ಅಧಿಕಾರ ಹಿಡಿಯಲಿದೆ ಕಾಂಗ್ರೆಸ್

ಪ್ರಗತಿ ವಾಣಿ ಕೊಪ್ಪಳ
ಯಲಬುರ್ಗಾ: ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ದುರಾಡಳಿತವನ್ನು ಶೀಘ್ರ ಜನ ಕೊನೆಗೊಳಿಸಲಿದ್ದು, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕೇರಳದ ರಾಜ್ಯಸಭಾ ಸದಸ್ಯೆ ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ವೀಕ್ಷಕಿ ಜೆ.ಬಿ.ಮಾಥರ್ ವಿಶ್ವಾಸ ವ್ಯಕ್ತಪಡಿಸಿದರು.

ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ. ಆ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ವಿವಿಧ ಘಟಕದ ಪದಾಧಿಕಾರಿಗಳು ತಳಮಟ್ಟದಿಂದ ಪಕ್ಷ ಸಂಘಟನೆಗೆ ಶ್ರಮಿಸಬೇಕು. ಬೂತ್ ಮಟ್ಟದಲ್ಲಿ ಪಕ್ಷದ ಸಭೆ ನಡೆಸಿ ಜನಸಾಮಾನ್ಯರಿಗೆ ಕಾಂಗ್ರೆಸ್ ಮಾಡಿದ ಸಾಧನೆ, ಅಭಿವೃದ್ಧಿಯ ಕೊಡುಗೆ ಕುರಿತು ತಿಳಿಸಬೇಕು ಎಂದು ಸಲಹೆ ನೀಡಿದರು.
ಬಿಜೆಪಿಯಿಂದ ಸುಳ್ಳು ಪ್ರಚಾರ: ಪ್ರಧಾನಿ ನರೇಂದ್ರ ಮೋದಿ ಜನಸಾಮಾನ್ಯರ ಹಿತ ಕಾಪಾಡುವಂತ ಕೆಲಸ ಮಾಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಸುಳ್ಳು ಯುನಿವರ್ಸಿಟಿ ನಿರ್ಮಿಸಿದ್ದು ಜನತೆಗೆ ಸುಳ್ಳು ಹೆಚ್ಚು ಹೇಳಲು ಹೊರಟಿದೆ. ಇದಕ್ಕೆ ಕಡಿಹಾಣ ಹಾಕಲು ಮತದಾರರು ಸಿದ್ಧರಾಗಬೇಕು ಎಂದರು.

ಸಿಎಂ ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಕಾಮಗಾರಿಯಲ್ಲಿ ೪೦ ಪರ್ಸೆಂಟ್ ಕಮಿಷನ್ ಪಡೆದಿರುವ ಆರೋಪಗಳು ಜಗಜ್ಜಾಹೀರಾಗಿವೆ. ಚುನಾವಣೆ ಹತ್ತಿರ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸುಳ್ಳು ಹೇಳಲು ಮೋದಿ, ಅಮೀತ್ ಶಾ, ಜೆ.ಪಿ.ನಡ್ಡಾ ಸೇರಿದಂತೆ ಕೇಂದ್ರದ ಸಚಿವರು ಬರುತ್ತಿದ್ದಾರೆ ಎಂದು ಟೀಕಿಸಿದರು.

ರಾಯರಡ್ಡಿ ಗೆಲ್ಲಿಸಿ: ಯಲಬುರ್ಗಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಂತ್ರಿ ಮಾಡಿರುವ ರಾಯರಡ್ಡಿಯನ್ನು ಮತ್ತೊಮ್ಮೆ ಗೆಲ್ಲಿಸಲು ಕಾರ್ಯಕರ್ತರು ತಯಾರಾಗಬೇಕು ಎಂದರು. ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಯಂಕಣ್ಣ ಯರಾಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಮಹಿಳಾ ಘಟಕದ ಅಧ್ಯಕ್ಷೆ ಸಾವಿತ್ರಿ ಗೊಲ್ಲರ್ ಮಾತನಾಡಿದರು.
--
ಕೋಟ್..
ರಾಜ್ಯದಲ್ಲಿ ಪ್ರಜಾಧ್ವನಿ ಯಾತ್ರೆ ಮೂಲಕ ಕಾಂಗ್ರೆಸ್ ಹೊಸ ಮುನ್ನುಡಿ ಬರೆದಿದೆ. ಸಿದ್ದರಾಮಯ್ಯ, ಡಿಕೆಶಿ ನೇತೃತ್ವದಲ್ಲಿ ಪಕ್ಷ ಸಂಘಟನೆಗೆ ಕೈಜೋಡಿಸಿದ್ದು, ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನನ್ನ ಕ್ಷೇತ್ರದ ೨೫೬ ಬೂತ್ ಸಮಿತಿಗೆ ಮೂರು ಸಾವಿರ ಜನರನ್ನು ನೇಮಕ ಮಾಡಲಾಗಿದೆ.
-ಬಸವರಾಜ ರಾಯರಡ್ಡಿ, ಮಾಜಿ ಸಚಿವ.
--
ಈ ಸಂದರ್ಭ ಕೆಪಿಸಿಸಿ ಸದಸ್ಯೆ ಗಿರಿಜಾ ರೇವಣಪ್ಪ  ಸಂಗಟಿ, ಪ್ರಮುಖರಾದ ಹನುಮಂತಗೌಡ ಚಂಡೂರು, ಕೆರಿಬಸಪ್ಪ ನಿಡಗುಂದಿ, ಬಿ.ಎಂ.ಶಿರೂರು, ಖಾಸೀಂಸಾಬ್ ತಳಕಲ್, ರಾಘವೇಂದ್ರ ಜೋಶಿ, ಕೃಷ್ಣಾ ಇಟಿಗಿ, ಗವಿ ಪಾಟೀಲ್, ಶರಣಪ್ಪ ಗಾಂಜಿ, ಸುಧೀರ್ ಕೊರ್ಲಹಳ್ಳಿ, ನಾಗರಾಜ ನವಲಹಳ್ಳಿ, ಮಹಾಂತೇಶ ಗಾಣಿಗೇರ್, ಶಿವನಗೌಡ ದಾನರಡ್ಡಿ, ಮಲ್ಲು ಜಕ್ಕಲಿ, ಹನುಮಂತಪ್ಪ ಹುಣಸಿಹಾಳ, ರೆಹೇಮನ್‌ಸಾಬ್ ನಾಯಕ, ಫರೀದಾಬೇಗಂ, ಕಿಶೋರಿ ಬುದನುರು, ಜಯಶ್ರೀ ಅರಕೇರಿ, ನಂದಿತಾ ದಾನರೆಡ್ಡಿ, ಜಯಶ್ರೀ ಕಂದಕೂರು, ಈಶ್ವರ ಅಟಮಾಳಗಿ, ಪುನೀತ್ ಕೊಪ್ಪಳ ಸೇರಿದಂತೆ ಇತರರಿದ್ದರು.

0/Post a Comment/Comments