ಧರ್ಮಸ್ಥಳ ಸಂಘ ಮಹಿಳೆಯರ ಬದುಕಿಗೆ ದಾರಿದೀಪ

ಪ್ರಗತಿ ವಾಣಿ ಕೊಪ್ಪಳ
ಯಲಬುರ್ಗಾ: ಧರ್ಮಸ್ಥಳ ಸಂಸ್ಥೆಯಿಂದ ನಾಡಿನ ಬಡವರು, ಮಹಿಳೆಯರ ಬದುಕು ಉಜ್ವಲವಾಗಿದೆ. ಸಂಸ್ಥೆಯ ಸಮಾಜಮುಖಿ ಕಾರ್ಯ ಮಾದರಿಯಾಗಿದೆ ಎಂದು ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಹೇಳಿದರು.

ಪಟ್ಟಣದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಶುಕ್ರವಾರ ಹಮ್ಮಿಕೊಂಡಿದ್ದ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಡಿಮೆ ದರದಲ್ಲಿ ಸಾಲ ಸೌಲಭ್ಯ ನೀಡಿ ಅನೇಕ ಮಹಿಳೆಯರ ಬದುಕಿಗೆ ದಾರಿದೀಪವಾಗಿದೆ. ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಂಸ್ಥೆಯ ಕೊಡುಗೆ ಅಪಾರವಾಗಿದೆ. ಪೂಜ್ಯ ಹೆಗಡೆ ಅವರ ಮಾರ್ಗದರ್ಶನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಉತ್ತಮ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಪ್ರಮುಖರಾದ ಅಂದಾನಗೌಡ ಉಳ್ಳಾಗಡ್ಡಿ, ಜಯಶ್ರೀ ಅರಕೇರಿ, ಸಂಸ್ಥೆಯ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ್, ಜನಜಾಗೃತಿ ಸದಸ್ಯ  ಶರಣಬಸಪ್ಪ ದಾನಕೈ, ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಸತೀಶ್ ವರ್ತಕ, ಸಂಗಣ್ಣ ಟೆಂಗಿನಕಾಯಿ ಮಾತನಾಡಿದರು.

ಶ್ರೀಧರಮುರಡಿ ಹಿರೇಮಠ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ, ಗುಳೇದಗುಡ್ಡದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ, ಜಿಗೇರಿಯ ಗುರುಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಪ್ರಮುಖರಾದ ಆನಂದ ಅಣಗೌಡ್ರ, ಎಂ.ಎಚ್.ಪಾಟೀಲ್, ಬಸಪ್ಪ ಬಿಸಿರೊಟ್ಟಿ, ಪ್ರಸ್ನನಕುಮಾರ ಸಿದ್ದಾರೂಡ, ಪದಾಧಿಕಾರಿಗಳಾದ ಶೈಲಜಾ ಮಾಲಿಪಾಟೀಲ್, ರೇಣುಕಾ ಮೇಳಿ, ನೌಶದಬೇಗಂ ಹಾಗೂ ಸಂಸ್ಥೆಯ ಸಿಬ್ಬಂದಿ ಸೇರಿ ಇತರರಿದ್ದರು.

0/Post a Comment/Comments