ಪ್ರಗತಿವಾಣಿ
ಯಲಬುರ್ಗಾ: ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಕೊಪ್ಪಳದ ರಾಮಕೃಷ್ಣ ಆಶ್ರಮದ ಶ್ರೀ ಚೈತನ್ಯಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಎಸ್.ಎ.ನಿಂಗೋಜಿ ಸೆಂಟ್ರಲ್ ಪಬ್ಲಿಕ್ ಶಾಲೆಯ 9ನೇ ವಾರ್ಷಿಕೊತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ನಿಂಗೋಜಿ ಶಿಕ್ಷಣ ಸಂಸ್ಥೆಯ ಕೊಡುಗೆ ಅಪಾರವಿದೆ. ಪಾಲಕರು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು ಎಂದರು.
ಸಂಸ್ಥೆಯ ನಿರ್ದೇಶಕ ವೀರಣ್ಣ ನಿಂಗೋಜಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂದರು.
ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಇತ್ತೀಚಿಗೆ ಧಾರವಾಡ ಕವಿವಿಯಿಂದ ಡಾಕ್ಟರೇಟ್ ಪದವಿ ಪಡೆದ ಗದಗ ಪಿಪಿಜಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ವಿ.ಎ.ನಿಂಗೋಜಿಯನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಎಸ್.ಎ.ನಿಂಗೋಜಿ, ಗಣ್ಯರಾದ ವೀರಣ್ಣ ಗಾಣಿಗೇರ, ವೀರಪ್ಪ ನಿಂಗೋಜಿ, ಶರಣಪ್ಪ ರಾಂಪುರ, ಲಿಲತ್‌ಕುಮಾರ್ ಜೈನ್, ರಾಜಶೇಖರ ನಿಂಗೋಜಿ, ಎಸ್.ಎ.ನಿಂಗೋಜಿ, ರತ್ನಮ್ಮ ನಿಂಗೋಜಿ, ಸಂಪತ್‌ಕುಮಾರ್, ಬಸವರಾಜ ಆಕಳವಾಡಿ, ಸ.ಶರಣಪ್ಪ ಪಾಟೀಲ್, ಯಮುನಾ, ಪ್ರಶಾಂತ ಸೇರಿದಂತೆ ಇತರರಿದ್ದರು.
=====
Post a Comment