ವಿವಿಧ ಬೇಡಿಕೆ ಈಡೇರಿಕೆಗಾಗಿ ಚಿಕ್ಕಮ್ಯಾಗೇರಿ ಗ್ರಾ.ಪಂ. ಆಡಳಿತ ಮಂಡಳಿಯಿಂದ ಸಚಿವ ಹಾಲಪ್ಪ ಆಚಾರ್‌ಗೆ ಮನವಿ


ಪ್ರಗತಿವಾಣಿ, ಯಲಬುರ್ಗಾ 
ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಿ.ಸಿ ರಸ್ತೆ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಚಿಕ್ಕಮ್ಯಾಗೇರಿ ಗ್ರಾಮ ಪಂಚಾಯತಿ ಆಡಳಿತ ಮಂಡಳಿಯವರು ಸಚಿವ ಹಾಲಪ್ಪ ಆಚಾರ್‌ಗೆ ಭಾನುವಾರ ಯಲಬುರ್ಗಾದಲ್ಲಿ ಮನವಿ ಸಲ್ಲಿಸಿದರು.

ಗ್ರಾಮ ಪಂಚಾಯತಿ ಅಧ್ಯಕ್ಷೆ ಕೆಂಚಮ್ಮ ರಾಮಣ್ಣ ಹಿರೇಮನಿ, ಜಿಪಂ ಮಾಜಿ ಉಪಾಧ್ಯಕ್ಷ ಶಿವಶಂಕರ ದೇಸಾಯಿ ಮಾತನಾಡಿ, ಗ್ರಾಮದಲ್ಲಿ ಸುಮಾರು ಐದಾರು ಸಾವಿರ ಜನಸಂಖ್ಯೆ ಹೊಂದಿದೆ. ಜನರ ಆರೋಗ್ಯದ ಹಿತ ದೃಷ್ಟಿಯಿಂದ  ಪ್ರಾಥಮಿಕ ಆರೋಗ್ಯ ಕೇಂದ್ರದ ಅವಶ್ಯಕತೆ ಇದೆ. ಈ ಕಾರಣದಿಂದಾಗಿ  ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಬೇಕು. ಜೊತೆಗೆ ಒಂದನೇ ವಾರ್ಡಿನ ಪ್ಲಾಟ್ ನ ಸಿ.ಸಿ.ರಸ್ತೆ ಹಾಗೂ ವಿವಿಧ ದೇವಾಲಯಗಳ ಜೀರ್ಣೋದ್ಧಾರ ಹಾಗೆಯೇ ಇನ್ನಿತರ ಗ್ರಾಮದ ಅಭಿವೃದ್ಧಿಗಾಗಿ ಕಾರ್ಯಗಳನ್ನು  ತ್ವರಿತ ಗತಿಯಲ್ಲಿ  ಮಂಜೂರು ಮಾಡಬೇಕು ಎಂದರು. 
ಇದೆ ವೇಳೆ ಗ್ರಾಪಂ ಉಪಾಧ್ಯಕ್ಷ ಶರಣಪ್ಪ ಕುರಿ, ಸದಸ್ಯರಾದ ಶರಣಕುಮಾರ ಅಮರಗಟ್ಟಿ, ಯಮನೂರಪ್ಪ ಕುರಿ, ಶರಣಪ್ಪ ಕರಡದ, ಮುಖಂಡರಾದ ರಾಮಣ್ಣ ಹಿರೇಮನಿ, ತಿಪ್ಪಣ್ಣ ಚವಡಿ ಇದ್ದರು.
--

0/Post a Comment/Comments