ಗಳಿಸಿದ ಸಂಪತ್ತಿನಲ್ಲಿ ದಾನ, ಧರ್ಮ ಮಾಡಿದರೆ ಮನಸ್ಸಿಗೆ ನೆಮ್ಮದಿ-ಸಂಸದ ಸಂಗಣ್ಣ ಕರಡಿ


ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ:
ಮನುಷ್ಯನ ಬದುಕಿನಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ಸಿಗಬೇಗಾದರೆ ಗಳಿಸಿದ ಸಂಪತ್ತಿನಲ್ಲಿ ಸ್ವಲ್ಪ ಮಟ್ಟಿಗೆ ಸಮಾಜ ಸೇವೆ ಮೀಸಲಿರಿದಿರೆ ಸುಖಮಯ ಜೀವನ ಸಾಗಿಸಬಹುದು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ತಾಲೂಕಿನ ತಾಳಕೇರಿ ಗ್ರಾಮದ ಶ್ರೀ ಬಸವಂತ ಶಿವಯೋಗಿಗಳ ದೇವಸ್ಥಾನದ ಮೇಲೆ ನಿರ್ಮಾಣದ ೬೫ ಅಡಿ ಎತ್ತರದ ಸದ್ಭಾವನಾಲಿಂಗ ಲೋಕಾರ್ಪಣೆ, ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ಹುಟ್ಟಿದ ಮೇಲೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಅದರಂತೆ ವೀರಬಸಯ್ಯ ಹಿರೇಮಠ ಅವರು ಆಧ್ಯಾತ್ಮದ ಪ್ರತೀಕವಾದ ಬೃಹತ್ ಶಿವಲಿಂಗ ಸ್ಥಾಪನೆ ಇದೊಂದು ಮಹಾತ್ಕಾರ್ಯವಾಗಿದೆ. 
 ಇಂಥ ಪುಣ್ಯದ ಕಾರ್ಯ ನೋಡಿದಾಗ ಭಾರತ ಆಧ್ಯಾತ್ಮಿಕ ರಾಷ್ಟ್ರವೆಂದು ತಿಳಿಯುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಅನೇಕ ಹಿಂದು ದೇವಾಲಯ ನಿರ್ಮಿಸಿದ್ದಾರೆ. ತಾಂತ್ರಿಕವಾಗಿಯೂ ಹೆಚ್ಚು ಮುಂದುವರೆದಿದೆ. ಸಮಾಜಮುಖಿ ಕೆಲಸ ಮಾಡುತ್ತಿರುವ ಶರಣರು ಕಾಯಕದಿಂದ ಬದುಕು ಸಾಗಬೇಕು ಎಂದಿದ್ದಾರೆ. ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ ಜರುಗುವುದರಿಂದ ವಿವಿಧತೆಯಲ್ಲಿ ಏಕತೆ ಮೂಡುತ್ತದೆ ಎಂದರು.
ಗುಳೇದಗುಡ್ಡದ ಶ್ರೀ ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಏನೇ ಸಿರಿ ಸಂಪತ್ತು ಗಳಿಸಿದರೂ ಒಂದು ಬಿಟ್ಟು ಹೋಗುವುದು ನಿಶ್ಚಿತ. ಪ್ರತಿಯೊಬ್ಬರೂ ಸತ್ಕಾರ್ಯಕ್ಕೆ ದಾನ ಧರ್ಮ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಶಿವಯೋಗಿಗಳ ದೇವಸ್ಥಾನದ ಮೇಲೆ ೬೫ ಅಡಿ ಎತ್ತರದ ಸದ್ಭಾವನಾಲಿಂಗ ಸ್ಥಾಪನೆಯಾಗಿದೆ. ಆದರೆ ರಥ ನಿರ್ಮಾಣಕ್ಕೆ ಭಕ್ತರಿಂದ ಇನ್ನೊಂದು ಮಹತ್ಕಾರ್ಯವಾಗಬೇಕಿದೆ ಎನ್ನುತ್ತಲೇ, ರಥ ನಿರ್ಮಾಣಕ್ಕೆ ಹಲವು ಭಕ್ತರು ದೇಣಿಗೆ, ಗಿಡಮರಗಳನ್ನು ನೀಡುವುದಾಗಿ ಮುಂದೆ ಬಂದು ಹೆಸರು ಬರೆಸಿದರು.
