂಕುಡೊಂಕುಗಳನ್ನು ವಚನಗಳ ಮೂಲಕ ತಿದ್ದಿದ್ದಾರೆ.
ಶಿವಶರಣ-ಶರಣೆಯರ ವಚನಗಳು ಜನರನ್ನು ಅಡ್ಡದಾರಿಗೆ ಹೋಗದಂತೆ ಸಜ್ಜನರ ರೀತಿಯಲ್ಲಿ ಬದುಕುವಂತೆ ಮಾಡುತ್ತವೆ. ಬಸವಾದಿ ಪ್ರಮಥರು ಅಚ್ಚಗನ್ನಡದ ಬೇಸಾಯಗಾರರು. ಜನರಿಗೆ, ಜನರಾಡುವ ಭಾಷೆಯಲ್ಲಿಯೇ ವಚನಗಳ ಮುಕಾಂತರ ತಿಳುವಳಿಕೆಯನ್ನು ಅವರು ನೀಡಿದರು. ಈ ಸಮಾಜ ಬ್ರಷ್ಟಾಚಾರ, ಅತ್ಯಾಚಾರ, ಮೋಸ-ವಂಚನೆ, ದರೋಡೆ, ಮೂಢನಂಬಿಕೆ ಮುಂತಾದ ಅನೀತಿ, ಅನಾಚಾರಗಳಿಂದ ಹೊರಬರಬೇಕಾದರೆ, ನಮಗೆ ಸರಳವಾಗಿ ಅರ್ತವಾಗುವ ಕನ್ನಡ ಭಾಷೆಯಲ್ಲಿನ ವಚನಗಳಿಂದ ಮಾತ್ರ ಸಾದ್ಯವಿದೆ ಎಂದು ತಿಳಿಸಿದರು. ನಂತರ ಶರಣ ಅಮರೇಶಪ್ಪ ಬಳ್ಳಾರಿ ಬಸವ ಕೇಂದ್ರ ಮರಕಟ್ಟ ಗ್ರಾಮದ ಅಧ್ಯಕ್ಷರು ಮಾತನಾಡಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಶರಣ ಶಿವಬಸಯ್ಯ ವೀರಾಪುರ ಕೊಪ್ಪಳ ಇವರು ವಹಿಸಿದ್ದರು. ಪ್ರಮುಖರಾದ ನಂದಯ್ಯಸ್ವಾಮಿ ಹಿರೇಮಠ, ಕಳಕಪ್ಪ ವಿವೇಕಿ, ಪರಪ್ಪ ಟಣಕನಕಲ್, ನಾಗನಗೌಡ ಜಾಲಿಹಾಳ ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷರು ಮಾಟಲದಿನ್ನಿ, ಪಾಲಾಕ್ಷಪ್ಪ ಹುಣಸಿಹಾಳ, ಗಿರಿಮಲ್ಲಪ್ಪ ಪರಂಗಿ, ಪರಮೇಶ್ ಉಚ್ಚಲಕುಂಟಿ ವನಜಭಾವಿ ಇವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಶರಣಪ್ಪ ಹೊಸಳ್ಳಿ SDMC ಅಧ್ಯಕ್ಷರು ಗುಳೆ, ಬಸವರಾಜ ಹೂಗಾರ, ಲಿಂಗನಗೌಡ ದಳಪತಿ, ಶಿವಪುತ್ರಪ್ಪ ಉಚ್ಚಲಕುಂಟಿ, ನಿಜಲಿಂಗಪ್ಪ ಮಂತ್ರಿ, ರಾಷ್ಟ್ರಪತಿ ಹೊಸಳ್ಳಿ, ಹನಮೇಶ್ ಹೊಸಳ್ಳಿ, ದೇವೇಂದ್ರಪ್ಪ ಆವಾರಿ ಬಸಣ್ಣ ಹೊಸಳ್ಳಿ, ಬಸವರಾಜ ಕೋಳೂರು, ಜಗದೀಶಪ್ಪ ಮೇಟಿ, ಬಸವರಾಜ ಹೊಸಳ್ಳಿ ನಿಂಗಪ್ಪ ವಿರಪಣ್ಣ ಮಂತ್ರಿ  ಹಾಗು ಮಹಿಳಾ ಗಣದ ಪದಾಧಿಕಾರಿಗಳಾದ ಶರಣೆ ಯಮನಮ್ಮ ಗೌಡ್ರ ವನಜಭಾವಿ, ಮಾದಮ್ಮ ಮೇಟಿ,  ಹನಮಮ್ಮ ಉಚ್ಚಲಕುಂಟಿ, ನಾಗಮ್ಮ ಜಾಲಿಹಾಳ, ಶರಣಮ್ಮ ಪೋಲಿಸ್ ಪಾಟೀಲ್ ಕನಸಾವಿ , ನಿಂಗಮ್ಮ ಕೋಳೂರು, ಶಂಕ್ರಮ್ಮ ಹೊಸಳ್ಳಿ, ಚನ್ನಮ್ಮ ಮಂತ್ರಿ ಅಮೃತಮ್ಮ ಉಚ್ಚಲಕುಂಟಿ ಮತ್ತು ಸುತ್ತಲಿನ ಗ್ರಾಮದ ಸದ್ಭಕ್ತರು ಇದ್ದರು.
=====

1/Post a Comment/Comments

  1. ಭಕ್ತಿ ಪೂರ್ವಕ ಅಭಿನಂದನೆಗಳು ಸರ್ ಕಾರ್ಯಕ್ರಮದ ವರದಿಯನ್ನ ಸಮಾಜಿಕತ್ವಕ್ಕೆ ಎಡೆ ಮಾಡಿದ ತಮಗೆ ಸಾವಿರ ಸಾವಿರ ಶರಣಾರ್ಥಿಗಳು

    ReplyDelete

Post a Comment