ಕ್ರೀಡಾಂಗಣಕ್ಕೆ ಕಾಂಗ್ರೆಸ್ ನಾಯಕರ ಹೆಸರಿಟ್ಟರೆ ಕಾಂಗ್ರೆಸ್ನವರು ಟೀಕೆ ಸರಿಯಲ್ಲಪ್ರಗತಿ ವಾಣಿ, ಕೊಪ್ಪಳ
ಯಲಬುರ್ಗಾ: ಕಾಂಗ್ರೆಸ್ ಹಿರಿಯ ನಾಯಕ ಹಾಗೂ ದೇಶದ ಪ್ರಥಮ ಗೃಹ ಮಂತ್ರಿ ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಹೆಸರನ್ನು ಪಟ್ಟಣದ ಕ್ರೀಡಾಂಗಣಕ್ಕೆ ನಾಮಕರಣ ಮಾಡುವುದನ್ನು ಸಹಿಸದೆ ಕಾಂಗ್ರೆಸ್ ನವರೇ  ವಿರೋಧ ಮಾಡುವುದು ನಾಚಿಕೆಗೇಡಿ ಸಂಗತಿ ಎಂದು  ಪ.ಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಪ್ಟಂಬರ್ 17ರಂದು ಪಟ್ಟಣದ ತಾಲೂಕು ಕ್ರೀಡಾಂಗಣಕ್ಕೆ ನೂತನವಾಗಿ ದೇಶದ ಸ್ವತಂತ್ರ ಹೋರಾಟಗಾರ ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಹೆಸರನ್ನು ಸಚಿವರಾದ ಹಾಲಪ್ಪ ಆಚಾರ್ ಅವರು ನಾಮಕರಣ ಅನಾವರಣಗೊಳಿಸಿದ್ದಾರೆ. ಇದನ್ನು ಸ್ವಾಗತಿಸಿ ಬೆಂಬಲಿಸಬೇಕಾದ ಕಾಂಗ್ರೆಸ್ನವರು ಕಾನೂನಾತ್ಮಕ ಮಾಡದೆ ಅನಾವರಣ ಮಾಡಿದ್ದು ಸರಿಯಲ್ಲ ಎಂದು ಹೇಳುವುದು ಯಾವ ನ್ಯಾಯ?, ಸ್ಟೇಡಿಯಂಗೆ ಬಿಜೆಪಿಯ ಮುಖಂಡರ ಹೆಸರನ್ನು ಇಟ್ಟಿಲ್ಲ ಅವರೇ ಪಕ್ಷದ ನಾಯಕರನ್ನು ಹೆಸರಿಟ್ಟರು ಅವರಿಗೆ ಸಹಿಸಿಕೊಳ್ಳುವ ಮನೋಭಾವನೆ ಇಲ್ಲ ಎಂದು ಆರೋಪಿಸಿದರು.
2017ರಲ್ಲಿ ಕ್ರೀಡಾಪಟುಗಳು ಮತ್ತು ಸಂಘ ಸಂಸ್ಥೆಗಳಿಂದ ಮನವಿಯನ್ನು  ಸಲ್ಲಿಸಿದ್ದು ಹೀಗಾಗಿ ಸಾಮಾನ್ಯ ಸಭೆಯಲ್ಲಿ 18 ಸದಸ್ಯರು ಆ ಮನವಿ ಅಂಗೀಕರಿಸಿ ಕ್ರೀಡಾಂಗಣಕ್ಕೆ ಪಟೇಲರ ಹೆಸರನ್ನು ಅನುಮೋದನೆಯನ್ನು ನೀಡಿ, ಸಂಬಂಧಿಸಿದ ಇಲಾಖೆ ಅನುಮತಿ ಪಡೆದುಕೊಂಡು ಹೆಸರನ್ನ ಅನಾವರಣಗೊಳಿಸಲಾಗಿದೆ ಎಂದರು.
