ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಮೊದಲ ಸ್ಥಾನ ಪಡೆದ ನವೀನ್‌ಕುಮಾರ್ ಗುಳಗಣ್ಣವರ್ ಅಭಿಮಾನಿ ಬಳಗ

ಪ್ರಗತಿ ವಾಣಿ ಯಲಬುರ್ಗಾ:
ಕುಕನೂರು ತಾಲೂಕಿನ ಇಟಗಿ ಗ್ರಾಮದ ಗ್ರಾಮದೇವತೆ ಶ್ರೀ ದ್ಯಾಮಾಂಬಿಕಾ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ೬೨ ಕೆ.ಜಿ. ಒಳಗಿನ ಹೊನಲು ಬೆಳಕಿನ ರಾಜ್ಯ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ತಾಲೂಕಿನ ಸಂಕನೂರು ಗ್ರಾಮದ ನವೀನ್‌ಕುಮಾರ್ ಗುಳಗಣ್ಣವರ್ ಅಭಿಮಾನಿ ಬಳಗ ಮೊದಲ ಸ್ಥಾನ ಪಡೆದ ತಂಡಕ್ಕೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್‌ಕುಮಾರ್ ಗುಳಗಣ್ಣವರ್ ಟ್ರೋಫಿ ವಿತರಿಸಿದರು. ಆಟಗಾರರಾದ ಮಹಾಂತೇಶ ಮಾಲಿಪಾಟೀಲ್, ಮುತ್ತು, ರಂಜಾನ್, ಮಾರ್ತಾಂಡ, ಸುರೇಶ ಇತರರಿದ್ದರು.
-----

0/Post a Comment/Comments