ಕುಮಾರಸ್ವಾಮಿ ಮಾಡಿರುವ ಅಭಿವೃದ್ಧಿ ಕೆಲಸಗಳೇ ಮುಂಬರುವ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿವೆ




ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಜಿಲ್ಲೆಯ ಅಭಿವೃದ್ದಿಗೆ ಮಾಜಿ ಸಿಎಂ ಕುಮಾರಸ್ವಾಮಿ ಕೊಡುಗೆ ಅಪಾರವಿದೆ. ಈ ಸಲ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಪೂರ್ಣ ಪ್ರಮಾಣದ ಬಹುಮತ ಪಡೆದು ಸರ್ಕಾರ ರಚನೆ ಮಾಡುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ಜೆಡಿಎಸ್ ನಿಯೋಜಿತ ಅಭ್ಯರ್ಥಿ ಮಲ್ಲನಗೌಡ ಕೋನನಗೌಡ್ರ ಹೇಳಿದರು.
ಪಟ್ಟಣದಲ್ಲಿ ಜೆಡಿಎಸ್ ಪಕ್ಷದ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಕುಮಾರಸ್ವಾಮಿಯವರು ಈ ಭಾಗದ ರೈತರ ಅಭಿವೃದ್ಧಿಯ ಹಿತ ಗಮನದಲ್ಲಿಟ್ಟುಕೊಂಡು ಸಮಿಶ್ರ ಸರ್ಕಾರದ ಅವಧಿಯಲ್ಲಿ ಕೆರೆ ತುಂಬಿಸುವ ಯೋಜನೆಗೆ ಅನುದಾನ ಬಿಡುಗಡೆ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳ ಅನುಷ್ಟಾನದಲ್ಲಿ ಮಾಜಿ ಪ್ರಧಾನಿ ದೇವೆಗೌಡರು ರೈತಪರ ಕಾಳಜಿ ಮರೆದಿದ್ದಾರೆ. ಕುಮಾರಸ್ವಾಮಿ ಮಾಡಿರುವ ಅಭಿವೃದ್ಧಿ ಕೆಲಸಗಳೇ ಮುಂಬರುವ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿವೆ. ಪಂಚರತ್ನ ಯಾತ್ರೆಗೆ ರಾಜ್ಯದ ಮತದಾರರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಪಕ್ಷದ ಬೆಳವಣಿಗೆಗೆ ಆಶಾದಾಯಕವಾಗಿದೆ ಎಂದರು. ಪಕ್ಷದ ಜಿಲ್ಲಾಧ್ಯಕ್ಷ ವಿರೇಶ ಮಾಹಾಂತಯ್ಯನಮಠ ಮಾತನಾಡಿದರು.
ಈ ಸಂದರ್ಭ ಪಕ್ಷದ ಪ್ರಮುಖರಾದ ಮಂಜುನಾಥ ಸೊರಟೂರ, ಬಸವರಾಜ ಅಧಿಕಾರಿ, ಶರಣಪ್ಪ ರಾಂಪುರ, ಬಸವರಾಜ ಗುಳಗುಳಿ, ಸುರೇಶ ಗುರಿಕಾರ, ಕೆಂಚಪ್ಪ ಹಳ್ಳಿ, ಜಗದೀಶ ಹೂಗಾರ, ಗವಿಸಿದ್ದಯ್ಯ ಲಕಮಾಪುರ, ಟೋಪ್ಪಣ್ಣ ನಾಯಕ, ಬಸವರಾಜ ಮಾಲಿಪಾಟೀಲ್, ಮಲ್ಲಿಕಾರ್ಜುನ ಗೌಡರು, ತಿಮ್ಮನಗೌಡ, ಅಮರೇಶ ಕೊಪ್ಪದ ಸೇರಿದಂತೆ ಇತರರಿದ್ದರು.

0/Post a Comment/Comments