ರೇಣುಕಾ ಎಲ್ಲಮ್ಮ ಭಾವಚಿತ್ರ ಮೆರವಣಿಗೆ ಅದ್ಧೂರಿ

ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಪಟ್ಟಣದ ಹಳೆ ಬಜಾರ್‌ನ ಗಾಳಿಯಾರ್ ಓಣಿಯ ಒಂದನೇ ವಾರ್ಡ್‌‌ನಲ್ಲಿ ಭರತ ಹುಣ್ಣಿಮೆ ನಿಮಿತ್ತ ಭಾನುವಾರ ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ಬೆಳಗ್ಗೆ ದೇವಸ್ಥಾನದಲ್ಲಿ ದೇವಿಗೆ ರುದ್ರಾಭಿಷೇಕ, ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು. ಮೆರವಣಿಗೆಗೆ ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌರಾ ಬಸವರಾಜ ಚಾಲನೆ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಾವಚಿತ್ರ ಮೆರವಣಿಗೆ ಸಾಗಿ ಬಂದಿತು. ಬಳಿಕ ಮಾತನಾಡಿ, ಪ್ರತಿಯೊಬ್ಬರೂ ಭಕ್ತಿಯಿಂದ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ. ಎಲ್ಲರೂ ದೇವಿಯ ಆರಾಧನೆ, ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದರು.
 ಈ ಸಂದರ್ಭ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕಳಕಪ್ಪ ತಳವಾರ್, ಸದಸ್ಯೆ ಕಲಾವತಿ ವೀರಪ್ಪ ಮರದಡ್ಡಿ, ದೇವಸ್ಥಾನ ಕಮಿಟಿ ಅಧ್ಯಕ್ಷ ಮಲ್ಲಪ್ಪ ಸುರಕೋಡ, ಪ್ರಮುಖರಾದ ಶಿವಕುಮಾರ ನಾಗಲಾಪುರಮಠ, ಚಂದ್ರಶೇಖರ ಮರದಡ್ಡಿ, ಕಲ್ಲೇಶಪ್ಪ ಕರಮುಡಿ, ಶಿವರಾಜ ಕುಂಬಾರ, ಕುಮಾರ ಬಳಗೇರಿಮಠ, ಸಂಗಮೇಶ ಇನಾಮತಿ, ಕಳಕನಗೌಡ ನಾಗನಗೌಡ, ಗವಿಸಿದ್ದಪ್ಪ ಕುರಿ, ಅಮರಪ್ಪ ಸಂಕನೂರು,  ಕರಿಬಸಮ್ಮ ಸುರಕೋಡ, ಅಕ್ಕಮ್ಮ ಮುಧೋಳ. ಗಿರಿಜಾ ಹೊಂಬಳ, ವೀರೇಶ ಬಳೆಗಾರ, ನಾಗರಾಜ ವಾಲ್ಮೀಕಿ, ಸಂಗು ಬಿದರಿ, ಮುತ್ತು ನರೇಗಲ್, ಮುತ್ತಪ್ಪ ಸೂರಕೋಡ, ವಿನಯ್ ಹೊಂಬಳ, ಚನ್ನಬಸಯ್ಯ ಸೇರಿದಂತೆ ಇತರರಿದ್ದರು.
-----

0/Post a Comment/Comments