ಹ್ಯಾಂಡಲ್ ಇಲ್ಲದ ಬೇಕ್ ಓಡಿಸಿ 360 ಕಿ.ಮೀ. ದೂರ ಕ್ರಮಿಸಿದ ಕಲಾವಿದ ಈರಣ್ಣ ಕುಂದರಗಿಮಠ


ಪ್ರಗತಿ ವಾಣಿ,ಕೊಪ್ಪಳ
ಕನ್ನಡ ನಾಡು, ನುಡಿಯ ಜಾಗೃತಿಗಾಗಿ ಬೈಕ್ ಸಾಹಸ ಕ್ರೀಡೆಯ ಮೂಲಕ ಬಾಗಲಕೋಟೆಯಿಂದ ಹಾವೇರಿಯಲ್ಲಿ ಇತ್ತೀಚೆಗೆ ಜರುಗಿದ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹ್ಯಾಂಡಲ್ ಇಲ್ಲದ ಬೇಕ್ ಓಡಿಸಿ 360 ಕಿ.ಮೀ. ದೂರ ಕ್ರಮಿಸಿದ ಸಲುವಾಗಿ ಇಲಕಲ್‌ನ ಕನ್ನಡ ಪ್ರೇಮಿ ಈರಣ್ಣ ಕುಂದರಗಿಮಠಗೆ ಯಲಬುರ್ಗಾದ ಅಗ್ನಿಶಾಮಕ ಠಾಣೆಯಲ್ಲಿ ಗುರುವಾರ ಸನ್ಮಾನಿಸಲಾಯಿತು. ಪ್ರಭಾರ ಠಾಣಾಧಿಕಾರಿ ಶೇಖ್ ಮೆಹಬೂಬ್, ಸಿಬ್ಬಂದಿ ಆನಂದ ಹೂಗಾರ, ಆಲಂಬಾಷ, ಅಕ್ಬರ ಪಟೇಲ್, ಬಸವರಾಜ, ರವಿಕುಮಾರ ಅಕ್ಕಿ, ಬಸಲಿಂಗಪ್ಪ, ರಾಮಪ್ಪ ಡೊಳ್ಳಿನ, ನಾಗರಾಜ ಹಿರೇಕುರಬರ್ ಇದ್ದರು.

0/Post a Comment/Comments