ಮೈನಳ್ಳಿಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಮಹಾತಪಸ್ವಿ ಬಸವಂತ ಶಿವಯೋಗಿಗಳ ಆಧ್ಯಾತ್ಮಿಕೆ ಮೆಚ್ಚಬೇಕು. ಸಾಮೂಹಿಕ ಮದುವೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿಗಳು ಜೀವನದ ಪಾಠ ಅರತು, ಕಷ್ಟ ಸುಖದಲ್ಲಿ ಒಂದಾಗಿ ಬದುಕು ಸಾಗಿಸುವ ಮೂಲಕ ಮಾದರಿ ಜೀವನ ನಡೆಸಬೇಕು ಎಂದರು.
ನಿಡಶೇಸಿಯ ಚನ್ನಬಸವ ಶಿವಾಚಾರ್ಯ ಸ್ವಾಮೀಜಿ, ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ, ಕುಷ್ಟಗಿಯ ಮದ್ದಾನಿ ಹಿರೇಮಠದ ಶ್ರೀ ಕರಿಬಸವೇಶ್ವರ ಸ್ವಾಮೀಜಿ, ಕ‌ನಕಗಿರಿ ಸುವರ್ಣಗಿರಿ ವಿರಕ್ತಮಠದ ಶ್ರೀ ಚನ್ನಮಲ್ಲ ಸ್ವಾಮೀಜಿ ಆಶೀರ್ವಚನ ನೀಡಿದರು.
ಮಂಗಳೂರಿನ ಅರಳೆಲೆ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಜಿಗೇರಿಯ ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ, ಹೆಬ್ಬಾಳದ ಶ್ರೀ ನಾಗಭೂಷಣ ಸ್ವಾಮೀಜಿ, ಡಾ.ವೀರಬಸಯ್ಯ ಹಾಗೂ ದಂಪತಿ, ಶ್ರೀ ಶಾಂತಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಈ ಸಂದರ್ಭ ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ
ಗೌರಾ ಬಸವರಾಜ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ ಗುಳಗಣ್ಣವರ್, ಪ್ರಮುಖರಾದ ಅರವಿಂದಗೌಡ ಪಾಟೀಲ್, ಆನಂದ ಈಳಿಗೇರ್, ಸಂಗಮೇಶ ವಾದಿ, ಅಯ್ಯನಗೌಡ ಕೆಂಚಮ್ಮನವರ್, ರೇವಣಪ್ಪ ಸಂಗಟಿ, ಶರಣಪ್ಪ ನಿಲೋಗಲ್, ವಿಜಯ ತಾಳಕೇರಿ, ಹನುಮರಡ್ಡಿ ರಡ್ಡೇರ, ಯಮನೂರಪ್ಪ ಬ್ಯಾಳಿ, ಈಶಪ್ಪ ಸಿದ್ದಾಪುರ, ಶರಣಪ್ಪ ಬಣ್ಣದಬಾವಿ, ಹನುಮಂತಪ್ಪ ಕಲಭಾವಿ, ನಾಗರಾಜ ಉಚ್ಚಲಕುಂಟಾ, ಶರಣಪ್ಪ ಏಲಕುಗುಡ್ಡದ, ಬಸವರಾಜ ಹಿರೇಮನಿ, ಷಣ್ಮುಖಪ್ಪ ಬಳ್ಳಾರಿ, ಪ್ರೇಮ್‌ಕುಮಾರ್ ಸುರಳ, ಮಂಜು ಬಂಗಿ ಸೇರಿದಂತೆ ಇತರರಿದ್ದರು.
--

0/Post a Comment/Comments