ಅಪೌಷ್ಟಿಕತೆ ಹೋಗಲಾಡಿಸಲು ಮೊಳಕೆ ಕಾಳು ವಿತರಣೆ

ಪ್ರಗತಿವಾಣಿ, ಯಲಬುರ್ಗಾ
ವಿದ್ಯಾರ್ಥಿಗಳಲ್ಲಿ ಪೌಷ್ಟಿಕತೆ ಹೆಚ್ಚಿಸಲು ದಾನಿಗಳಿಂದ ಮೊಳಕೆಕಾಳು ವಿತರಿಸಲಾಗುತ್ತಿದೆ ಎಂದು ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ವಿ.ಧರಣಾ, ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ನಂ.೨ ಶಾಲೆಯ ಮಕ್ಕಳಿಗೆ ಶನಿವಾರ ಮೊಳಕೆಕಾಳು ವಿತರಿಸಿ ಮಾತನಾಡಿದರು.
ತಾಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ಕ್ಷೀರಭಾಗ್ಯ, ಬಿಸಿಯೂಟದ ಜತೆಗೆ ದಾನಿಗಳ ಸಹಕಾರದೊಂದಿಗೆ ಪ್ರತಿ ಶನಿವಾರ ಮೊಳಕೆಕಾಳು ವಿತರಣೆ ಮಾಡಲಾಗುತ್ತಿದೆ. ವಾರದಲ್ಲಿ ಒಂದು ದಿನ ಮೊಳಕೆ ಹೊಡೆದ ಕಾಳುಗಳನ್ನು ಮಕ್ಕಳಿಗೆ ನೀಡುವ ಕಾರ್ಯಕ್ರಮವನ್ನು ಸ್ವಯಂ ಪ್ರೇರಿತವಾಗಿ ಆರಂಭಿಸಲಾಗಿದೆ. ಈ ಮೂಲಕ ಮಕ್ಕಳ ಆರೋಗ್ಯ ಕಾಪಾಡಲು ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದರು.
ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗಪ್ಪ ಶ್ಯಾಗೋಟಿ ಮಾತನಾಡಿದರು.

ಎಸ್ಡಿಎಂಸಿ ಅಧ್ಯಕ್ಷ ಮಲ್ಲಪ್ಪ ಸುರಕೋಡ ಅವರು ವಿದ್ಯಾರ್ಥಿಗಳಿಗೆ ಮೊಳಕೆಕಾಳು ದಾನ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ಶಿಕ್ಷಕರು ಅಭಿನಂದಿಸಿದರು.
ಇದೇ‌ ವೇಳೆ ಸದಸ್ಯರಾದ ಕಲ್ಲಪ್ಪ ಕರಮುಡಿ, ರಮೇಶ ಮುಧೋಳ, ನಾಗರಾಜ ವಾಲ್ಮೀಕಿ, ಮುಖ್ಯಶಿಕ್ಷಕ ರಾಮಪ್ಪ ಭಜಂತ್ರಿ, ಶಿಕ್ಷಕರಾದ ವನಜಾಕ್ಷಿ ಬಡಿಗೇರ, ಗೀತಾ ತಿಗರಿ ಶಾರದಾ ತಳವಾರ್ ಸೇರಿದಂತೆ ಇನ್ನಿತರರಿದ್ದರು.
--

0/Post a Comment/Comments