ದೇಶಕ್ಕೆ ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ಪಟೇಲರ ಕೊಡುಗೆಯನ್ನು ಪ್ರತಿಯೊಬ್ಬರು ಸ್ಮರಿಸಬೇಕು ಅದನ್ನು ಬಿಟ್ಟು ವಿರೋಧಿಸುವುದು ಏಕೆ?, 
ಹಿಂದೆ ಬಸವರಾಜ ರಾಯರಡ್ಡಿ ಶಾಸಕರಾಗಿದ್ದ ಸಂದರ್ಭದಲ್ಲಿ ಮಾರನಾಳ  ರಸ್ತೆಯ ಪಕ್ಕದಲ್ಲಿ ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ಆಶ್ರಯ ಬಡವಣಿಗೆ ಕಾಂಗ್ರೆಸ್ ನವರು ಬಸವರಾಜ ರಾಯರಡ್ಡಿ ಹೆಸರನ್ನು ನಾಮಕರಣ ಮಾಡಿದ್ದಾರೆ. ಆ ವೇಳೆ ಬಿಜೆಪಿ ಸದಸ್ಯರ ಗಮನಕ್ಕೆ ತರದೆ ಘೋಷಣೆ ಮಾಡಿ, ಯಾವುದೇ ಕಾನೂನು ಪ್ರಕ್ರಿಯೆಗೊಳಿಸದೆ ಏಕಾಏಕಿ ಆಶ್ರಯ ಬಡಾವಣೆಗೆ ರಾಯರೆಡ್ಡಿ ಕಾಲೋನಿ ಎಂದು ಹೆಸರು ಇಟ್ಟಿರುವುದು ಸರಿನಾ ತಪ್ಪು ಎನ್ನುವುದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಟೀಕಿಸಿದರು.
ಮುಂದಿನ ದಿನಗಳಲ್ಲಿ ಪಟ್ಟಣದ ಕ್ರೀಡಾಂಗಣಕ್ಕೆ ಸೌಲಭ್ಯಗಳನ್ನು ಕಲ್ಪಿಸಿ, ಮಾದರಿ ಕ್ರೀಡಾಂಗಣ ನಿರ್ಮಾಣಕ್ಕೆ ಶ್ರಮಿಸಲಾಗುವುದು, ನಾಮಕರಣ ವಿಚಾರದಲ್ಲಿ ಸಚಿವ ಹಾಲಪ್ಪ ಆಚಾರ್ ಬಗ್ಗೆ ಟೀಕೆ  ಸರಿಯಲ್ಲ ಅವರು ಅಭಿವೃದ್ಧಿ ಕೆಲಸಗಳನ್ನು ಸಹಿಸಿಕೊಳ್ಳದೆ ಸುಳ್ಳು ಆರೋಪ ಮಾಡುವುದು ಪ್ರಯೋಜನವಿಲ್ಲ, ರಾಯರೆಡ್ಡಿ ಅಧಿಯಲ್ಲಿ ನಿರ್ಮಾಣವಾಗಿರುವ ಕ್ರೀಡಾಂಗಣದಲ್ಲಿ ಸೌಕರ್ಯಗಳಿಂದ ವಂಚಿತಗೊಂಡಿದೆ. ನಿರ್ಮಾಣ ಮಾಡುವ ವೇಳೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಅಂದೇ  ಮಾಡಿದ್ದರೆ ಇಂದು ಸಾರ್ವಜನಿಕರಿಗೆ ಕ್ರೀಡಾಪಟುಗಳಿಗೆ ತೊಂದರೆಗಳು ಆಗುತ್ತಿರಲಿಲ್ಲ, ಇದನ್ನ ಕಾಂಗ್ರೆಸ್ನವರು ಮನಗಣಬೇಕು ಎಂದರು
