ಕೇಂದ್ರ, ರಾಜ್ಯ ಸರ್ಕಾರದ ಸಾಧನೆ ಜನರಿಗೆ ತಿಳಿಸಿ

ಪ್ರಗತಿ ವಾಣಿ ಕೊಪ್ಪಳ
ಯಲಬುರ್ಗಾ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಹಲವಾರು ಜನಪರ ಕಾರ್ಯಕ್ರಮ ಜಾರಿಗೊಳಿಸಿ ಅಭಿವೃದ್ಧಿಗೆ ಶ್ರಮಿಸಿವೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.
ತಾಲೂಕಿನ ಚೌಡಾಪುರ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ವಿಜಯ ಸಂಕಲ್ಪ ಅಭಿಯಾನದಲ್ಲಿ ಮಾತನಾಡಿದರು.
ಈಗಾಗಲೇ ಮನೆಗೆ ಸ್ಟಿಕ್ಕರ್ ಅಂಟಿಸುವ ಕೆಲಸ ಕಾರ್ಯಕರ್ತರಿಂದ ಆಗುತ್ತಿದೆ. ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಕೆಲಸ ಆಗಬೇಕು. ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಆಗಿವೆ ಎಂದರು.
ಇದೇ ವೇಳೆ ವನಜಭಾವಿ, ಗುಳೆ, ಚಿಕ್ಕಮನ್ನಾಪುರ, ಶಿಡ್ಲಭಾವಿ, ಬೋದೂರು, ಗುಂಟಮಡು, ಕೃಷ್ಣಾಪುರ, ಮರಕಟ್ ಹಾಗೂ ತಾಳಕೇರಿಯಲ್ಲಿ ಜನರ ಮನೆಗೆ ತೆರಳಿ ಬಿಜೆಪಿ ಸಾಧನೆಗಳ ಕುರಿತ ಕರಪತ್ರ ಹಂಚಲಾಯಿತು. ಇದೇ ವೇಳೆ ಮನೆ ಗೋಡೆಗಳಿಗೆ ಬಿಜೆಪಿ ಚಿಹ್ನೆಯಿರುವ ಬರಹಗಳನ್ನು ಬರೆಯಿಸಲಾಯಿತು.
ಈ ಸಂದರ್ಭ ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಪ್ರಮುಖರಾದ ಬಸಲಿಂಗಪ್ಪ ಭೂತೆ, ಶರಣಪ್ಪ ನಿಲೋಗಲ್, ರಾಚಪ್ಪ ಹುರಳಿ, ಆನಂದ ಈಳಿಗೇರ್, ಅಯ್ಯನಗೌಡ ಕೆಂಚಮ್ಮನವರ್, ವೀರಣ್ಣ ಹುಬ್ಬಳ್ಳಿ, ಶರಣಪ್ಪ ಹೊಸ್ಕೇರಿ, ಹನುಮರಡ್ಡಿ ರಡ್ಡೇರ, ವೆಂಕಟೇಶ ವಾಲ್ಮೀಕಿ, ಹನುಮೇಶ ಮ್ಯಾಗೇರಿ, ಶರಣಪ್ಪ ಹರಿಜನ, ಅಶೋಕ ಹರ್ಲಾಪುರ, ನಿಂಗಜ್ಜ ಸಾಹುಕಾರ, ಕಲ್ಲಪ್ಪ ಹಾವೇರಿ, ಸಣ್ಣಹನುಮಂತಪ್ಪ ಛತ್ರಗುಡಿ, ಬಸನಗೌಡ ತೊಂಡಿಹಾಳ, ದೊಡ್ಡಪ್ಪ ಗೌಡ್ರ, ಈಶಪ್ಪ ಸಿದ್ದಾಪುರ, ಯಮನೂರ ಬ್ಯಾಳಿ, ಯಮನೂರಪ್ಪ ಪರಂಗಿ, ಬಸವರಾಜ ಹಾವಿನ್, ವಿರೂಪಾಕ್ಷಗೌಡ ಪಾಟೀಲ್, ಗವಿಸಿದ್ದಪ್ಪ ಹಾವಿನ ಸೇರಿದಂತೆ ಇತರರಿದ್ದರು.

0/Post a Comment/Comments