ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಇಡೀ ವಿಶ್ವದಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಮಾದರಿಯಾಗಿದ್ದು ಅದರ ಅಡಿಯಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದು ನೂತನ ತಹಶೀಲ್ದಾರ ವಿಠಲ್ ಚೌಗಲ್ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ತಾಲೂಕಾಡಳಿತ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ 74ನೇ ಗಣರಾಜ್ಯೋತ್ಸವದ ನಿಮಿತ್ಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಭಾರತ ದೇಶ ಸ್ವತಂತ್ರ ಬಳಿಕ ಈ ದೇಶಕ್ಕೆ ಸಂವಿಧಾನ ರಚಿಸಿ ಪ್ರತಿಯೊಬ್ಬರಿಗೂ ಸಮಾನತೆ ಹಕ್ಕನ್ನು ಕೊಡಿಸಿ, ಜತೆಗೆ ಗಣತಂತ್ರ ವ್ಯವಸ್ಥೆಯನ್ನು ರೂಪಿಸಿದ ಡಾ.ಅಂಬೇಡ್ಕರ್ ಅವರ ಕೊಡುಗೆಯನ್ನು ನಾವೆಲ್ಲರೂ ಗೌರವಿಸಬೇಕು ಎಂದರು.
ನಮ್ಮ ರಾಷ್ಟ್ರ ಇಂದು ವೇಗವಾಗಿ ಅಭಿವೃದ್ಧಿ ಪಥದತ್ತ ಸಾಗಲು ದೇಶದ ಅನೇಕ ನಾಯಕರು ತ್ಯಾಗ ಬಲಿದಾನ ಕೊಡುಗೆಯನ್ನು ಯುವ ಪೀಳಿಗೆ ಸ್ಮರಿಸಬೇಕು, ಇಡೀ ವಿಶ್ವ ಮಟ್ಟದಲ್ಲಿ ಭಾರತ ಅಭಿವೃದ್ಧಿ ಆಗುತ್ತಿದ್ದು ಇದಕ್ಕೆ ಎಲ್ಲ ಅನೇಕರ ಶ್ರಮವಿದೆ ಎಂದರು.
ಪ್ರತಿಯೊಬ್ಬರಲ್ಲಿ ದೇಶದ ರಾಷ್ಟ್ರ ಅಭಿಮಾನವನ್ನು ಮೈಗೂಡಿಸಿಕೊಂಡು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೌರವದಿಂದ ಬಾಳಿದಾಗ ಮಾತ್ರ ಜೀವನ ಸಾರ್ಥಕತೆಯಾಗುತ್ತದೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದಾಗ ಪ್ರತಿಯೊಬ್ಬರು ವಿದ್ಯಾವಂತರಾಗುತ್ತಾರೆ ಈ ನಿಟ್ಟಿನಲ್ಲಿ ಪಾಲಕರು ಕೂಡ ತಮ್ಮ ಮಕ್ಕಳ ಭವಿಷ್ಯ ಉಜ್ವಲಕ್ಕಾಗಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಈ ತಾಪಂ ಇಓ ಸಂತೋಷ ಪಾಟೀಲ, ಪ.ಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಉಪಾಧ್ಯಕ್ಷೆಶಾಂತಾ ಮಾಟೂರು,ಸ್ಥಾಯಿ ಸಮಿತಿ ಅಧ್ಯಕ್ಷ ಕಳಕಪ್ಪ ತಳವಾರ,ಸದಸ್ಯರಾದ
ರೇವಣಪ್ಪ ಹಿರೇಕುರಬರ,ಅಶೋಕ ಅರಕೇರಿ,ರಿಯಾಜಖಾಜಿ,ಹನಮಂತಪ್ಪ ಭಜಂತ್ರಿ,ಅಂದಯ್ಯ ಕಳ್ಳಿಮಠ,ಪ್ರಭುರಾಜ ಕಲಬುರ್ಗಿ,
ಮುಖಂಡ ವೀರಣ್ಣ ತಳವಾರ,ಅಧಿಕಾರಿಗಳಾದ ಪ್ರಾಣೇಶ ಹಾದಿಮನಿ,ಎಫ್.ಎಂ.ಕಳ್ಳಿ,ಶಿವಕುಮಾರ ಕಟ್ಟಿಮನಿ,ಮಂಜುನಾಥ ಲಿಂಗಣ್ಣನವರ್,ವಿ.ಕೆ.ಬಡಿಗೇರ ಇದ್ದರು.ಶಾಲಾ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮ ಜರುಗಿದವು.
Post a Comment