ಬಸವರಾಜ ರಾಯರೆಡ್ಡಿ ಅವರ ಅವಧಿಯಲ್ಲಿ ಪಟ್ಟಣಕ್ಕೆ ಎಷ್ಟು ಅನುದಾನ ಬಂದಿದೆ, ಶಾಸಕರು ಸಚಿವರಾಗಿರುವ ಹಾಲಪ್ಪ ಆಚಾರ್ ಅವಧಿಯಲ್ಲಿ  ಈಗ ಎಷ್ಟು ಅನುದಾನ ಬಂದಿದೆ ಅನ್ನೋದನ್ನ ಸಾಲು ಸಾಲು ಅಭಿವೃದ್ಧಿಗಳ ಮೂಲಕ  ನಾವು  ಉತ್ತರ ನೀಡುತ್ತೇವೆ ಇದಕ್ಕೆ ಕಾಂಗ್ರೆಸ್ ನವರು ಉತ್ತರ ನೀಡಬೇಕು, ಪಟ್ಟಣದ ಪ್ರತಿಯೊಂದು ವಾರ್ಡ್ ಗಳಲ್ಲಿ ಕುಡಿಯುವ ನೀರು, ಸಿಸಿ ರಸ್ತೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳು ಕಳೆದ ಎರಡು ವರ್ಷದ ನನ್ನ ಅವಧಿಯಲ್ಲಿ ಅಭಿವೃದ್ಧಿ ಪರ್ವ ನಡೆದಿದೆ. ಸಚಿವರು ಪಟ್ಟಣಕ್ಕೆ ವಿಶೇಷ ಅನುದಾನ ನೀಡಿ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಅಷ್ಟೇ ಅಲ್ಲದೆ ಪಟ್ಟಣದಲ್ಲಿ 200 ಹೆಚ್ಚು  ಸ್ಲಂ ಮನೆಗಳು ನಿರ್ಮಾಣ ಹಂತದಲ್ಲಿವೆ ಇದನ್ನು ಕಾಂಗ್ರೆಸ್ ನವರು ನೋಡಬೇಕು ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ ಮಾತನಾಡಿ, ಮಾಜಿ ಸಚಿವ ಬಸವರಾಜ್ ರಾಯರಡ್ಡಿ ಅವರು ಹಾಲಪ್ಪ ಆಚಾರ್ ಅವರ ಜನಪ್ರಿಯ ಕಾರ್ಯಕ್ರಮಗಳನ್ನು ಸಹಿಸಿಕೊಳ್ಳದೆ ತಮ್ಮ ಪಕ್ಷದ ಕಾರ್ಯಕರ್ತರ ಮೂಲಕ ಜನರಿಗೆ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿರುವುದು ಸರಿಯಲ್ಲ, ಮಾಜಿ ಸಚಿವರು ಅವರ ಅವಧಿಯಲ್ಲಿ ಕಾನೂನನ್ನು ಗಾಳಿಗೆ ತೂರಿ ಉದ್ಘಾಟನೆ ಮತ್ತು ಅನಾವರಣ ಮಾಡಿದ್ದನ್ನ ಕ್ಷೇತ್ರ ಜನರು ಮರೆತಿಲ್ಲ,  ಸರ್ಕಾರಿ ಆಸ್ತಿಗಳಿಗೆ ತಮ್ಮ ತಮ್ಮ ಹೆಸರು ಇಟ್ಟಿರುವುದು ಎಷ್ಟ್ರುಮಟ್ಟಿಗೆ ಸರಿ ಅನ್ನೋದನ್ನ ಅವರೇ ಅರ್ಥ, ಎಂದು ಮಾಜಿ ಸಚಿವರು ವಿರುದ್ಧ ವಾಗ್ದಾಳಿ ನಡೆಸಿದರು.
ವಕೀಲ ಪ್ರಭರಾಜ್ ಕಲಬುರಗಿ ಮಾತನಾಡಿದರು.
ಈ ವೇಳೆ ಕೆಪಿಡಿ ಸದಸ್ಯ ಶಿವಾನಂದ ಬಣಕಾರ, ಸ್ಥಾಯಿ ಸಮಿತಿಯ ಅಧ್ಯಕ್ಷ ಕಳಕಪ್ಪ ತಳವಾರ, ಸದಸ್ಯ ಅಶೋಕ ಅರಕೇರಿ, ಮುಖಂಡರಾದ ಸಿದ್ರಾಮೇಶ ಬೇಲೇರಿ, ದೊಡ್ಡಯ್ಯ ಗುರುವಿನ್, ಕಲ್ಲಪ್ಪ ಕರಮುಡಿ ಹಾಜರಿದ್ದರು.

0/Post a Comment/Comments