ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಕೆಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದ ಹಲವಾರು ಜನಪರ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿವೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ತಾಲೂಕಿನ ಕರಮುಡಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕರಮುಡಿ, ಬಂಡಿಹಾಳ ಹಾಗೂ ತೊಂಡಿಹಾಳ ಪ್ರಮುಖ ರಸ್ತೆಯಲ್ಲಿ ಬರುವ ಹಳ್ಳಗಳಿಗೆ ಸೇತುವೆ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಅಭಿವೃದ್ಧಿಗಾಗಿ ೨೪ ಸಾವಿರ ಕೋಟಿ ರೂ. ನೀಡಾಗಿದೆ. ಅದರಲ್ಲಿ ಯಲಬುರ್ಗಾ ಕ್ಷೇತ್ರಕ್ಕೆ ೫೪ ಕೋಟಿ ರೂ. ಯಲಬುರ್ಗಾ ಕ್ಷೇತ್ರಕ್ಕೆ ನೀಡಲಾಗಿದೆ. ಕಾಂಗ್ರೆಸ್‌ನವರದು ಕೇವಲ ಗರದಿಗಮ್ಮತ್ತಿನ ಮಾತು. ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಬಗ್ಗೆ ಮಾತಾಡ್ತಾರೆ. ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ೨೯ ರೂ. ನೀಡುತ್ತದೆ. ರಾಜ್ಯ ಕಾಂಗ್ರೆಸ್‌ನಿಂದ ಕೇವಲ ೩ ರೂ., ಮತ್ತು ಒಂದು ಖಾಲಿ ಚೀಲ ಕೊಟ್ಟು ಜಂಬದ ಮಾತು ಹೇಳುತ್ತಾರೆ. ನಮ್ಮ ಡಬಲ್ ಇಂಜನ್ ಸರ್ಕಾರದಿಂದ ಜಾರಿಗೆ ತಂದ ಎಲ್ಲಾ ಕಾರ್ಯಕ್ರಮಗಳ ಕುರಿತು ನಮ್ಮ ಪಕ್ಣದ ಕಾರ್ಯಕರ್ತರು ಮನೆ ಮನೆಗೆ ತಲುಪಿಸಬೇಕು ಎಂದರು.
ಸಚಿವ ಹಾಲಪ್ಪ ಆಚಾರ್ ಯಲಬುರ್ಗಾ ಕ್ಷೇತ್ರದ ಕೆರೆಗಳಿಗೆ ನೀರು ತಂದು ಚುನಾವಣೆಯಲ್ಲಿ ಮತ ಕೇಳುತ್ತೇವೆ ಎಂದು ಹೇಳುವ ಹಾಲಪ್ಪ ಆಚಾರ್ ಮಾತು ರಾಜಕೀಯ ಗಂಡಸ್ತನ ಎಂದರು.
--
ಸಚಿವ ಹಾಲಪ್ಪ ಆಚಾರ್ ಮಾತನಾಡಿ, ಈ ಹಿಂದೆ ಆಡಳಿತ ಮಾಡಿದವರು ರಸ್ತೆ ನಿರ್ಮಾಣ ವೇಳೆ ಸೇತುವೆ ನಿರ್ಮಿಸಲಿಲ್ಲ. ಪರಿಣಾಮ ಈ ಭಾಗದ ಜನರು ಸಾವು ನೋವು ಅನುಭವಿಸಬೇಕಾಯಿತು. ರಸ್ತೆಗೆ ತುರ್ತಾಗಿ ಸೇತುವೆ ನಿರ್ಮಾಣವಾಗಬೇಕು ಎಂದು ಸಚಿವ ಸಿ.ಸಿ.ಪಾಟೀಲ್ ಗಮನಕ್ಕೆ ತಂದಾಗ ನನ್ನ ಮನವಿಗೆ ತಕ್ಷಣ ಸ್ಪಂದಿಸಿ ಕಾಮಗಾರಿ ಪ್ರಾರಂಭಕ್ಕೆ ಅನುದಾನ ಬಿಡುಗಡೆ ಮಾಡಿದ್ದಾರೆ. ಮಳೆಗಾಲದ ಒಳಗಾಗಿ ಸೇತುವೆ ನಿರ್ಮಿಸಲಾಗುತ್ತದೆ. ಇದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಕಾಂಗ್ರೆಸ್ ನಾಯಕರು ನೀರಾವರಿ ಬಗ್ಗೆ ಚಕಾರೆ ಎತ್ತಲಿಲ್ಲ. ನಾವು ಪ್ರಾರಂಭಿಸಿದ ಯೋಜನೆಗೆ ಅಡ್ಡಗಲ್ಲೆಂದು ಕೊಂಕು ಮಾತಾಡಿದರು. ಚುನಾವಣೆ ಪೂರ್ವ ಕೆರೆಗಳಿಗೆ ನೀರು ತಂದು ಉತ್ತರ ನೀಡುವೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ವಿರುದ್ಧ ಹರಿಹಾಯ್ದರು.
ಜಿಪಂ ಮಾಜಿ ಸದಸ್ಯ ಸಿ.ಎಚ್.ಪಾಟೀಲ್ ಮಾತನಾಡಿದರು.
ಈ ಸಂದರ್ಭ ಗ್ರಾಪಂ ಅಧ್ಯಕ್ಷೆ ರೇಣುಕಾ ಗಂಗಪ್ಪ ಹವಳಿ, ತಹಸೀಲ್ದಾರ್ ಶ್ರೀಶೈಲ ತಳವಾರ್, ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಪ್ರಮುಖರಾದ ಸಿ.ಎಚ್.ಪಾಟೀಲ್, ಬಸಲಿಂಗಪ್ಪ ಭೂತೆ, ಶಕುಂತಲಾದೇವಿ ಮಾಲಿಪಾಟೀಲ್, ಶಿವಲೀಲಾ ದಳವಾಯಿ, ವೀರಣ್ಣ ಹುಬ್ಬಳ್ಳಿ, ರತನ್ ದೇಸಾಯಿ, ವಿಶ್ವನಾಥ ಮರಿಬಸಪ್ಪನವರ್, ಶರಣಪ್ಪ ಈಳಿಗೇರ್, ಕಳಕಪ್ಪ ತಳವಾರ್, ಚನ್ನಮ್ಮ ಪಾಟೀಲ್, ಬಸವರಾಜ ಸಂಶಿಮಠ, ಸಂಗಪ್ಪ ಬಂಡಿ, ಬಸನಗೌಡ ತೊಂಡಿಹಾಳ, ಶರಣಗೌಡ ಪೊಲೀಸ್ ಪಾಟೀಲ್, ಪಿಡಬ್ಲುಡಿ ಎಇಇ ಐ.ಎಸ್.ಹೊಸೂರು ಸೇರಿದಂತೆ ಇತರರಿದ್ದರು.
--
Post a Comment