ಪತ್ರಕರ್ತರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ


ಪ್ರಗತಿ ವಾಣಿ, ಕೊಪ್ಪಳ

ಯಲಬುರ್ಗಾ: ಕರ್ನಾಟಕ ಕಾರ್ಯ  ನಿರತ ಪತ್ರಕರ್ತರ ಸಂಘದ ತಾಲೂಕು ಘಟಕಕ್ಕೆ ನೂತನ ಉಪಾಧ್ಯಕ್ಷರಾಗಿ ಸಂತೋಷ್ ಬಂಡ್ರಿ ಹಾಗೂ ಸಹ ಕಾರ್ಯದರ್ಶಿಯಾಗಿ ಮಹಾಂತೇಶ ಛಲವಾದಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಕಾರ್ಯಕಾರಣಿ ಮಂಡಳಿಯ ನೂತನ ಸದಸ್ಯರಾಗಿ  ಸ.ಶರಣಪ್ಪ ಪಾಟೀಲ್, ದೊಡ್ಡಬಸಪ್ಪ ಹಕಾರಿ, ಶ್ಯಾಮೀದಸಾಬ ತಾಳಕೇರಿ, ಶಿವಕುಮಾರ ಮ್ಯಾಗೇರಿ, ವೀರೇಶ್ ಸ್ಟಾಂಪಿನ್, ಸದ್ದಾಂಹುಸೇನ್ ಸಂಕನೂರು ಅವರನ್ನು  ನೇಮಕ ಮಾಡಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷರಾದ ಶಿವಮೂರ್ತಿ ಇಟಗಿ ಅಧಿಕೃತವಾಗಿ ಘೋಷಿಸಿದರು.
ಈ ವೇಳೆ ಸಂಘದ ಜಿಲ್ಲಾ ಉಸ್ತುವಾರಿಗಳಾದ  ವ್ಹಿ.ಎಸ್.ಶಿವಪ್ಪಯ್ಯಮಠ, ಪ್ರಧಾನ ಕಾರ್ಯದರ್ಶಿಯಾದ ಮಲ್ಲು ಮಾಟರಂಗಿ, ಗೌರವ ಅಧ್ಯಕ್ಷರಾದ ಇಮಾಮಸಾಬ ಸಂಕನೂರು, ಉಪಾಧ್ಯಕ್ಷರಾದ ಶಿವಪುತ್ರಯ್ಯ ಹಿತ್ತಲಮನಿ, ಈರಣ್ಣ ತೋಟದ್, ಚಂದ್ರಶೇಖರ ಮರದಡ್ಡಿ, ಭೀಮಣ್ಣ ಹವಳಿ ಇದ್ದರು.
--

0/Post a Comment/Comments